ತುಮಕೂರು : ಮರಿ ಕಡಿದು ಊರ ದೇವರ ಹಬ್ಬ ಮಾಡಿಕೊಂಡು ಉಂಡದ್ದೇ ಚಿನ್ನೇನಹಳ್ಳಿಯಲ್ಲಿ ವಾಂತಿ ಭೇದಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದ್ದು, ಹಬ್ಬ ತಡೆಯಲು ಹೋದ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ಊರವರು ‘ಗುದ್ದು ಮೂಸುಕೋನಿ ಪೋರ’ ಎಂದು ತೆಲುಗಿನಲ್ಲಿ ಬೈದು ಕಳಿಸಿದರೆನ್ನಲಾಗಿದೆ.
ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು 6ಜನ ಸಾವನ್ನಪ್ಪಿ ನೂರಾರು ಜನ ಆಸ್ಪತ್ರೆ ಸೇರಿದ್ದರ ಬಗ್ಗೆ ಮಾಹಿತಿ ಪಡೆಯುತ್ತಾ ಹೋದರೆ ಕಳೆದ ಭಾನುವಾರ ಊರ ಜನರು ಊರ ದೇವರ ಹಬ್ಬ ಮಾಡಿ ಉಂಡ ಮೇಲೆ ವಾಂತಿ ಭೇದಿ ಕಾಣಿಸಿಕೊಂಡಿತು.
ಊರಿನಲ್ಲಿ ಈ ಊರ ಹಬ್ಬ ಮಾಡುವುದಕ್ಕೂ ಮುಂಚೆಯೇ ಒಂದಿಬ್ಬರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಊರ ಹಬ್ಬ ಮಾಡಬೇಡಿ ಎಂದು ಹೇಳಿದ್ದಕ್ಕೆ ಊರ ಮುಖಂಡರುಗಳು ಮಾಕೇಮಿ ಚೆಪ್ಪುತಾವು ‘ಗುದ್ದ ಮುಸುಕೋನಿ ಪೋರಾ’ ಎಂದು ಗದರಿ ಕಳಿಸಿದರೆನ್ನಲಾಗಿದೆ.
ಊರ ದೇವರ ಹಬ್ಬ ಮಾಡಿದ ನಂತರ ಊರಿನಲ್ಲಿ ವಾಂತಿ-ಭೇದಿ ಪ್ರಕರಣಗಳು ಒಮ್ಮೆಲೇ ಹೆಚ್ಚಿ 6 ಜನರ ಸಾವಿಗೂ ಕಾರಣವಾಗಿದ್ದು, ಇಡೀ ರಾಜ್ಯದ ಗಮನವನ್ನು ಸೆಳೆದಿದ್ದು, ನಿನ್ನೆಯ ರಾತ್ರಿಯೂ ಒಬ್ಬರನ್ನು ತುಮಕೂರು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದಾರೆ ಎಂದು ಡಿಹೆಚ್‍ಓ ಮಂಜುನಾಥ ಅವರು ತಿಳಿಸಿದರು.
ಚಿನ್ನೇನಹಳ್ಳಿ ಗ್ರಾಮದಲ್ಲಿ ಹೆಚ್ಚಿನವರು ನಾಯಕ ಜನಾಂಗಕ್ಕೆ ಸೇರಿದವರೇ ಆಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ದೇವರ ಹಬ್ಬ ಮಾಡಿದ್ದು, ಈ ದೇವರ ಹಬ್ಬವೇ ಊರ ಜನರಿಗೆ ವಾಂತಿ-ಭೇದಿಗ ಕಾರಣವೆನ್ನಲಾಗುತ್ತಿದ್ದು, ಊರಿನಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ಮೊಕ್ಕಂ ಹೂಡಿದ್ದು, ನಿನ್ನೆ ಮೂವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥನಾದವರೊಬ್ಬರನ್ನು ತುಮಕೂರು ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಮ ಪಂಚಾಯಿತಿಯವರು ಚಿನ್ನೇನಹಳ್ಳಿ ಗ್ರಾಮದವರಿಗೆ ಬಯಲು ಶೌಚ ಮಾಡಬೇಡಿ ಎಂದು ಎಷ್ಟೇ ಹೇಳಿದರೂ ಓಹೋ ಮಾಕಿ ಚೆಪ್ಪೇಕಿ ವಚ್ಚಿನಾರು ಪೋಂಡ್ರಾ ಪೋಂಡ್ರಾ ಅಂತ ಹೇಳುತ್ತಿದ್ದರಂತೆ, ವಾಂತಿ-ಭೇದಿಗೆ ಬಯಲು ಶೌಚಾಲಯವೂ ಕಾರಣವೆಂದು ಹೇಳಲಾಗುತ್ತಿದೆ.