ಸಂವಿಧಾನ ಬದಲಾವಣೆ ಹೇಳಿಕೆ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಜೆಡಿಎಸ್ ಆಗ್ರಹ

ತುಮಕೂರು:ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕುಎಂದು ಒತ್ತಾಯಿಸಿ ಜಿಲ್ಲಾಜೆಡಿಎಸ್ ಮುಖಂಡರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಭಾರತ ಸಂವಿಧಾನ ಸೂರ್ಯಇದ್ದಂತೆಅದರಿಂದ ಬೆಳಕು ಪಡೆಯಬಹುದಷ್ಟೇ ಮುಟ್ಟಲು ಸಾಧ್ಯವಿಲ್ಲ ಎಂದು ಮುಖಂಡರುಎಚ್ಚರಿಕೆ ನೀಡಿದರು.
ಜಿಲ್ಲಾಜೆಡಿಎಸ್‍ಕಚೇರಿಯಿಂದಜಿಲ್ಲಾಧಿಕಾರಿಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಮುಖಂಡರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದಜಿಲ್ಲಾಜೆಡಿಎಸ್‍ಅಧ್ಯಕ್ಷ ಆರ್.ಸಿ.ಆಂಜನಪ್ಪ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿಉಪಮುಖ್ಯಮಂತ್ರಿಹೇಳಿರುವುದು ಖಂಡನೀಯ, ಕೂಡಲೇಅವರುತಮ್ಮ ಸ್ಥಾನಕ್ಕೆ ರಾಜೀನಾಮೆಕೊಡಬೇಕು.ಸಾಂವಿಧಾನಿಕ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಇಂತಹ ಬಾಲಿಶ ಹೇಳಿಕೆ ನೀಡಿರುವುದುಖಂಡನೀಯಎಂದರು.

ಭಾರತ್‍ಜೋಡೋಯಾತ್ರೆ ಮಾಡಿ ಸಂವಿಧಾನದ ಪ್ರತಿಯನ್ನುಕೈಯಲ್ಲಿ ಹಿಡಿದುಕೊಂಡು ಪ್ರದರ್ಶನ ಮಾಡಿದ ಕಾಂಗ್ರೆಸ್ ನಾಯಕರಉದ್ದೇಶ ಸಂವಿಧಾನರ ಕ್ಷಣೆಗೋ ಅಥವಾ ದುರ್ಬಲಗೊಳಿಸಲೊ ಎಂದು ಹೇಳಬೇಕು.ದೇಶದಎಲ್ಲರೂಗೌರವಿಸುವ ಅಂಬೇಡ್ಕರ್‍ಅವರ ಸಂವಿಧಾನಕ್ಕೆಕಾಂಗ್ರೆಸ್ ನಾಯಕರುಅಪಮಾನ ಮಾಡುತ್ತಿದ್ದಾರೆಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರಅಧಿಕಾರಕ್ಕೆ ಬಂದಾಗಿನಿಂದಯಾವುದೇಅಭಿವೃದ್ಧಿ ಕೆಲಸಗಳಾಗಿಲ್ಲ. ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.ಸ್ಮಾರ್ಟ್ ಮೀಟರ್‍ಟೆಂಡರ್‍ನಲ್ಲಿಇಂಧನ ಸಚಿವಜಾರ್ಜ್ ಮೇಲೆ 15 ಸಾವಿರಕೋಟಿ ರೂ.ಗಳ ಹಗರಣದಆರೋಪ ಕೇಳಿ ಬಂದಿದೆಎಂದು ಆರ್.ಸಿ.ಆಂಜನಪ್ಪ ಆರೋಪಿಸಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದದಲಿತರಿಗೆಅನ್ಯಾಯವಾಗುತ್ತಲೇಇದೆ.ಪರಿಶಿಷ್ಟರ ಹಣ ದುರ್ಬಳಕೆ, ಮಹರ್ಷಿ ವಾಲ್ಮೀಕಿಅಭಿವೃದ್ಧಿ ನಿಗಮದಅನುದಾನದುರುಪಯೋಗ ಮಾಡಿಕೊಂಡಿರುವಕಾಂಗ್ರೆಸ್ ನಾಯಕರು ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ.ಈಗ ಸಂವಿಧಾನ ಬದಲಾವಣೆ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿರುವುದು ಸಹಿಸಲಾಗುವುದಿಲ್ಲ, ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆದುರಾಜ್ಯದಜನರಕ್ಷಮೆ ಕೇಳಬೇಕು ಇಲ್ಲವೇಉಪಮುಖ್ಯ ಮಂತ್ರಿಸ್ಥಾನಕ್ಕೆರಾಜೀನಾಮೆ ನೀಡಬೇಕುಎಂದು ಒತ್ತಾಯಿಸಿದರು.

ರಾಜ್ಯಎಸ್.ಟಿ.ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ ಮಾತನಾಡಿ, ಪ್ರಪಂಚವೇ ಮೆಚ್ಚಿರುವ ಭಾರತ ಸಂವಿಧಾನವನ್ನು ಬದಲಾವಣೆ ಮಾಡಲುಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ಸೂರ್ಯಇದ್ದಂತೆಅದರ ಬೆಳಕಿನಲ್ಲಿ ನಾವು ಬದುಕುಕಾಣಬೇಕು, ಅದನ್ನುಯಾರಾದರೂ ಮುಟ್ಟುವ ಪ್ರಯತ್ನ ಮಾಡಿದರೆ ಸುಟ್ಟುಹೋಗುತ್ತಾರೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು ನಮ್ಮ ಪವಿತ್ರ ಸಂವಿಧಾನಕ್ಕೆ ಮಾಡಿರುವದ್ರೋಹಎಂದರು.

ಎಸ್.ಸಿ. ಘಟಕಜಿಲ್ಲಾಧ್ಯಕ್ಷಎಸ್.ಡಿ.ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಪರಿಶಿಷ್ಟಜಾತಿ, ವರ್ಗಗಳಿಗೆ ಅನ್ಯಾಯಆಗುತ್ತಲೇಇದೆ, ಈ ವರ್ಗಗಳಿಗೆ ಮೀಸಲಾದಅನುದಾನವನ್ನು ಸರ್ಕಾರಅನ್ಯಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ.ಈಗ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿದ್ದಾರೆ.ಅದು ಸಾಧ್ಯವಿಲ್ಲ, ರಾಜ್ಯದಜನಕಾಂಗ್ರೆಸ್ ನಾಯಕರಿಗೆತಕ್ಕ ಪಾಠ ಕಲಿಸುತ್ತಾರೆಎಂದು ಹೇಳಿದರು.

ವಕೀಲರಘಟಕಜಿಲ್ಲಾಧ್ಯಕ್ಷಗೋವಿಂದರಾಜು, ಮುಖಂಡರಾದ ಸೊಗಡು ವೆಂಕಟೇಶ್, ತಾಹೇರಾಕುಲ್ಸಂ ಮೊದಲಾದವರು ಮಾತನಾಡಿದರು.

ಎಸ್.ಸಿ ಘಟಕ ನಗರಅಧ್ಯಕ್ಷ ಭೈರೇಶ್, ಸೇವಾದಳ ಜಿಲ್ಲಾಧ್ಯಕ್ಷಕೆಂಪರಾಜು, ಮಧುಗಿರಿತಾಲ್ಲೂಕುಅಧ್ಯಕ್ಷದೊಡ್ಡೇರಿ ಬಸವರಾಜು, ನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನರಸಿಂಹರಾಜು, ಮಧುಗೌಡ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *