ಭಾಷೆಯ ಮೂಲಕ ಸಾಂಸ್ಕøತಿಕ ಶ್ರೀಮಂತಿಕೆ ಸಾಧ್ಯ

ತುಮಕೂರು: ಭಾಷೆ ಸಾಂಸ್ಕøತಿಕ ಪರಂಪರೆಗೆ ತಳಹದಿ. ಭಾಷೆಯಿಂದಲೇ ಸಾಂಸ್ಕøತಿಕ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಂ. ಕೊಟ್ರೇಶ್ ತಿಳಿಸಿದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಹಬ್ಬ ಸಂಕಲ್ಪ-2025, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ 2025-26ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪಠ್ಯಪುಸ್ತಕಗಳಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವುದು ಯುವ ಪೀಳಿಗೆಗೆ ಅಗತ್ಯ. ಪ್ರಾದೇಶಿಕ ಭಾಷೆಗಳಲ್ಲಿ ಜ್ಞಾನದ ಸೃಜನೆ ಆಗಬೇಕು. ಇದರಿಂದ ಎಳೆಯ ತಲೆಮಾರಿನ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ ಎಂದರು.

ಕನ್ನಡವನ್ನು ಕೃತಕ ಬುದ್ಧಿಮತ್ತೆಗೆ ಅಳವಡಿಸಲು ಬಹಳ ಕಷ್ಟ. ಆದರೆ ಇಂಗ್ಲಿμï ಅನ್ನು ಸುಲಭವಾಗಿ ಅಳವಡಿಸಬಹುದು. ಕನ್ನಡದಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಶ್ರೀನಿವಾಸ ಎಸ್., ಮಾತೃಭಾμÉ ನಮ್ಮ ಜೀವಾಳ. ಅದನ್ನು ಹೃದಯದಿಂದ ಮಾತಾಡಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರಸಾಯನಶಾಸ್ತ್ರ ಸಹಪ್ರಾಧ್ಯಾಪಕ ಡಾ. ನರೇಂದ್ರ, ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಶಾಸನಗಳ ಡಿಜಿಟಲೀಕರಣ ಸುಲಭವಾಗಿದೆ. ತಂತ್ರಜ್ಞಾನದಿಂದ ಕನ್ನಡ ಭಾμÉಗೆ ಬಹಳ ಸಹಾಯವಾಗಿದೆ ಎಂದರು.

ಸತ್ಯನಾರಾಯಣ ಕಲಾಸಂಘ ಅಧ್ಯಕ್ಷ ಟಿ. ಕೆ. ಹನುಮಂತರಾವ್, ಪ್ರಾಧ್ಯಾಪಕ ಡಾ. ಪ್ರಕಾಶ್ ಎಂ. ಶೇಟ್, ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಡಾ. ಚೇತನ್ ಪ್ರತಾಪ್, ಡಾ. ಮಂಗಳಾಗೌರಿ ಎಂ., ಡಾ. ರಾಜಲಕ್ಷ್ಮಿ ಎ. ಗೋವನಕೊಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *