ತುಮಕೂರು: ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಉತ್ತಮ ವಿನೂತನ ಯಂತ್ರೋಪಕರಣಗಳ ಸಹಾಯದಿಂದ ಶಸ್ತ್ರಚಿಕಿತ್ಸೆ ಸರಳ ಹಾಗೂ ಸುಲಲಿತವಾಗಿದೆ. ನೇತ್ರ ಶಾಸ್ತ್ರ ಚಿಕಿತ್ಸಾ ವಿಧಾನದ ಬಗ್ಗೆ ನಿರಂತರ ವೈದ್ಯಕೀಯ ಕಾರ್ಯಾಗಾರವು ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣದ ಬಗ್ಗೆ ಮಹತ್ವ ನೀಡಬೇಕು ಹಾಗೂ ತುಮಕೂರು ನೇತ್ರವಿಜ್ಞಾನ ಸೊಸೈಟಿಯ ಅಸೋಸಿಯೇಷನ್ ವೆಬ್‍ಸೈಟ್‍ನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಉದ್ವಾಟಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ನೇತ್ರ ತಜ್ಞ ವಿಭಾಗದ ವತಿಯಿಂದ ತುಮಕೂರು ನೇತ್ರವಿಜ್ಞಾನ ಸೊಸೈಟಿಯ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ನೇತ್ರ ವಿಜ್ಞಾನ ಸಂಘದ ವತಿಯಿಂದ “ನೇತ್ರ ಕಲ್ಪ-2024 ಕತ್ತಲಿನಿಂದ ಬೆಳಕಿನೆಡೆಗೆ” ಬಗ್ಗೆ ಸಿ.ಎಂ.ಇ. ಕಾರ್ಯಾಗಾರವನ್ನು ಫೆ.25 ರಂದು ಭಾನುವಾರ ಬೆಳಿಗ್ಗೆ 8:30 ರಿಂದ 5 ಗಂಟೆಯವರೆಗೆ ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಭರತನಾಟ್ಯ ಮತ್ತು ಜ್ಯೋತಿ ಬೆಳೆಗಿಸುವ ಮುಖಾಂತರ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗಿತ್ತು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಕರ್ನಾಟಕ ನೇತ್ರ ಸಂಸ್ಥೆಯ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸಾದ್ ಕೂಡ್ಲುರವರು ಟಿ.ಓ.ಎಸ್. ಲೋಗೋ ಅನಾವರಣ ಮಾಡಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಅವರು ಕೆ.ಓ.ಎಸ್. ಸಂಸ್ಥೆಯು ರಾಷ್ಟ್ರದಲ್ಲೇ ಅತಿ ಹೆಚ್ಚು ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ 3300 ಸದಸ್ಯರನ್ನು ಒಳಗೊಂಡಿದ್ದು, ಅದೇ ರೀತಿ ತುಮಕೂರಿನ ತುಮಕೂರು ನೇತ್ರವಿಜ್ಞಾನ ಸೊಸೈಟಿಯ ಅಸೋಸಿಯೇಷನ್ ಸಂಸ್ಥೆಯು ಅತಿ ಉತ್ಸಾಹಕತೆಯಿಂದ ಪಾಲ್ಗೊಂಡು ಈ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಮಿಂಟೋ ಪ್ರಾದೇಶಿಕ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಜಿ.ನಾಗರಾಜು, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಆಸ್ಪತ್ರೆಯ ನೇತ್ರ ತಜ್ಞ ವಿಭಾಗದ ಮುಖ್ಯಸ್ಥರಾದ ಡಾ.ಡಿ.ರವಿಪ್ರಕಾಶ್, ಸಂಘಟನಾ ಅಧ್ಯಕ್ಷರಾದ ಡಾ. ಸಂಜಯ್ ಎಂ, ಸಂಘಟನಾ ಕಾರ್ಯದರ್ಶಿಯಾಗಿ ಡಾ.ದಿನೇಶ್ ಕುಮಾರ್, ಖಜಾಂಚಿಯಾಗಿ ಡಾ.ಎಂ.ಜಿ.ಗಂಗಾಧರ್, ವೈಜ್ಞಾನಿಕ ಸಮಿತಿಯಲ್ಲಿ ಡಾ.ಎಸ್.ಮಂಜುನಾಥ್, ಡಾ.ಜಿ.ಭಾನುಶ್ರೀ, ಡಾ.ಕೆ,ಆರ್,ಮಂಜುನಾಥ್, ಸಂಘಟನಾ ಸಮಿತಿಯಲ್ಲಿ ಡಾ.ಲಾವಣ್ಯ ರಮಣ್ ಹುಲಿನಾಯ್ಕರ್, ಡಾ.ರವೀಂದ್ರ, ಡಾ.ಮಹಾದೇವಪ್ಪ, ಡಾ.ಕೆ.ಪಿ.ಕಲ್ಲೇಶ್ವರ್, ಡಾ.ಜಿ.ಎಸ್.ಪ್ರವೀಣ್ ಕುಮಾರ್, ಡಾ.ಸಂದೀಪ್ ಶೆಣೈ ಹಾಗೂ ತುಮಕೂರು ನೇತ್ರ ವಿಜ್ಞಾನ ಸಂಘದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.