ದೇಶದ ಅಭಿವೃದ್ದಿಗೆ ಪೂರಕವಾದ ಜನ ಸಾಮಾನ್ಯರ ಬಜೆಟ್ – ಶಾಸಕ ಜಿ.ಬಿ. ಜ್ಯೋತಿಗಣೇಶ್

 ತುಮಕೂರು :   ಕೇಂದ್ರ ಸರ್ಕಾರದ 2025 - 2026 ರ ಸಾಲಿನ ಬಜೆಟ್ ದೇಶದ ಅಭಿವೃದ್ದಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ É ಹಾಗೂ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲ ಸಿತಾರಾಮಾನ್ ಅಭಿನಂದಿಸಿದ್ದು, ಮಧ್ಯಮ ವರ್ಗದವರು 12 ಲಕ್ಷದ ವರೆಗೂ ಆದಾಯ ಹೊಂದಿರುವವರು, ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. ಮಾರಣಾಂತಿಕ ಖಾಯಿಲೆಗಳಿಂದ ಬದುಕಿಸಬಲ್ಲ 36 ಔಷಧಿಗಳಿಗೆ ಟ್ಯಾಕ್ಸ್ ರದ್ದು ಮಾಡುವ ಮೂಲಕ ದುಬಾರಿ ಚಿಕಿತ್ಸಾ ವೆಚ್ಚದಿಂದ ಬಡ ಹಾಗೂ ಮಧ್ಯಮ ವರ್ಗದವರನ್ನು ಕಾಪಾಡಿದಂತಹ ಬಜೆಟ್ ಇದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.) ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದಲ್ಲಿ 1.5 ಲಕ್ಷ ಅಂಚೆ ಕಛೇರಿಗಳನ್ನು ಹೆಚ್ಚಳ ಮಾಡುವುದು ಮತ್ತೊಂದು ಸಂತಸದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ ರೂ. 7564 ಕೋಟಿ ನೀಡಲಾಗಿದೆ. ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ನೀಡಲಾಗಿದೆ.

ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸಹಕಾರ, ವಾಣಿಜ್ಯ, ವ್ಯಾಪಾರ, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಬಜೆಟ್ ಇದಾಗಿದೆ.  ಒಟ್ಟಾರೆಯಾಗಿ ಕೇಂದ್ರದ ಬಜೆಟ್ ದೇಶದ ಅಭಿವೃದ್ದಿಗೆ ಪೂರಕವಾದ ಜನ ಸಾಮಾನ್ಯರ ಬಜೆಟ್ ಆಗಿದೆ ಎಂದು ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಸಂತಸ ವ್ಯಕ್ತಪಡಿಸಿದ್ದಾರೆ. 

Leave a Reply

Your email address will not be published. Required fields are marked *