ಕೋಟಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ-ದಲಿತ ಮುಖಂಡರ ಖಂಡನೆ

ತುಮಕೂರು ಏ.12 : ಸಾಹಿತಿ ಹಾಗೂ ದಲಿತ ಹೋರಾಟಗಾರರಾದ ಕೋಟಗಾನಹಳ್ಳಿ ರಾಮಯ್ಯನವರ ಮೇಲಿನ ಹಲ್ಲೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕತ್ಯಾ ಹೋರಾಟ ಚಾಲನಾ ಸಮಿತಿಯ ತುಮಕೂರು ಶಾಖೆ ತೀವ್ರವಾಗಿ ಖಂಡಿಸಿದೆ.

ಚಿಂತಕ ಕೆ.ದೊರೈರಾಜ್, ನರಸಿಂಹಯ್ಯ, ಎಂ.ಸಿ.ನರಸಿಂಹಮೂರ್ತಿ, ಬಿ.ಹೆಚ್.ಗಂಗಾಧರ್, ನರಸೀಯಪ್ಪ,ಡಾ|| ಡಿ ಮುರಳೀಧರ, ಡಾ|| ಪಾವನ ಸೇರಿದಂತೆ ಹಲವಾರು ದಲಿತ ಮುಖಂಡರುಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಓದಲು ತೊಂದರೆಯಾಗುತ್ತದೆ ದೇವಾಲಯದ ಧ್ವನಿ ವರ್ಧಕದ ಸದ್ದು ಕಡಿಮೆ ಮಾಡುವಂತೆ ಎಂದು ಹೇಳಿದ ಕೋಟಗಾನಹಳ್ಳಿ ರಾಮಯ್ಯ ಮತ್ತು ಅವರ ಪುತ್ರ ಮೇಘವರ್ಷರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಜೀವ ವಿರೋಧಿಯಾಗಿದೆ ಎಂದಿದ್ದಾರೆ.

ಕೋಟಗಾನಹಳ್ಳಿ ರಾಮಯ್ಯನವರು ದಲಿತ ಸಂಘರ್ಷ ಸಮಿತಿಯ ದೊಡ್ಡ ಹೋರಾಟಗಾರರಾಗಿದ್ದು, ನಾಡಿನ ದಲಿತ ಪರ ಸಾಂಸ್ಕøತಿಕವಾಗಿ, ಸಾಹಿತ್ಯಕವಾಗಿ ಚಳುವಳಿ ಕಟ್ಟಿದವರಾಗಿದ್ದು, ಮಾನವೀಯ ನೆಲೆಯೊಳಗೆ ಈ ನಾಡಿನ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ.

ಇಂತಹ ಹೋರಾಟಗಾರರ ಮೇಲೆಯೇ ಹಲ್ಲೆ ಮಾಡಿರುವುದು ಜೀವಪರ ವಿರೋಧಿಯಾಗಿದ್ದು, ಕೇವಲ ಒಂದು ಧ್ವನಿ ವರ್ಧಕ ಸದ್ದನ್ನು ಕಡಿಮೆ ಮಾಡುವಂತೆ ಕೇಳಿದಕ್ಕೆ ಈ ರೀತೀಯ ಹಲ್ಲೆ ನಡೆಸಿರುವವರು ಏನು ಬೇಕಾದರು ಮಾಡಲು ಮುಂದಾಗುವುದರಿಂದ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುವುದಲ್ಲದೆ, ರಾಮಯ್ಯನವರಿಗೆ ಜೀವಕ್ಕೆ ಅಪಾಯವಿರುವುದರಿಂದ ಪೊಲೀಸ್ ರಕ್ಷಣೆ ನೀಡಬೇಕೆಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *