ಜಗಜೀವನರಾಂ ಅನಾವರಣಗೊಳಿಸಿದ ವಿಗ್ರಹವನ್ನು ದೆಹಲಿ ತಲುಪುವ ಮುನ್ನ ಶುದ್ಧೀಕರಣ-ನಾಡೋಜ ಬರಗೂರು ರಾಮಚಂದ್ರಪ್ಪ

ತುಮಕೂರು : ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರು ಮೂರು ದಶಕಗಳಿಗೂ ಹೆಚ್ಚು ವಿವಿಧ ಪ್ರಧಾನಿಗಳ ಜೊತೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು, ಅವರು ಕಾಶಿಯಲ್ಲಿ ಸಂಪೂರ್ಣನಂದರವರ ವಿಗ್ರಹವನ್ನು ಅನಾವರಣಗೊಳಿಸಿ ದೆಹಲಿ ತಲುಪುವ ಮುಂಚೆಯೇ ಸಂಪೂರ್ಣನಂದರ ವಿಗ್ರಹವನ್ನು ಶುದ್ದಿಕರಿಸಲಾಯಿತು ಇಂದಿಗೂ ಈ ದೇಶದಲ್ಲಿ ಜಾತಿ-ಅಸ್ಪøಶ್ಯತೆ ಆಳದಲ್ಲಿ ಬೇರೂರಿರುವುದು ವಿಷಾದನೀಯ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಅವರಿಂದು ನಗರದ ಕನ್ನಡಭವನದಲ್ಲಿ ಓ.ನಾಗರಾಜು ಅವರ ‘ಹಿಂದೂಪುರ’ ಕಾದಂಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು, ಒಬ್ಬ ಮನುಷ್ಯ ಕೇಂದ್ರ ಸಚಿವರಾಗಿದ್ದಾಗಲೂ ಸಹ ಕರೆಸಬೇಕೆಂಬ ತಾಂತ್ರಿಕ ಕಾರಣಕ್ಕೆ ಕರೆಸಿ, ಇಲ್ಲಿ ಅಶುದ್ಧವಾಗಿ ಬಿಟ್ಟಿದೆ ಅಂತ ಹೇಳಿ ಅವರು ಹೋದ ಮೇಲೆ ಶುದ್ಧಿಕರಣದ ಕೆಲಸವಿದೆಯಲ್ಲಾ ಇದು ಈ ದೇಶದ ಸಾಮಾಜಿಕ ಕಾಳಜಿಗೆ, ಸೌಹಾರ್ದತೆಗೆ, ಸಮಾನತೆಗೆ ಮಾಡಿದಂತಹ ಅವಮಾನ ಇದಾಗಿದೆ, ಅಂತಹ ಅವಮಾನಗಳನ್ನು ಸಹಿಸಿಕೊಂಡು ಬೆಳೆದಂತಹವರು ಜಗಜೀವನರಾಂ ಎಂಬುದು ಬಹಳ ಮುಖ್ಯ ಎಂದರು.

ಬಾಬು ಜಗಜೀವನರಾಂ ಅವರು ಬದುಕಿನುದ್ದಕ್ಕೂ ಧಾರ್ಮಿಕ ಮೂಲಭೂತವಾದವನ್ನು ವಿರೋಧ ಮಾಡಿದಂತಹವರು, ಧಾರ್ಮಿಕ ಮೂಲಭೂತವಾದ ಕೋಮುವಾದವನ್ನು ವಿರೋಧ ಮಾಡಿದಂತಹವರು, ಕೋಮುವಾದವನ್ನು ವಿರೋಧ ಮಾಡದೆಯೇ ಜಗಜೀವನರಾಂ, ಅಂಬೇಡ್ಕರ್ ಹೆಸರೇಳಿದರೆ ಅದು ನಿಜವಾದ ಅಭಿಮಾನವಲ್ಲ, ಜಗಜೀವನರಾಂ ಅವರನ್ನು ಸ್ಮರಿಸುತ್ತೇವೆ ಎನ್ನುವವರು ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವವರು ಆಗಿರಬೇಕು, ಅವರು ಸರ್ವಾಧಿಕಾರವನ್ನು ವಿರೋಧಿಸಿದವರು, ಇಂದಿರಾಗಾಂಧಿಯವರ ಜೊತೆ ಇದ್ದು ಅವರನ್ನು ಬಿಟ್ಟು ಬಂದಂತಹವರು ಜಗಜೀವನ್ ರಾಂ, ಇಂದಿರಾಗಾಂಧಿಯವರನ್ನು ಮೆಚ್ಚಿಯೂ ಅವರನ್ನು ವಿರೋಧಿಸಿ ಬಂದಿದ್ದನ್ನು ಗಮನಿಸಬೇಕು, ಈ ಎರಡು ವಿಷಯಗಳನ್ನು ಜಗಜೀವನರಾಂ ಅವರ ವಿಷಯದಲ್ಲಿ ಅನುಸರಿಸಬೇಕಾದ ಅಂಶಗಳಾಗಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರು ಬಾಬು ಜಗಜೀವನರಾಂ ರಾಜ್ಯ ಪ್ರಶಸ್ತಿಗೆ ಭಾಜನರಾದ ದಲಿತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮತ್ತು ಚಿಂತಕ ಕೆ.ದೊರೈರಾಜ್ ಅವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *