ತುಮಕೂರು:ದ್ವಿಚಕ್ರವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ದಂಡ ಹಾಕಿದ ಕಾರಣಕ್ಕೆ ದಂಡ ಕಟ್ಟಲು ಜೋಬಿನಲ್ಲಿ ಹಣವಿಲ್ಲದ ಕಾರಣ, ಪೋನ್ ಪೇ ಮಾಡಲು ಮೊಬೈಲ್ ಸರ್ಚ್ ಮಾಡುತಿದ್ದಾಗ, ಟ್ರಾಫಿಕ್ ಪೊಲೀಸರು ನನ್ನನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಮನಬಂದಂತೆ ಹಲ್ಲೆ ನಡೆಸಿದ್ದು, ಸದರಿ ಪೊಲೀಸರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಲ್ಲೆಗೊಳ್ಳಗಾದ ಯುವಕನ ವಿನೋಧಕುಮಾರ್ ಮನವಿ ಸಲ್ಲಿಸಿದ್ದಾರೆ.
ತುಮಕೂರು ತಾಲೂಕು ಹೆಬ್ಬೂರು ಸಮೀಪದ ಮರಡಿಗರ ಪಾಳ್ಯದ ವಿನೋಧಕುಮಾರ್, ಪ್ರಸ್ತುತ ತುಮಕೂರು ನಗರದ ಜಯಪುರದಲ್ಲಿ ವಾಸವಾಗಿದ್ದು, ಜುಲೈ 18 ರಂದು ಅಂತರಸನಹಳ್ಳಿಯಲ್ಲಿರುವ ಸಿದ್ದಿವಿನಾಯಕ ಮಾರುಕಟ್ಟೆಗೆ ಹೋಗಿ, ಮನೆಗೆ ಬೇಕಾದ ಹೂವು, ಹಣ್ಣು, ತರಕಾರಿ ತೆಗೆದುಕೊಂಡು ಶಿರಾ ರಸ್ತೆಯ ಮೂಲಕ ಬರುವಾಗ ಎಸ್.ಮಾಲ್ ಬಳಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ನನ್ನ ಬಳಿ ಹೆಲ್ಮೇಟ್ ಇಲ್ಲದ ಕಾರಣ, ವಾಹನದ ಕೀ ಕಿತ್ತುಕೊಂಡರು. ಪೊಲೀಸರು ದಂಡ ಹಾಕಿದರೆ ಜೋಬಿನಲ್ಲಿ ಹಣವಿಲ್ಲ,ದಂಡ ಕಟ್ಟುವಷ್ಟು ಹಣ ಪೋನ್ ಪೇ ನಲ್ಲಿ ಇದೆಯೇ ಎಂದು ಚೆಕ್ ಮಾಡುತ್ತಿರುವ ಸಂದರ್ಭದಲ್ಲಿ ಟ್ರಾಫಿಕ್ ಎ.ಎಸ್.ಐ ಮಹಾದೇವಪ್ಪ, ಪಿಸಿ ಭರ್ಕತ್ ಅವರುಗಳು ಯಾರಿಗೆ ಪೋನ್ ಮಾಡುತ್ತೀದ್ದೀಯ ಬೋಳಿ ಮಗನೆ ಎಂದು ನಿಂದಿಸಿದರು.
ಆಗ ನಾನು ನನ್ನಲ್ಲಿ ದಂಡಕಟ್ಟು ಹಣವಿಲ್ಲ. ಪೋನ್‍ನಲ್ಲಿ ಹಣವಿದೆಯೇ ಎಂದು ಚೆಕ್ ಮಾಡುತಿದ್ದೇನೆ ಎಂದು ಹೇಳಿದೆ.ನಿನ್ನದು ಯಾವ ಊರು ಎಂದು ಕೇಳಿದಾಗ ಜಯಪುರ ಎಂದು ಹೇಳಿದೆ.ಒಮ್ಮೆಲೆ ಕೇರಳಿದ ಎಎಸ್‍ಐ ಮಹದೇವಪ್ಪ ಮತ್ತು ಪಿಸಿ ಅವರು ಜಯಪುರದ ನನ್ನ ಮಕ್ಕಳೆಲ್ಲಾ ಹೀಗೆಯೇ,ಹೊಲೆಯ ನನ್ನ ಮಕ್ಕಳ ಎಂದು ಜಾತಿ ನಿಂದನೆ ಮಾಡಿಲ್ಲದೆ, ಅವಾಚ್ಚ ಶಬ್ದಗಳಿಂದ ನಿಂದಿಸಿದರು. ಆಗ ನಾನು ಹೇಲ್ಮೆಟ್ ಹಾಕಿಲ್ಲ ನಿಜ. ದಂಡ ಹಾಕಿ ಕಟ್ಟಲು ತಯಾರಿದ್ದೇನೆ ಏಕೇ ಅಮ್ಮ, ಅಕ್ಕ, ಜಾತಿ ಹೆಸರಿಡಿದು ಬೈಯುತ್ತೀರಿ ಎಂದು ಪ್ರಶ್ನಿಸಿದೆ. ಇದರಿಂದ ಮತ್ತಷ್ಟು ಕೇರಳಿದ ಅವರು, ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು.
ನನಗೆ ಹರ್ನಿಯಾ ಅಪರೇಷನ್ ಆಗಿದೆ ಹೊಡೆಯಬೇಡಿ ಎಂದು ಹೇಳಿದರೂ ಕೇಳದೆ, ಕೈ ಹಿಡಿದ ಎಳೆದಾಡಿ ಬೂಟು ಕಾಲಿನಿಂದ ಒದೆದಿದ್ದಾರೆ. ಇದರಿಂದ ಅಪರೇಷನ್ ಮಾಡಿದ್ದ ಹೊಲಿಗೆಗಳು ಕಿತ್ತು ಹೋಗಿ, ರಕ್ತಶ್ರಾವವಾಗಿರುತ್ತದೆ. ಅನಾವಶ್ಯಕವಾಗಿ ನನ್ನ ಮೇಲೆ ಹಲ್ಲೆ ನಡೆಸಿರುವ ಎಎಸ್‍ಐ ಮಹಾದೇವಪ್ಪ ಮತ್ತು ಪಿಸಿ ಬರ್ಕತ್ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.