ಕ್ರೈಸ್ತ ಭಾಂದವರಿಂದ ಗುಡ್‍ಫ್ರೈಡೆ ಆಚರಣೆ

ತುಮಕೂರು- ಏಸುಕ್ರಿಸ್ತ ಶಿಲುಬೆಯಲ್ಲಿ ಮರಣ ಹೊಂದಿದ ದಿನವಾದ ಶುಭ ಶುಕ್ರವಾರವನ್ನು ಕ್ರೈಸ್ತ ಭಾಂದವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಿದರು.

ಕೈಸ್ತ ಬಾಂಧವರು ಅತ್ಯಂತ ಶ್ರದ್ಧೆಯಿಂದ ಉಪವಾಸ ವ್ರತ ಮಾಡಿ ಮಧ್ಯಾಹ್ನದ ವರೆಗೂ ಚರ್ಚ್‍ಗಳಲ್ಲಿ ಸೇರಿ ಏಸು ಕ್ರಿಸ್ತನ ಆರಾಧನೆ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶುಭ ಶುಕ್ರವಾರವನ್ನು ಆಚರಣೆ ಮಾಡಿದರು.

ಚರ್ಚ್‍ಗಳಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಏಸುಕ್ರಿಸ್ತ ಉಪದೇಶಗಳು, ಗುಣಗಳು ಹಾಗೂ ಅವರು ಜೀವಿಸಿದ ರೀತಿಯನ್ನು ತಿಳಿಸಲಾಯಿತು.

ಶುಭ ಶುಕ್ರವಾರಕ್ಕಿಂತ 40 ದಿನ ಮುನ್ನ ಕ್ರೈಸ್ತ ಸಮುದಾಯದಲ್ಲಿ ಉಪವಾಸ ಶುರುವಾಗುತ್ತದೆ. 39ನೇ ದಿನವನ್ನು ಶುಭ ಶುಕ್ರವಾರ ಎಂದು ಆಚರಿಸಲಾಗುತ್ತದೆ.

ನಗರದ ಹೊರಪೇಟೆಯಲ್ಲಿರುವ ಲೂರ್ದುಮಾತೆ ದೇವಾಲಯ ಸೇರಿದಂತೆ ವಿವಿಧ ಚರ್ಚ್‍ಗಳಲ್ಲಿ ಶುಭ ಶುಕ್ರವಾರದ ಅಂಗವಾಗಿ ಏಸುಕ್ರಿಸ್ತನ ಶಿಲುಬೆಯನ್ನು ಚರ್ಚ್ ಸುತ್ತ ಕೊಂಡೊಯ್ದು ಪೂಜೆ ನೆರವೇರಿಸಲಾಯಿತು.

ನಗರದ ವಿವಿಧೆಡೆ ಇರುವ ಚರ್ಚ್‍ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಗುಡ್‍ಫ್ರೈಡೆ ಆಚರಿಸಲಾಗುತ್ತಿದ್ದು, ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಏಸುಕ್ರಿಸ್ತನಿಗೆ ಗೌರವ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *