ತುಮಕೂರು: ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ, ಕೌಶಲ್ಯವನ್ನು ಒಟ್ಟಿಗೆ ರೂಢಿಸುವ ನಿಟ್ಟಿನಲ್ಲಿ ಏಳು ವಿಷಯಗಳನ್ನು ಒಳಗೊಂಡಂತೆ ಸೆಂಟರ್ ಅಫ್ ಎಕ್ಸ್‍ಲೆನ್ಸ್ ಸ್ಥಾಪಿಸಲಾಗಿದೆ ಎಂದು ಎಐಟಿ ಪ್ರಾಂಶುಪಾಲರಾದ ಡಾ.ಎಲ್.ಯತೀಶ್ ತಿಳಿಸಿದರು.
ಎಐಟಿ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಸಿಸ್ಕೋ, ನೆಟ್‍ವರ್ಕಿಂಗ್ ಮತ್ತು ವಿಎಲ್‍ಎಸ್‍ಐ ವಿಷಯಗಳಲ್ಲಿ ಸೆಂಟರ್ ಅಫ್ ಎಕ್ಸ್‍ಲೆನ್ಸ್ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳ ಉದ್ಯೋಗವಕಾಶ ವನ್ನು ಹೆಚ್ಚಿಸುವುದು ಶ್ರೇಷ್ಠತಾ ಕೇಂದ್ರದ ಉದ್ದೇಶವಾಗಿದೆ ಎಂದರು.
ಈ ಮೊದಲು 2009ರಲ್ಲಿಯೇ ಎರಡು ವಿಷಯಗಳಲ್ಲಿ ಸೆಂಟರ್ ಅಫ್ ಎಕ್ಸಲೆನ್ಸ್ ಸ್ಥಾಪಿಸಲಾಗಿತ್ತು. ಈಗ ನಾಲ್ಕು ವಿಷಯಗಳನ್ನು ಸೇರಿಸಲಾಗಿದೆ.2ನೇ ವರ್ಷದಿಂದ ಸೆಮಿಸ್ಟರ್ ರಜೆಯ ಅಂತರದಲ್ಲಿ ಸುಮಾರು 150 ರಿಂದ 300 ತಾಂತ್ರಿಕ ಗಂಟೆಗಳ ಕಾಲ ಕೈಗಾರಿಕಾ ತಜ್ಞರಿಂದ ಈ ಶ್ರೇಷ್ಠತಾ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳು ಪ್ರಸ್ತುತ ಉದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸಲು ಒದಗಿಸಲಾಗುತ್ತದೆ. ಓದಿನ ಜೊತೆ ಜೊತೆಗೆ ಕೌಶಲ್ಯ ತರಬೇತಿಯೂ ದೊರೆಯುವುದರಿಂದ ಅಂತಿಮ ವರ್ಷದಲ್ಲಿ ಉತ್ತಮ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ.ಎಲ್.ಯತೀಶ್ ತಿಳಿಸಿದರು.
ವಿದ್ಯಾರ್ಥಿಗಳ ನಿರ್ಧಿಷ್ಟ ಶÉೈಕ್ಷಣಿಕ ಯೋಜನೆಗಳಿಗೆ ಸಂಬಂಧಿತ ಕಂಪನಿಗಳು ಅವರ ಕಾರ್ಯಕ್ರಮತೆಯ ಮೇಲೆ ವಿದ್ಯಾರ್ಥಿಗಳನ್ನು 8ನೇ ಸೆಮಿಸ್ಟರ್‍ನಲ್ಲಿಯೇ ಶಿಷ್ಯ ವೇತನದ ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಗಳಲ್ಲಿ ಇಂಟರ್ನ್ ಶಿಪ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಅವರನ್ನು ಅದೇ ಕಂಪನಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾರಂಭಿಸಿದ “ಚಿಪ್ ಟು ಸ್ಟಾರ್ಟ್ ಅಪ್ ಕಾರ್ಯಕ್ರಮವು ಭಾರತದಲ್ಲಿ ಸಿಲಿಕಾನ್ ಬಳಕೆಯನ್ನು ಹೆಚ್ಚು ಮಾಡಲು ರೂಪಿಸಿದ ಯೋಜನೆಯಾಗಿದೆ.ಯೋಜನೆಯಡಿಯಲ್ಲಿ, ಭಾರತದಾದ್ಯಂತ 6500 ಕಾಲೇಜುಗಳಲ್ಲಿ 150 ಕಾಲೇಜುಗಳನ್ನು ವಿಎಲ್‍ಎಸ್‍ಐ ಲ್ಯಾಬ್ ಸ್ಥಾಪಿಸಲು ಆಯ್ಕೆ ಮಾಡಲಾಗಿದೆ. ನಮ್ಮ ಕಾಲೇಜು ಕೂಡ ಅವುಗಳಲ್ಲಿ ಒಂದಾಗಿದೆ. ಭಾರತ ಸರಕಾರವು 60 ಲಕ್ಷ ರೂ. ಮೌಲ್ಯದ ಸಂಬಂಧಿತ, ಸಾಫ್ಟ್‍ವೇರ್ (ಕ್ಯಾಡೆನ್ಸ್ ಮತ್ತು ಸಾರಾಂಶ ಸಾಧನ) ಬಳಕೆದಾರ ಪರವಾನಗಿಗಳನ್ನು ಒದಗಿಸಿದೆ ಎಂದರು.

ಈ ಮೇಲಿನ ಪ್ರಯೋಗಾಲಯಗಳ ಮೂಲಕ ತರಬೇತಿಯ ನಂತರ ಗೂಗಲ್, ಐಬಿಎಂ, ಮೈಕ್ರೋಸಾಫ್ಟ್, ಅಮೆಜಾನ್, ಇನ್ಫೋಸಿಸ್, ಇಂಟೆಲ್, ಸಿಸ್ಕೊ, ಬಾμï, ಸೀಮನ್ಸ್, ವಿಪೆÇ್ರ. ಒರಾಕಲ್ ಮುಂತಾದ ಕಂನಿಗಳು ನಮ್ಮ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತವೆ. ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಕ್ಷಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುತ್ತಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದು ಡಾ.ಎಲ್.ಯತೀಶ್ ತಿಳಿಸಿದರು.
ಮಾಜಿ ಮಂತ್ರಿ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸೆಂಟರ್ ಅಫ್ ಎಕ್ಸಲೆನ್ಸ್ ಮೇಕ್ ಇನ್ ಇಂಡಿಯಾದ ಮುಂದುವರೆದ ಭಾಗವಾಗಿದೆ.ಸಿಲಿಕಾನ್ ಆಧಾರಿತ ಉತ್ಪಾಧನಾ ವಲಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಎಐ ಮೂಲಕ ಅಪರಾಧ ತಡೆ ಮತ್ತು ಪತ್ತೆ ಎರಡನ್ನು ಕೂಡ ಅತ್ಯಂತ ನಿಖರವಾಗಿ ಮಾಡುವ ಸಾಪ್ಟವೇರ್‍ನ್ನು ವಿ.ಎಸ್.ಎಲ್.ಐ ಒದಗಿಸಿದೆ.ಇದನ್ನು ಅಭ್ಯಾಸ ಮಾಡುವ ಮೂಲಕ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ಅಲ್ಲದೆ ಅಪರಾಧ ಸಾಕ್ಷಗಳನ್ನು ತಿರುಚುವ ಕೆಲಸಕ್ಕೆ ಕಡಿವಾಣ ಬೀಳಲಿದೆ.ಈ ರೀತಿಯ ತರಬೇತಿಯನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿದರೆ ಮತ್ತಷ್ಟು ದಕ್ಷತೆಯಿಂದ ಪೊಲೀಸ್ ಇಲಾಖೆ ಕೆಲಸ ಮಾಡಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಯತೀಶ ಎಲ್.,ಡಾ. ಚಂಪಕಮಾಲಾ, ಡಾ.ಪುಷ್ಪ ಆರ್, ಡಾ.ನಾಜಿಯಾ ಸುಲ್ತಾನಾ, ಪೆÇ್ರ.ಪದ್ಮಾವತಿ ಎನ್ ಉಪಸ್ಥಿತರಿದ್ದರು.