ನರೇಗಾ ಹೆಸರು ಬದಲಾವಣೆಗೆ ಕಾಂಗ್ರೆಸ್ ಆಕ್ರೋಶ

ತುಮಕೂರು: ಗ್ರಾಮೀಣ ಬಡಜನರ ಬದುಕಿಗೆ ಆಸರೆಯಾಗಿದ್ದ ನರೇಗಾ ಕಾಯ್ದೆಯನ್ನು ರದ್ದು ಮಾಡಿ, ಅದರ ಬದಲು ವಿಬಿ ಜಿ-ರಾಮ್ ಜಿ ಹೆಸರಿನಲ್ಲಿ ಯೋಜನೆಯೊಂದನ್ನು ಹುಟ್ಟು ಹಾಕಿ, ಬಡಜನರ ಬದುಕನ್ನು ಕಿತ್ತುಕೊಂಡಿರುವ ಕೇಂದ್ರ ಸರಕಾರ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನುಎರಡನೇ ಬಾರಿ ಕೊಲೆ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಸರಕಾರದ ಉದ್ಯೋಗವನ್ನು ಜನರ ಹಕ್ಕು ಎಂದು ಪ್ರತಿಪಾದಿಸುತಿದ್ದ ನರೇಗಾ ಯೋಜನೆಯನ್ನು ರದ್ದು ಮಾಡಿರುವುದರ ವಿರುದ್ದ ಮತ್ತು ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಗ್ರಾಮೀಣ ಜನರ ಕೋರಿಕೆಯ ಮೇರೆಗೆ ಜನರ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುವ ಹಕ್ಕು ಹೊಂದಿದ್ದ ಎಂ.ಎನ್.ಆರ್.ಇ.ಜಿ.ಎ ಕಾಯ್ದೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಕಾರ್ಪೋರೇಟ್ ಸಂಸ್ಕøತಿಗೆ ಬೆಂಬಲವಾಗಿಸುವ ಗುತ್ತಿಗೆ ಆಧಾರಿತ ವಿಬಿ ಜಿ-ರಾಮ್ ಜಿ ಯೋಜನೆ ಜಾರಿಗೆ ತಂದು ಗೋಡ್ಸೆಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ವಿರುದ್ದ ಕಾಂಗ್ರೆಸ್ ಜನರ ಬಳಿಗೆ ಹೋಗಲಿದೆ ಎಂದರು.

ಯುಪಿಎ ಸರಕಾರ 2005 ರಲ್ಲಿ ಜಾರಿಗೆ ತಂದಿದ್ದ ನರೇಗಾ ಕಾಯ್ದೆಯಲ್ಲಿ ಗಾಂಧಿಯ ಸ್ವರಾಜ್ ಕಲ್ಪನೆ ಅಡಗಿತ್ತು. ತಮ ಗ್ರಾಮಕ್ಕೆ ಬೇಕಾದ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಗ್ರಾಮ ಸಭೆಗಳಲ್ಲಿ ಚರ್ಚಿಸಿ, ಅದ್ಯತೆಯ ಮೇಲೆ ಕಾಮಗಾರಿ ನೀಡುವ ಗುರುತರ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ಆದರೆ ಪ್ರಸ್ತುತ ವಿಬಿ ಜಿ-ರಾಮ ಜಿ ಯೋಜನೆಯನ್ನು ಸಂಪೂರ್ಣ ಕೇಂದ್ರಿಕೃತ ಯೋಜನೆಯಾಗಿದ್ದು, ಎಲ್ಲವನ್ನು ಕೇಂದ್ರ ಸರಕಾರವೇ ನಿರ್ಧರಿಸಬೇಕಾಗಿದೆ. ಸ್ಥಳೀಯ ಸಂಸತ್ ಎನ್ನುವ ಗ್ರಾಮ ಸಭೆಗಳಿಗೆ ಯಾವ ಬೆಲೆಯೂ ಇಲ್ಲದಂತಾಗಿದೆ. ಇದೊಂದು ಜನ ವಿರೋಧಿ, ಬಡವರ ವಿರೋಧಿ ಕಾರ್ಯಕ್ರಮವಾಗಿದ್ದು, ಇದನ್ನು ವಾಪಸ್ ಪಡೆಯುವವರೆಗೂ ಕಾಂಗ್ರೆಸ್‍ನ ಹೋರಾಟ ಮುಂದುವರೆಯಲಿದೆ ಎಂದು ಮಯೂರ ಜಯಕುಮಾರ್ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಯುವಕರಿಗೆ ಅವಕಾಶ ನೀಡಬೇಕೆಂಬ ಸದುದ್ದೇಶದಿಂದ ಈ ಬಾರಿಯ ನಾಲ್ಕು ವಿಧಾನ ಪರಿಷತ್ ಚುನಾವಣೆಗೆ ಯುವಕರಿಗೆ ಟಿಕೇಟ್ ನೀಡಿದೆ. ತುಮಕೂರನ್ನು ಒಳಪಡುವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಶಶಿ ಹುಲಿಕುಂಟೆ ಮಠ್ ಅವರಿಗೆ ಟಿಕೇಟ್ ನೀಡಿದೆ. ಇದುವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಆದರೆ ಈ ಇತಿಹಾಸ ಬದಲಾಗಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಂತೆ, ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದು, ಹೊಸ ಇತಿಹಾಸ ಬರೆಯುವಂತೆ ಮುಖಂಡರು, ಕಾರ್ಯಕರ್ತರು ಪರಸ್ವರ ಕೈಜೋಡಿಸಿ ಕೆಲಸ ಮಾಡಬೇಕೆಂದು ಮುಖಂಡರು, ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನರೇಗಾದಿಂದ ಮಹಾತ್ಮಗಾಂಧಿ ಹೆಸರುತೆಗೆಯಲು 2014ರಲ್ಲಿಯೇ ಪ್ರಯತ್ನ ನಡೆದಿತ್ತು.ಆದರೆ ವಿರೋಧಪಕ್ಷಗಳಿಂದ ತೀವ್ರಅಕ್ಷೆಪ ವ್ಯಕ್ತವಾದ ಹಿನ್ನೆಲೆಯಲ್ಲಿಕಾಂಗ್ರೆಸ್ ಪಕ್ಷದ ಸಾಕ್ಷಿಗುಡ್ಡೆಯಾಗಿಅದನ್ನು ಉಳಿಸಿದ್ದರು.ಆದರೆ ಈಗ ಹೆಸರು ಬದಲಾಯಿಸುವ ಮೂಲಕ ಗಾಂಧಿ ವಿರೋಧಿಧೋರಣೆಯನ್ನು ಮುಂದುವರೆಸಿದ್ದಾರೆ.ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಷ್ಟಿಗೆ, ಬಡವರ ಬದುಕಿಗೆಅಸರೆಯಾಗಿದ್ದಎಂಎನ್‍ಆರ್‍ಇಜಿಎ ಪುನರ್ ಸ್ಥಾಪಿಸಬೇಕು ಎಂಬುದು ನಮ್ಮಆಗ್ರಹವಾಗಿದೆಎಂದರು.

ತುಮಕೂರಿನ ಮಹಾತ್ಮ ಗಾಂಧಿಕ್ರೀಡಾಂಗಣದ ಹೆಸರು ಬದಲಾಯಿಸಿಲ್ಲ. ಯಾವುದೇ ಹೆಸರಿಡದ ಒಳಾಂಗಣ ಕ್ರೀಡಾಂಗಣದ ಹೆಸರನ್ನು ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣ ಎಂದು ಹೆಸರಿಸಲಾಗಿದೆ. ಹೇಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ವಾಲ್ ಇರುವಂತೆ, ವಾಕಾಂಡೆಯಲ್ಲಿ ಸುನಿಲ್ ಗವಾಸ್ಕರ್ ಸ್ಟಾಂಡ್ ಇರುವಂತೆ, ಮಹಾತ್ಮಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಸ್ವತಃ ಕ್ರೀಡಾಪಟುವಾಗಿರುವ, ಇಂದಿಗೂ ತನ್ನ ಹೆಸರಿನಲ್ಲಿ ಅಳಿಸಲಾಗದ ಕೂಟ ದಾಖಲೆ ಹೊಂದಿರುವ ಡಾ.ಜಿ.ಪರಮೇಶ್ವರ್ ಹೆಸರಿಡಲಾಗಿದೆ. ಕ್ಷುಲ್ಲಕರಾಜಕಾರಣಕ್ಕೆ ಇದನ್ನು ವಿರೋಧಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕೆಲಸಗಳಿಗೂ ಬಿಜೆಪಿ ಅಡ್ಡಿ ಪಡಿಸುತ್ತಲೇ ಬಂದಿದೆ. ಕಾನೂನು ಪ್ರಕಾರವೇ ಕಾಂಗ್ರೆಸ್ ಭವನಕ್ಕೆ ಜಾಗ ಮಂಜೂರಾಗಿ,ಖಾತೆ ಮಾಡಿಸಿಕೊಳ್ಳಲು ಹೋದಾಗಲು ಅಡ್ಡಿಪಡಿಸಿದ್ದರು. ಜೊತೆಗೆ, ಕ್ರೀಡಾ ಸಂಸ್ಥೆಗಳು, ಕ್ರೀಡಾಪಟುಗಳ ಕೋರಿಕೆ ಮೇರೆಗೆ ಕ್ರೀಡಾಪುಟವಾಗಿರುವ ಡಾ.ಜಿ.ಪರಮೇಶ್ವರ್ ಅವರ ಹೆಸರನ್ನು ಒಳಾಂಗಣ ಕ್ರೀಡಾಂಗಣಕ್ಕೆ ಇಟ್ಟಿರುವುದನ್ನು ಸಹಿಸದೆ ವಿರೋಧಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಪ್ರತಿರೋಧ ತೋರಬೇಕಿದೆ. ವಿಬಿ ಜಿ ರಾಮ ಜಿ ಹೆಸರಿನಲ್ಲಿ ಬಡವರ ಬದುಕಿಗೆ ಕೊಳ್ಳಿ ಇಟ್ಟು, ಈಗ ಮಹಾತ್ಮಗಾಂಧಿ ಸ್ಟೇಡಿಯಂ ಹೆಸರಿನಲ್ಲಿ ಮೊಸಳೆ ಕಣ್ಣೀರು ಹಾಕುತ್ತಿದೆ. ತಮ್ಮ ತಪ್ಪುಗಳನ್ನು ಮರೆ ಮಾಚಲು ಈ ರೀತಿಯ ನಾಟಕ ಮಾಡುತ್ತಿದೆ. ಈ ಬಾರಿಯ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಅಧಿಕೃತ ಅಭ್ಯರ್ಥಿ ಪರ ನಿಂತು ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಆಗ್ನೇಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಕಳೆದ 11 ವರ್ಷಗಳಿಂದ ಪಕ್ಷದ ಶಿಸ್ತಿನ ಶಿಫಾಯಿಯಾಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 2019ರ ವಿಧಾನ ಸಭೆಗೆ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಟಿಕೇಟ್ ಕೇಳಿದ್ದೆ. ಅವಕಾಶ ದೊರೆತಿರಲಿಲ್ಲ. ಈಗ ಪಕ್ಷ ಚುನಾವಣೆ 10 ತಿಂಗಳ ಮುಂಚೆಯೇ ಟಿಕೇಟ್ ಘೋಷಿಸಿದೆ. ಇದರಿಂದ ಪ್ರವಾಸ ಮಾಡಲು ಅನುಕೂಲವಾಗಲಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಜೊತೆ ಕೈಜೋಡಿಸಿ, ಹೊಸ ಇತಿಹಾಸ ನಿರ್ಮಾಣಕ್ಕೆ ಸಹಕರಿಸಿ, ಪದವಿಧರರ ದ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ವಹಿಸಿದ್ದರು. ಮಾಜಿ ಶಾಸಕರಾದ ಡಾ.ರಫೀಕ್‍ಅಹಮದ್, ಕೆ.ಎಸ್.ಕಿರಣಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಡಾ.ಎಸ್.ಷಪಿ ಅಹಮದ್, ಸೂರ್ಯ ಮುಕುಂದರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್, ಪಾಲಿಕೆ ಸದಸ್ಯರಾದ ನಯಾಜ್, ಒಬಿಸಿ ಘಟಕದ ಅನಿಲ್, ಹೆಚ್. ಕೆಂಚಮಾರಯ್ಯ, ಆರ್. ರಾಮಕೃಷ್ಣ, ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *