ತುಮಕೂರು: ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ನಡಿಗೆ ಕಲ್ಪತರು ನಾಡಿನಲ್ಲಿ ಸಂಚರಿಸುತ್ತಿದ್ದು, ತಿಪಟೂರು ಕಾಂಗ್ರೆಸ್ ಮುಖಂಡ, ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ (ಟುಡಾ ಶಶಿಧರ್) ಯಾತ್ರೆಗೆ ಕಲಾಕೃತಿಗಳ ಅರ್ಥಪೂರ್ಣ ಮೆರಗು ನೀಡಿದ್ದಾರೆ. ಸಿ.ಬಿ.ಶಶಿಧರ್ ಬೆಂಗಳೂರಿನ ಬಿ.ಕಲ್ಚರ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಐಕ್ಯತಾ ಯಾತ್ರಾ ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಗಮನ ಸೆಳೆದಿದೆ. ಸೋಮವಾರ ಹುಳಿಯಾರಿನ ಕೆಂಚಮ್ಮದೇವಸ್ಥಾನ ಕಟ್ಟೆಯಲ್ಲಿ ರಾಹುಲ್ ಗಾಂಧಿ ಈ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ಕಲಾಕೃತಿಗಳ ಪ್ರದರ್ಶನದ ಬಗ್ಗೆ ಮಾತನಾಡಿದ ಶಶಿಧರ್, ಕರ್ನಾಟಕವನ್ನು ಪ್ರವೇಶಿಸಿರುವ ಯಾತ್ರೆಗೆ ಸಾಂಸ್ಕೃತಿಕ ಪ್ರಜ್ಞೆಯ ನೆಲೆಯಲ್ಲಿ ಚಿತ್ರಕಲಾವಿದರು ಸ್ಪಂದಿಸುತ್ತಿರುವುದು ಹೆಮ್ಮೆಯ ವಿಷಯ. ಭಾರತ್ ಜೋಡೋ ಯಾತ್ರೆಯ ವಿಷಯದ ಮೇಲೆ ಚಿತ್ರಕಲಾವಿದರಿಂದ ಕಲಾಕೃತಿಗಳನ್ನು ರೂಪಿಸಿ ಅವುಗಳ ಪ್ರದರ್ಶನ ನಡೆಸುವುದು ನಮ್ಮ ಸಾಮಾಜೊ- ಧಾರ್ಮಿಕ ಜವಬ್ದಾರಿ ಎಂದು ಹೇಳಿದರು. ರಾಜಕೀಯ ಭಯೋತ್ಪಾದನೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ. ನಾಗರಿಕರು ಅಜೆಂಡಾಗಳು ಮತ್ತು ಪಿತೂರಿಗಳಿಗೆ ಬಲಿಯಾಗಿದ್ದಾರೆ. ಸಮುದಾಯಗಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ದೇಶವಾಸಿಗಳ ಮನಸ್ಸು ಮತ್ತು ಹೃದಯಗಳನ್ನು ಒಂದುಗೂಡಿಸುವುದು ಇಂದಿನ ಅಗತ್ಯವಾಗಿದೆ. ‘ಭಾರತ್ ಜೋಡೋ ಯಾತ್ರೆ’ ದೇಶಾದ್ಯಂತ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು. ಇದೀಗ ರಾಜಕೀಯ, ಸಾಮಾಜಿಕ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಬದಲಾವಣೆಗಳು ನವಜಾಗರಣಕ್ಕೆ ಸಜ್ಜಾಗಬೇಕಿದೆ. ಈಗ ನಡೆಯುತ್ತಿರುವ “ಭಾರತ್ ಜೋಡೋ ಯಾತ್ರೆ” ನವಜಾಗರಣ ಯುಗಕ್ಕೆ ಉತ್ತಮ ಆರಂಭ ಒದಗಿಸಿದೆ. ಈ ಪ್ರಯತ್ನದಲ್ಲಿ ಈ ಒಂದು ಹೆಜ್ಜೆ “ದ ರಿನಾಯಸೆನ್ಸ್” ಮನಸುಗಳ ಬೆಸೆಯಲು ನಾಡಿನ ಚಿತ್ರಕಲಾವಿದರ ಸ್ಪಂದನೆ ಸಿಕ್ಕಿರುವುದು ಸಂತಸದ ವಿಷಯವೆಂದರು. ರಾಹುಲ್ ಗಾಂಧಿ ಮೂಲಕ ಈ ಪ್ರದರ್ಶನಕ್ಕೆ ಚಾಲನೆ ಸಿಕ್ಕಿರುವುದು ಸಾರ್ಥಕಭಾವ ಮೂಡಿಸಿದೆ. ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು.
Category: ವ್ಯಕ್ತಿಚಿತ್ರ ಸಾಮಾಜಿಕ, ವಿಶ್ಲೇಷಣೆ,
ಹಿಂದೂ ಎಂಬುದು ಧರ್ಮ ಸೂಚಕ ಪದವಲ್ಲ-ಕುಂ. ವೀರಭದ್ರಪ್ಪ
ಹುಬ್ಬಳ್ಳಿ: ಹಿಂದೂ ಎಂಬುದು ಧರ್ಮ ಸೂಚಕ ಪದವಲ್ಲ. ಅದು ಇರಾಕ್ನಲ್ಲಿರುವ ಪ್ರದೇಶದ ಹೆಸರು. ನಮ್ಮಲ್ಲಿ ಹರಿಯುವುದು ಒಂದೇ ರಕ್ತ, ಅದು ಭಾರತೀಯ…