ತುಮಕೂರು : ಭಾರತ ಚುನಾವಣಾ ಆಯೋಗವು ಘೋಷಿಸಿರುವ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ವೇಳಾಪಟ್ಟಿಯನ್ವಯ ಮತದಾನವು ನವೆಂಬರ್ 13ರಂದು ನಡೆಯಲಿದ್ದು, ಚುನಾವಣೆಯನ್ನು ಶಾಂತಿ, ಮುಕ್ತ, ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಸುಗಮವಾಗಿ ನಡೆಸುವ ಉದ್ದೇಶದಿಂದ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕುಣಿಗಲ್ ತಾಲ್ಲೂಕಿನ 5 ಕಿ.ಮೀ. ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ನವೆಂಬರ್ 11ರ ಸಂಜೆ 5 ರಿಂದ ನ. 13ರ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ/ ಹಂಚಿಕೆ/ಸಾಗಾಣಿಕೆಯನ್ನು ನಿಷೇಧಿಸಿ ಶುಷ್ಕ ದಿನವೆಂದು ಘೋಷಿಸಿ ಅವರು ಆದೇಶಿಸಿದ್ದಾರೆ.