ಸಂಕಷ್ಟದಲ್ಲಿದ್ದ ಮಹಿಳೆಗೆ ಜಿಲ್ಲಾಧಿಕಾರಿಗಳಿಂದ ಪಡಿತರ ಚೀಟಿ ವಿತರಣೆ

ತುಮಕೂರು : ಪಡಿತರ ಚೀಟಿ ಇಲ್ಲದೆ ಸಂಕಷ್ಟದಲ್ಲಿದ್ದ ಗುಬ್ಬಿ ತಾಲೂಕಿನ ಡೊಳ್ಳೇನಹಳ್ಳಿ ಗ್ರಾಮದ ಆಯೀಷ ಖಾನ್ ಬಿನ್ ಸೈಯದ್ ಇಸ್ಮಾಲ್ ಅವರ ಬಡ ಕುಟುಂಬಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ವಿತರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಗುರುವಾರ ಪಡಿತರ ಚೀಟಿ ವಿತರಿಸಿದ ನಂತರ ಮಾತನಾಡುತ್ತಾ, ಜಿಲ್ಲಾದ್ಯಂತ ಈಗಾಗಲೇ ಹಮ್ಮಿಕೊಂಡಿರುವ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಸಂಕಷ್ಟದಲ್ಲಿರುವ, ತುರ್ತು ಆರೋಗ್ಯ ಸಮಸ್ಯೆಯಿರುವ ಕುಟುಂಬಗಳಿಗೆ ಆದ್ಯತೆ ಮೇರೆಗೆ ಹೊಸದಾಗಿ ಬಿಪಿಎಲ್ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದೆ. ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ಅಹವಾಲುಗಳಿದ್ದಲ್ಲಿ ಸಾರ್ವಜನಿಕರು ಆಹಾರ ಅದಾಲತ್‍ನಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸೌಮ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *