ಆಪ್ತಸ್ನೇಹಿತ ಸುರೇಶಗೌಡ ಯುದ್ದ ನನ್ನ-ನಿನ್ನ ನಡುವೆ, ಮಾನನಷ್ಟ ಮೊಕದ್ದಮ್ಮೆಗೆ ಪಂಥಾಹ್ವಾನ-ಮಾಜಿ ಶಾಸಕ ಡಿ.ಸಿ.ಗೌರಿಶಂಕರ್

ತುಮಕೂರು : ಶಾಸಕ ಬಿ.ಸುರೇಶಗೌಡರನ್ನು ಆಪ್ತಸ್ನೇಹಿತ ಎಂದು ಕುಟುಕುತ್ತಾ ಯುದ್ಧ ನನ್ನ-ನಿನ್ನ ಮಧ್ಯೆ ಇತರರನ್ನು ವೈಯಕ್ತಿವಾಗಿ ನಿಂದಿಸುವುದು ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಸುರೇಶ್‍ಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ, ಮಾನನಷ್ಟ ಮೊಕದ್ದಮ್ಮೆ ಹೂಡಲು ಪಂಥಾಹ್ವಾನ ನೀಡಿದರು.

ಅವರಿಂದು ಶೆಟ್ಟಿಹಳ್ಳಿಯ ತುಮಕೂರು ಗ್ರಾಮಾಂತರ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ 2023ರಲ್ಲಿ ರಾಜಣ್ಣನವರ ಆಶೀರ್ವಾದ ಇಲ್ಲದೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದೆವು, ರಾಜಣ್ಣನವರನ್ನು ಯಾಕೆ ಟೀಕಿಸುವುದಿಲ್ಲ ಎಂದು ಹೇಳಿದ್ದು ಸರಿ, ಇದನ್ನು ಲಿಂಕ್ ಕೆನಾಲ್‍ಗೆ ಯಾಕೆ ಲಿಂಕ್ ಮಾಡುತ್ತೀರ, ರಾಜಣ್ಣನವರ ಆಶೀರ್ವಾದ ಇಲ್ಲದೆ ಇದ್ದರೆ ನಾನು ಶಾಸಕ ಆಗುತ್ತಿರಲಿಲ್ಲ ಅಂತ ನೀವೇ ಹೇಳಿದ್ದೀರ, ಆದ್ದರಿಂದ ಫಿಕ್ಸಿಂಗ್ ರಾಜಕಾರಣದಲ್ಲಿ ಸುರೇಶಗೌಡರು ನಿಸ್ಸೀಮರು ಎಂದು ಗೌರಿಶಂಕರ್ ಲೇವಡಿ ಮಾಡಿದರು. 2013ರಲ್ಲಿ ಮಾಡಿದ ರಸ್ತೆಗಳು ಗುಂಡಿ ಬಿದ್ದಿಲ್ಲ ಎಂದು ಹೇಳಿದ್ದೀರ, ಬನ್ನಿ ಗುಂಡಿ ಬಿದ್ದ ರಸ್ತೆಗಳನ್ನು ತೋರಿಸುತ್ತೇವೆ ಎಂದು ವಿಡಿಯೋ ಪ್ರದರ್ಶಿಸಿದರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ರಾಜಣ್ಣನವರಿಗೆ ಉಷಾರಿಲ್ಲದಿದ್ದರೂ ಅವರ ಮನೆಗೆ ಹೋಗಿ ನಿಮ್ಮ ಆಶೀರ್ವಾದ ಇಲ್ಲದಿದ್ದರೆ ಸೋತು ತಿಮ್ಮ ಆಗಿಬಿಡ್ತೀನಿ ಅಂತ ಕಾಲು ಹಿಡಕೊಂಡಿದ್ದು ಸುಳ್ಳ ಆಪ್ತಸ್ನೇಹಿತ, ಅಧಿಕಾರ ಸಿಗುತ್ತೆ ಅಂದ್ರೆ ಯಾರ ಮನೆಗೆ ಯಾವ ಹೊತ್ತಿನಲ್ಲಿ ಹೋಗುವುದರಲ್ಲಿ ಸುರೇಶಗೌಡ ನಿಸೀಮ ಎಂದು ಜರಿದರು.

ನಾನು ಎಮ್ಮೆಲ್ಲೆ ನಾನು ಎಮ್ಮೆಲ್ಲೆ ಅಂತ ಯಾಕ್ರೀ ಬಾಯಿ ಬಡಿದುಕೊಳ್ಳುತ್ತೀರ, ಚಿಕ್ಕಮಕ್ಕಳಿಗೂ ನೀವು ಎಮ್ಮೆಲ್ಲೇ ಎಂಬುದು ಗೊತ್ತಿದೆ, ಪದೇ ಪದೇ ಎಮ್ಮೆಲ್ಲೇ ಅಂತ ಹೇಳಿಕೊಳ್ಳುತ್ತಾ ನಿಮಗೆ ನೀವೆ ಯಾಕೆ ಹೇಳಿಕೊಳ್ಳುತ್ತೀರ, ಟೀಕೆ ಮಾಡುತ್ತೀರ ಗೌರವಯುತವಾಗಿ ಟೀಕೆ ಮಾಡಿ, ಟೀಕೆಗಳು ಸಾಯುತ್ತವೆ,ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಟೀಕೆಗಳು ಎಂದ ಗೌರಿಶಂಕರ್, , ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಬಗ್ಗೆ ಟೀಕಿಸುವ ನೈತಿಕತೆ ನಿಮಗಿಲ್ಲ, ಪರಮೇಶ್ವರ್ ಸಜ್ಜನ ರಾಜಕಾರಣಿ, ನಿಮ್ಮ ತಂದೆಯ ಸಮಾನರಾದ ಪರಮೇಶ್ವರ್ ಹತ್ತಿರ ಸಜ್ಜನಿಕೆ ಕಲಿಯಿರಿ, ಆಚಾರ-ವಿಚಾರ ಕಲಿಯಿರಿ, ಪರಮೇಶ್ವರ್ ಅವರನ್ನು ನಿಮ್ಮ ಪಕ್ಷದ ಕೇಂದ್ರ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಜ್ಯೋತಿಗಣೇಶ್, ಸೊಗಡು ಶಿವಣ್ಣ ಅವರೇ ಹೊಗಳಿದ್ದಾರೆ, ನಾವು ಪರಮೇಶ್ವರ್‍ರಿಂದ ಕೆಲ ಆದರ್ಶಗಳನ್ನು ಕಲಿಯಲು ಹೋಗುತ್ತೇವೆ, ಅವರೆಂದೂ ಯಾರ ಬಗ್ಗೆಯೂ ಮಾತನಾಡಿ ಎಂದು ಹೇಳಿಲ್ಲ, ಇಲ್ಲಿರುವವರೆಲ್ಲಾ ನಾಯಕರುಗಳು ಎಂದರು.

ಸುರೇಶಗೌಡರಿಗೆ ಇದ್ದಕ್ಕಿದಂತೆ ಗುಬ್ಬಿ ಶಾಸಕರ ಮೇಲೆ ಲವ್ ಜಾಸ್ತಿಯಾಗಿದೆ ಎಂದು ಲೇವಡಿ ಮಾಡಿದ ಗೌರಿಶಂಕರ್, ವಾಸಣ್ಣನಿಗೆ ನಿಮ್ಮಿಂದ ಹೊಗಳಿಸಿಕೊಳ್ಳುವಿಕೆ ಬೀಕಿಲ್ಲ, ಅವರು ಐದು ಬಾರಿ ಶಾಸಕರಾಗಿದ್ದಾರೆ, ವಾಸಣ್ಣ ನನ್ನ ಪರವಾಗಿ ಮಾತನಾಡೆಂದು ಸುರೇಶಗೌಡರಿಗೆ ಗುತ್ತಿಗೆ ಕೊಟ್ಟಿದ್ದಾರ, ಅವರು ಐದು ಬಾರಿ ಶಾಸಕರಾಗಿದ್ದಾರೆ, ನಿನಗೆ ಹೇಳಿ ಕೊಡೋ ಟೈಗರ್ ವಾಸಣ್ಣ ಎಂದು ಚುಚ್ಚಿದರು.

ಇನ್ನ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಹೇಳಿದ್ದೀರ, ‘ಮಾನ’ದ ಅರ್ಥನೇ ಗೊತ್ತಿಲ್ಲದ ಜ್ಞಾನವೇ ಇಲ್ಲದ ಅಜ್ಞಾನಿ ನೀನು ಎಂದು ಏಕ ವಚನದಲ್ಲೇ ಕುಟುಕಿದ ಗೌರಿಶಂಕರ್, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಪ್ರಕಾರ ದೇಶದ ಪ್ರಧಾನಿಗೂ ಒಂದೇ ಕಾನೂನೂ, ನಿನಗೂ-ನನಗೂ ಒಂದೇ ಕಾನೂನು, ಮಾನನಷ್ಟ ಮೊಕದ್ದಮ್ಮೆ ಹೂಡಿ, ನೀವು ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳ ಮೇಲೆ ನೂರಾರು ಮೊಕದ್ದಮ್ಮೆಗಳನ್ನು ಹಾಕಬಹುದು ಮಾನನಷ್ಟ ಮೊಕದ್ದಮ್ಮೆ ಪಂಥಾಹ್ವಾನ ಸ್ವೀಕರಿಸಿರುವುದಾಗಿ ಸುರೇಶಗೌಡ ಅವರಿಗೆ ಚಾಲೆಂಜ್ ಮಾಡಿದರು.

ನೀವು ನಮ್ಮ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದ್ದೀರ, ನಿಮ್ಮ ಮೇಲೂ ನಮಗೆ ವೈಯಕ್ತಿಕ ದ್ವೇಷವಿಲ್ಲ, ನಾನು ಕೇಳುತ್ತಿರುವುದು ನೀವು ಕೊಟ್ಟ ಅಶ್ವಾಸನೆಯಲ್ಲಿ ಒಂದನ್ನಾದರೂ ಈಡೇರಿಸಿ ಎಂದು ಜನರ ಪರವಾಗಿ ಕೇಳುತ್ತಿದ್ದೇನೆ, ರಾಜಕಾರಣದಲ್ಲಿ ಬದಲಾವಣೆ ಜಗದ ನಿಯಮ ಇಂದು ನಾನು ಸೋತಿರಬಹುದು, ನಾಳೆ ನೀನು ಸೋಲಬಹುದು ಅದನ್ನು ಜನರು ತಿರ್ಮಾನ ಮಾಡುತ್ತಾರೆ ದುರಂಕಾರಬೇಡ ಎಂದು ಕುಟುಕಿದರು.
ನನ್ನ ಬಗ್ಗೆ ಮಾತನಾಡಿ, ಯುದ್ಧ ನನ್ನ-ನಿನ್ನ ಮಧ್ಯೆ ಕುಟುಂಬದವರನ್ನು ಯಾಕೆ ಎಳೆದು ತರುತ್ತೀರ, ಮಾನನಷ್ಟ ಮೊಕದ್ದಮ್ಮೆ ಹಾಕಲು ಇದೊಂದೇ ಸಾಕು, ಸುರೇಶಗೌಡ ಇದು ಕೊನೆ ಎಚ್ಚರಿಕೆ, ಅಭಿವೃದ್ಧಿ ಮಾಡಿಲ್ಲ ಎಂಬುದರ ಬಗ್ಗೆ ಯುದ್ಧ, ವೈಯಕ್ತಿಕ ವಿಚಾರವನ್ನು ಮಾತನಾಡುವುದಿಲ್ಲ, ರಾಜಕಾರಣ ನನ್ನ-ನಿನ್ನ ಮಧ್ಯೆ, ಕುಟುಂಬಗಳ ಮಧ್ಯೆಯಲ್ಲ ಎಂದು ಎಚ್ಚರಿಸುತ್ತಿರುವುದಾಗಿ ಗೌರಿಶಮಕರ್ ಸುರೇಶಗೌಡರ ವಿರುದ್ದ ಹರಿಹಾಯ್ದರು.

ನನ್ನ ಬಗ್ಗೆ ಇನ್ನೊಂದು ಇದೆ ಎಂದು ಹೇಳಿದ್ದೀರಿ, ಅದರ ಅರ್ಥವೇನು, ನನ್ನ ಕೊಲೆ ಮಾಡಿಸುತ್ತೀರ, ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡುತ್ತೇನೆ, ನನಗೆ ಪ್ರಾಣಬೆದರಿಕೆಯೇ, ತನಿಖೆಯಾಗಬೇಕು, ನಾಳೆ ದಿನ ನನ್ನ ಪ್ರಾಣಕ್ಕೆ ಹೆಚ್ಚು ಕಡಿಮೆಯಾದರೆ ಸುರೇಶಗೌಡರೇ ಕಾರಣ, ಈ ಹಿನ್ನೆಲೆಯಲ್ಲಿ ತನಿಖೆಗೆ ಮಾಡಿಸುವಂತೆ ದೂರು ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ ಬಿಜೆಪಿ ಮುಖಂಡರಾದ ಆರ್ ಆಶೋಕ್, ವಿ. ಸೋಮಣ್ಣ, ಮಾಜಿ ಶಾಸಕ ಸೊಗಡು ಶಿವಣ್ಣ ಸೇರಿದಂತೆ ಹಲವು ಮುಖಂಡರು ಡಾ.ಜಿ. ಪರಮೇಶ್ವರ್ ಅವರನ್ನು ಅಜಾತಶತ್ರು ಎಂದು ಬಣ್ಣಿಸಿದ್ದಾರೆ. ಹೀಗಿದ್ದರೂ ತುಮಕೂರು ಗ್ರಾಮಾಂತರ ಶಾಸಕ ಸುರೇಶ ಗೌಡ, ಡಾ.ಜಿ. ಪರಮೇಶ್ವರ್ ಅವರನ್ನು ಸುಖಾ ಸುಮ್ಮನೆ ತಾಕತ್ತು, ದಮ್ಮು ಎನ್ನುವ ಪದ ಬಳಕೆ ಮಾಡಿ ತೆಜೋವಧೆ ಮಾಡುತ್ತಿರುವುದು ಖಂಡನಿಯ ಎಂದು ಹೇಳಿದರು.

ಸುರೇಶ್ ಗೌಡ ದಿವಂಗತ ಚನ್ನಿಗಪ್ಪ ಅವರ ಬಗ್ಗೆಯೂ ತುಚ್ಚ್ಯವಾಗಿ ಮಾತನಾಡಿದ್ದಾರೆ, ಈಚೆಗೆ ಶಾಸಕ ಅರೆಹುಚ್ಚನಂತೆ ಮಾತನಾಡುತ್ತಿದ್ದು ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳಲಿಲ್ಲವೆಂದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಾ. ಜಿ. ಪರಮೇಶ್ವರ್ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರು. ಜಿಲ್ಲೆಗೆ ಅವರದೇ ಆದ ಕೊಡುಗೆ ನೀಡಿದ್ದಾರೆ. ತುಮಕೂರು ವಿವಿ ಸ್ಥಾಪನೆ, ತುಮಕೂರಿಗೆ ಮೆಟ್ರೂ ರೈಲು ತರಲು ಡಿಪಿಆರ್ ತಯಾರಿಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತರಲು ಸಹ ಪ್ರಯತ್ನ ನಡೆಯುತ್ತಿದೆ. ಪರಮೇಶ್ವರ್ ಅಭಿವೃದ್ಧಿ ಹರಿಕಾರ. ಅಂತಹ ವ್ಯಕ್ತಿಯನ್ನು ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದರು.

ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಡಾ.ಜಿ. ಪರಮೇಶ್ವರ್ ಅವರ ಬಗ್ಗೆ ನಾವು ಮಾತನಾಡಿದರೆ ನಮ್ಮನ್ನು ಪರಮೇಶ್ವರ್ ಅವರ ಚೇಲಗಳು ಎನ್ನುತ್ತಾರೆ. ನಾವು ಚೇಲಗಳು ಅಲ್ಲ ನಾವು ಕಾಂಗ್ರೆಸ್ ಪಕ್ಷದ ನಾಯಕರು. ಪರಮೇಶ್ವರ್ ಎಂದು ಹೊಂದಾಣಿಕೆ ಮಾಡಿಕೊಂಡ ರಾಜಕಾರಣಿ ಅಲ್ಲ, ಎಲ್ಲಾ ಪಕ್ಷದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಮುರುಳೀಧರ್ ಹಾಲಪ್ಪ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *