ಗುಬ್ಬಿ ( ಕಾಡಶೆಟ್ಟಿಹಳ್ಳಿ): ಜಾಗತೀಕರಣಗೊಂಡು ಜಗತ್ತು ಒಂದು ಹಳ್ಳಿಯಂತಾಗಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಮಕ್ಕಳಿಗೆ ಭಾರತೀಯ ಜೀವನ ಮೌಲ್ಯಗಳ ಜೊತೆಗೆ, ಇಪ್ಪತ್ತೊಂದನೆಯ ಶತಮಾನದ ಕೌಶಲ್ಯಗಳನ್ನು ಶಾಲೆಗಳಲ್ಲಿ ಕಲಿಸಬೇಕಾಗಿದೆ ಎಂದು ರೋಟರಿ ತುಮಕೂರು ಪೂರ್ವ ಸಂಸ್ಥೆಯ ಅಧ್ಯಕ್ಷ ರೊ. ಚೆನ್ನಬಸವ ಪ್ರಸಾದ್ ತಿಳಿಸಿದರು.
ಅವರು ತಮ್ಮ ಸಂಸ್ಥೆಯ ವತಿಯಿಂದ ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ “ನೇಷನ್ ಬಿಲ್ಡರ್ ಅವಾರ್ಡ್” ನೀಡಿ ಗೌರವಿಸಿ ಮಾತನಾಡುತ್ತಿದ್ದರು.
ಕಾಡಶೆಟ್ಟಿಹಳ್ಳಿಯ ಶಾಲೆಯ ಶಿಕ್ಷಕರು ಬೇರೆ ಶಾಲೆಗಳಂತೆ ಕೇವಲ ಬೋಧನೆ, ಕಂಠಪಾಠ ಮಾಡಿಸುವುದು, ಪರಿಕ್ಷೆ ಬರೆಸಿ ಅಂಕ ನೀಡುವ ಹಳೆಯ ವಿಧಾನವನ್ನು ಬದಿಗೆ ಸರಿಸಿ, ಇಂದಿನ ಶತಮಾನಕ್ಕೆ ಬೇಕಾದ ಜೀವನಮೌಲ್ಯಗಳನ್ನು ಮತ್ತು ಕೌಶಲ್ಯಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ, ಬೋಧಕರಾಗದೆ ಸುಗಮಕಾರರಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು. ಹಾಗೂ ಶಾಲೆಯು ಪಿಎಂ ಶ್ರೀ ಶಾಲೆಯಾಗಿ ಆಯ್ಕೆಯಾಗಿರುವುದು, ಶಾಲೆಯ ಅಭಿವೃದ್ಧಿ ಸಮಿತಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಒಗ್ಗೂಡಿದ ಪ್ರಯತ್ನದ ಫಲವಾಗಿದೆ, ಇದನ್ನು ಎಲ್ಲಾ ವಿದ್ಯಾ ಸಂಸ್ಥೆಗಳು ಅಳವಡಿಸಿಕೊಂಡರೆ ದೇಶದ ಶೈಕ್ಷಣಿಕ ಪ್ರಗತಿಯಾಗಲಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ದಕ್ಷಿಣಾಮೂರ್ತಿರವರು ಮಾತನಾಡಿ ಶಾಲೆಯ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು, ಶಿಕ್ಷಕರ ಚೈತನ್ಯವನ್ನು ಹಾಗೂ ಬದ್ದತೆಯನ್ನು ಹೆಚ್ಚು ಮಾಡಿದೆ ಅದಕ್ಕಾಗಿ ರೋಟರಿ ಪೂರ್ವ ಸಂಸ್ಥೆಗೆ ಶಾಲೆಯ ಎಲ್ಲಾ ಶಿಕ್ಷಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡ ಶಿಕ್ಷಕಿ ನೀಲಾವತಿಯವರು ಮಾತನಾಡಿ ಕಾಡಶೆಟ್ಟಿಹಳ್ಳಿಯ ಈ ಮಾದರಿ ಸರ್ಕಾರಿ ಶಾಲೆಯಲ್ಲಿ ಕೆಸಲಮಾಡಿದ ದಿನಗಳು ನನ್ನ ಜೀವನದ ಅವಿಸ್ಮರಣೀಯ ದಿನಗಳು ಎಂದು ನೆನಪಿಸಿಕೊಂಡರು.
ಅಧ್ಯಕ್ಷತೆವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಕಾಡಶೆಟ್ಟಿಹಳ್ಳಿಯ ಸಾರ್ಕರಿ ಶಾಲೆ “ಉದಯೋನ್ಮುಖ ಭಾರತಕ್ಕಾಗಿ ಪ್ರಾಧನ ಮಂತ್ರಿ ಶಾಲೆ(ಪಿಎಂ ಶ್ರೀ)ಯಾಗಿ ಆಯ್ಕೆಯಾಗಿರುವುದಕ್ಕೆ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ನಿರ್ವಹಿಸುತ್ತಿರುವ ಶಿಕ್ಷಕರು “ಶಿಕ್ಷಕ ವೃತ್ತಿ ನೌಕರಿಯಲ್ಲ, ಅದು ನೆಮ್ಮದಿಯ ನಾಳೆಗಳನ್ನು ಸೃಷ್ಠಿಸುವ ಪವಿತ್ರ ಜವಾಬ್ದಾರಿ” ಎಂಬ ನಂಬಿಕೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದ ಮತು ನಿರ್ವಹಿಸುತ್ತಿರುವುದರ ಫ¯ ಎಂದು ತಿಳಿಸಿದರು, ಹಾಗೂ ಅಂತಹ ಶಿಕ್ಷಕರನ್ನು ಗುರುತಿಸಿ ರೋಟರಿ ತುಮಕೂರು ಪೂರ್ವ ಸಂಸ್ಥೆ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಕಾಡಶೆಟ್ಟಿಹಳ್ಳಿಯ ಸರ್ಕಾರಿ ಶಾಲೆಯ ಅಭಿವೃದ್ಧಿಯಲ್ಲಿ ರೋಟರಿ ಪೂರ್ವ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಹಕಾರ ನೀಡುತ್ತಿರುವುದಕ್ಕೆ ಮಕ್ಕಳ ಮತ್ತು ಪೋಷಕರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ, ತಮ್ಮ ಸಹಕಾರ ನಿರಂತರವಾಗಿರಲೆಂದು ಆಶಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರನ್ನು “ ನೇಷನ್ ಬಿಲ್ಡರ್” ಅವಾರ್ಡ್ ನೀಡಿ ಗೌರವಿಸಲಾಯಿತು. ಹಾಗೂ ಮಕ್ಕಳೇ ಹೊರತರುತ್ತಿರು “ಇಂಗ್ಲೀಷ್ ಪ್ಲಾನೆಟ್” ಎಂಬ ಗೋಡೆ ಪತ್ರಿಕೆಯನ್ನು ಅನಾವರಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ತುಮಕೂರು ಪೂರ್ವದ ಮಾಜಿ ಅಧ್ಯಕ್ಷರಾದ ಸೋಮಶೇಖರ್ ರವರು, ಸಮುದಾಯ ಅಭಿವೃದ್ಧಿ ನಿರ್ದೇಶಕರಾದ ಓಂಕಾರಸ್ವಾಮಿ ರವರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳಾದ ಶ್ರೀಲಕ್ಷ್ಮಿ, ಪುಣ್ಯ, ದೀಕ್ಷಿತ್ ಹಾಗೂ ಕುಮುದ ರವರು ಶಿಕ್ಷಕರ ದಿನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಶರತ್ ಸ್ವಾಗತಿಸಿ, ಧನಲಕ್ಷ್ಮಿ ವಂದಿಸಿದರು, ಕುಮಾರಿ ಪುಷ್ಪ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.