ತುಮಕೂರು : ಎನ್ ಡಿ.ಎ ಅಭ್ಯರ್ಥಿ ವಿ. ಸೋಮಣ್ಣನವರ ಪರವಾಗಿ ತುಮಕೂರಿನ ಕುಂಚಿಟಿಗರ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ದೇವೇಗೌಡರ ಸಮ್ಮುಖದಲ್ಲೇ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ನಡೆಯಿತು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸಿನ ಐದು ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆ ವಿರುದ್ಧ ಇಂದು ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆ ನಡೆಸಿದ ನಂತರ ಪ್ರಧಾನಿ ಎಚ್ ಡಿ ದೇವೇಗೌಡರು NDA ಅಭ್ಯರ್ಥಿ ವಿ ಸೋಮಣ್ಣನವರ ಪರ ಪ್ರಚಾರ ಸಭೆ ನಡೆಸುತ್ತಿದ್ದ ಸಭೆಯಲ್ಲಿಯೇ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ನುಗ್ಗಿ ದಿಕ್ಕಾರ ಕೂಗಿದರು.
ಕುಮಾರಸ್ವಾಮಿಯವರ ಪರವಾಗಿ ದೇವೇಗೌಡರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಮಹಿಳಾ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತೆಯರನ್ನು ಎಳೆದು ಹೊರ ದಬ್ಬಿದರು.
ಇದರಿಂದ ಪ್ರಚಾರ ಸಭೆಯು ಕೆಲ ಸಮಯ ಗೊಂದಲದಲ್ಲಿ ಮುಳುಗಿತ್ತು.
ಆ ನಂತರ ಬಿಜೆಪಿ, ಜೆಡಿಎಸ್ ಕಾರ್ಯಕರ್ತ ರ ಸಭೆಗೆ ಹೆಚ್ಚಿನ ಪೋಲೀಸ್ ಭದ್ರತೆ ಕಲ್ಪಿಸಲಾಯಿತು.