ಸೈಬರ್ ಅಪರಾಧಗಳ ನಿಯಂತ್ರಣ -ಸಂಶೋಧನೆಗೆ ಒತ್ತು : ಡಾ.ಜಿ.ಪರಮೇಶ್ವರ್

ತುಮಕೂರು : ಇಂದು ಜಗತ್ತಿನನಾದ್ಯಾಂತ ಸಮಸ್ಯೆಯಾಗಿರುವ ಸೈಬರ್ ಸೆಕ್ಯೂರಿಟಿ ಅನೇಕ ಸಮಸ್ಯೆಗಳನ್ನು ಪ್ರತಿದಿನ ನೋಡುತ್ತಿದ್ದೇನೆ. ಬ್ಯಾಂಕ್ ವಂಚನೆ, ಸೈಬರ್ ಮತ್ತು ಡಿಜಿಟಲ್ ಅರೆಸ್ಟ್, ಸರ್ಕಾರಿ ಮಾಹಿ, ಗೌಪ್ಯ ಮಾಹಿತಿ ಕಳುವಾಗುತ್ತಿವೆ. ದೇಶದ ಭದ್ರತಾ ವ್ಯವಸ್ಥೆಯನ್ನು ಸೈಬರ್ ದಾಳಿಯಿಂದ ಹಾಳುಮಾಡುವ ಕೆಲಸಗಳಾಗುತ್ತಿವೆ, ಇದಕ್ಕೆ ಪರಿಹಾರ ಕಂಡಕೊಳ್ಳಬೇಕಿದೆ. ಸರ್ಕಾರ ಇದಕ್ಕೆ ಪೂರಕವಾದ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಗಳನ್ನ ಮಾಡುತ್ತಿದೆ ಇದಕ್ಕಾಗಿ ಸಂಶೋಧನಾ ಕೇಂದ್ರಗಳ ಸ್ಥಾಪನೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಡಾ. ಜಿ ಪರಮೇಶ್ವರ್ ಹೇಳಿದರು.

ಅವರಿಂದು ಸಿದ್ಧಾರ್ಥ ಕ್ಯಾಂಪಸ್‍ನಲ್ಲಿ ಆರಂಭಗೊಂಡಿರುವ ‘ಪರಂ ಸೈಬರ್ ಆರ್ಕ್’ ಸೈಬರ್ ಸೆಕ್ಯೂರಿಟಿ ‘ ಕೇಂದ್ರವನ್ನು ಉದ್ಗಾಟಿಸಿ ಮಾತನಾಡಿದರು.

ಇತ್ತೀಚಿಗೆ ಅಹಮ್ಮದ್‍ಬಾದ್‍ನ ಸೈಬರ್ ಸೆಕ್ಯೂರಿಟಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ತಾಂತ್ರಿಕತೆ ಮತ್ತು ಅಳವಡಿಕೆಯನ್ನು ಗಮನಿಸಿದೆ. ಆ ಸೈಬರ್ ಸಂಶೋಧನಾ ಕೇಂದ್ರದಿಂದ ಪ್ರೇರೇಪಿತನಾಗಿ ರಾಜ್ಯದಲ್ಲಿ ಪ್ರತಿμÁ್ಠಪಿಸಬೇಕೆಂಬ ಹೆಬ್ಬಾಕೆಯಾಗಿತ್ತು. ಇದನ್ನ ಸಿಎಂ ಜೊತೆ ಚರ್ಚಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೂ ಅವಕಾಶವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿತವಾದ ಸಂಶೋಧನಾ ಕೇಂದ್ರವಾಗಿದೆ ಎಂದು ಹೇಳಿದರು.

ಚೆನ್ನೈನ ಸ್ಕಿಲ್ಸ್ಡಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಕೊಟ್ಟರಾಮ್ ರಮೇಶ್ ಮಾತನಾಡಿ, ಜಗತ್ತಿನೆಲ್ಲೆಡೆ ಸೈಬರ್ ಹಾವಳಿಯಿದ್ದು, ಇದಕ್ಕೆ ಸೂಕ್ತ ಪರಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಸ್‍ಎಸ್‍ಐಟಿ ಯಲ್ಲಿ ಸೈಬರ್ ಸಂಶೋಧನಾ ಕೇಂದ್ರ ತೆರದಿದ್ದು, ವಂಚನೆ, ಕಳ್ಳತನ ಮತ್ತು ದುರುದ್ದೇಶಪೂರಿತ ದಾಳಿಗಳನ್ನು ಆರ್ಥಿಕ ವ್ಯವಹಾರಗಳ ವಂಚನೆ ಮತ್ತು ದುರುಪಯೋಗ ಪತ್ತೆ ಹಚ್ಚುವುದು, ಸೈಬರ್ ಅಪರಾಧಿಗಳ ಪತ್ತೆ ಮಾಡಿ, ಅವರ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ‘ಪರಂ ಸೈಬರ್ ಆರ್ಕ್’ ಕೇಂದ್ರವನ್ನು ಕೇವಲ 42 ದಿನಗಳಲ್ಲಿ ಕಾರ್ಯಾರಂಭಕ್ಕೆ ಸಜ್ಜುಗೊಳಿಸಲಾಗಿದೆ. ಈ ಸಂಶೋಧನಾ ಕೇಂದ್ರವು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಅಧ್ಯಯನ ನಡೆಸುವವರಿಗೆ ಉತ್ತಮ ವೇದಿಕೆ. ಇದೊಂದು ಜಾಗತಿಕ ಮಟ್ಟದಲ್ಲಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.

ಅಮೇರಿಕಾದ ಪ್ಲೋರಿಡಾ ಇಂಟರ್ ನ್ಯಾಷಿನಲ್ ಯುನಿವರ್ಸಿಟಿಯ ಪ್ರಾಧ್ಯಾಪಕರಾದ ಡಾ. ಎಸ್.ಎಸ್. ಆಯ್ಯಂಗಾರ್ ಮಾತನಾಡಿ, ಸೈಬರ್ ಕ್ಷೇತ್ರದ ಅಪಾಯಗಳನ್ನು ತಪ್ಪಿಸಲು ಡಾ. ಪರಮೇಶ್ವರ ಅವರ ಇಚ್ಚಾಸಕ್ತಿಯಿಂದ ತೆರೆದಿರುವ ಸಂಶೋಧನಾ ಕೇಂದ್ರ ಮುಂದಿನ ಸಂಶೋಧನೆಗಳಿಗೆ ದಿಕ್ಸೂಚಿಯಾಗಲಿದೆ. ತಂತ್ರಜ್ಞಾನ ಬೆಳೆದಂತೆ ಸಮಸ್ಯೆ ಹೆಚ್ಚುತ್ತಿದ್ದು ಇದಕ್ಕೆ ಸಂಶೋಧನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಇಂದಿನ ಡಿಜಿಟಲ್ ಚಾಲಿತ ಜಗತ್ತಿನಲ್ಲಿ ಸೈಬರ್ ಅಪರಾಧವು ವ್ಯಾಪಕ ಮತ್ತು ಬೆಳೆಯುತ್ತಿರುವ ಸಮಸ್ಯೆಯಾಗಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಗಮನಾರ್ಹ ಆರ್ಥಿಕ, ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ. ಸೈಬರ್ ಅಪರಾಧವನ್ನು ಎದುರಿಸಲು ಸೈಬರ್ ಭದ್ರತಾ ಕ್ರಮಗಳು, ಹೆಚ್ಚಿದ ಸಾರ್ವಜನಿಕ ಅರಿವು ಮತ್ತು ದೃಢವಾದ ಕಾನೂನು ಚೌಕಟ್ಟುಗಳನ್ನು ಒಳಗೊಂಡ ಬಹುಮುಖಿ ವಿಧಾನದ ಅಗತ್ಯವಿದೆ, ಜೊತೆಗೆ ಜಾಗತಿಕ ಸಹಕಾರ ಮತ್ತು ಸಹಯೋಗವೂ ಅಗತ್ಯವಿದೆ ಎಂದು ಅವರು ಹೇಳಿದರು.

ಇದೇ ವೇಳೆ ಕ್ಯಾಂಪಸ್‍ನ ಪಿಜಿ ಬ್ಲಾಕ್‍ನಲ್ಲಿ ನೂತನವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಚಾಣುಕ್ಯ ಬ್ಲಾಕ್‍ನ ವಿಸ್ತರಣಾ ಕಟ್ಟಡದ ಉದ್ಘಾಟನೆ ಸಹ ನೆರವೇರಿಸಲಾಯಿತು. ಎಸ್‍ಎಸ್‍ಐಬಿಎಂನ ಪದವಿ ತರಗತಿ ಕೊಠಡಿಗಳಲ್ಲಿ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸ್ಕಿಲ್ಸ್ಡಾ ಸಂಸ್ಥೆಯ ಹಿರಿಯ ಸಂಯೋಜಕ ಕೈಲಾಸ್ ಶಿವನಾಗಿ, ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ.ಅಶೋಕ್ ಮೆಹ್ತಾ, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವಿರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್, ಡಿನ್ ಡಾ. ರೇಣುಕಲತಾ, ಎಸ್ಟೇಟ್ ಅಧಿಕಾರಿ ಡಾ.ಶಿವರಾಜು, ಎಸ್‍ಎಸ್‍ಐಬಿಎಂನ ಪ್ರಾಂಶುಪಾಲರಾದ ಡಾ.ಮಮತಾ ಸೇರಿದಂತೆ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *