ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತ ಮುಖಂಡರ ಆಕ್ರೋಶ

ತುಮಕೂರು:ಕಾಂಗ್ರೆಸ್ ಪಕ್ಷದಲಿತ ವಿರೋಧಿ, ಕಾಂಗ್ರೆಸ್‍ನವರು ದಲಿತರ ಸಮಾಧಿಯ ಮೇಲೆ ಕುಳಿತು ಅಧಿಕಾರ ನಡೆಸುತ್ತಿದ್ದಾರೆ. ಮತಬ್ಯಾಂಕಿಗಾಗಿದಲಿತರನ್ನು ಓಲೈಸುವ ಕಾಂಗ್ರೆಸ್‍ದಲಿತರಿಗೆಅನ್ಯಾಯ ಮಾಡಿದೆಎಂದುಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಆಪಾದಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಾದ 25 ಸಾವಿರಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡು ದಲಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿರೂ.ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲಿತ ವಿರೋಧಿ ನೀತಿ ಮುಂದುವರೆಸಿದೆ ಎಂದು ಟೀಕಿಸಿದರು.

ಎಸ್ಸಿ ಸಮುದಾಯಕ್ಕೆ ಶೇಕಡ 2ರಷ್ಟು, ಎಸ್ಟಿ ಸಮುದಾಯಕ್ಕೆ ಶೇಕಡ 4ರಷ್ಟು ಮೀಸಲಾತಿ ಹೆಚ್ಚಿಸಿದ್ದು ರಾಜ್ಯದ ಬಿಜೆಪಿ ಸರ್ಕಾರ.ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯಿಂದ ಅಲ್ಲಿನ ದಲಿತರು ಆಡಳಿತ ಸೇವೆಗಳಿಗೆ ಸೇರಲು ಸಹಾಯವಾಗಿದೆ.ಅವರಿಗೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಭಾಗವಹಿಸುವ ಹಕ್ಕು ದೊರಕಿದೆ.ಇದು ಪ್ರಧಾನಿ ನರೇಂದ್ರ ಮೋದಿಯವರಬಿಜೆಪಿ ಸರ್ಕಾರ ದಲಿತರಿಗೆ ಮಾಡಿಕೊಟ್ಟ ಅವಕಾಶ ಎಂದು ವೈ.ಹೆಚ್.ಹುಚ್ಚಯ್ಯ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್‍ಅವರಿಗೆ ಶ್ರೇಷ್ಠ ಗೌರವ ನೀಡುತ್ತಿರುವ ಬಿಜೆಪಿ, ಅಂಬೇಡ್ಕರ್‍ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮೋದಿ ಸರ್ಕಾರ ಪಂಚ ತೀರ್ಥ ಯೋಜನೆ ಪ್ರಾರಂಭಿಸಿದೆ ಎಂದು ತಿಳಿಸಿದ, ವೈ.ಹೆಚ್.ಹುಚ್ಚಯ್ಯ ದಲಿತರ ಬದುಕು ಸುಧಾರಣೆಗೆ ಹಲವಾರು ಯೋಜನೆ ರೂಪಿಸುತ್ತಾ ಅವರ ಏಳಿಗೆಗೆ ಕಾಳಜಿ ಹೊಂದಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ತುಮಕೂರು ಕ್ಷೇತ್ರದಲ್ಲಿ ದಲಿತ ಸಮುದಾಯದವರು ಬಿಜೆಪಿ ವಿ.ಸೋಮಣ್ಣ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಕೋರಿದರು.

ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅವರು ಆರಂಭಿಸಿದ್ದ ಗ್ರಾಮವಾಸ್ತವ್ಯ, ಜನತಾ ದರ್ಶನದಂತಹ ಕಾರ್ಯಕ್ರಮಗಳು ಜನರಿಗೆ ಅನುಕೂಲವಾಗಿ ರಾಜ್ಯದ ಶೇಕಡ 73ರಷ್ಟು ಜನರು ಅವರ ಆಡಳಿತವನ್ನು ಮೆಚ್ಚಿದ್ದ ಬಗ್ಗೆ ಸಮೀಕ್ಷಾ ವರದಿಯಿದೆ. ಈಗ ಕುಮಾರಸ್ವಾಮಿಯವರ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.ಕುಮಾರಸ್ವಾಮಿಯವರು ಮಂಡ್ಯದಲ್ಲಿ, ವಿ.ಸೋಮಣ್ಣನವರು ತುಮಕೂರಿನಲ್ಲಿ ಗೆದ್ದು ಇಬ್ಬರೂ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗುತ್ತಾರೆ.ಆಗ ಅವರ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯದ ಅಭಿವೃದ್ಧಿಗೆ ಈ ನಾಯಕರು ನೆರವಾಗುತ್ತಾರೆ ಎಂದು ಹೇಳಿದರು.

ತುಮಕೂರು ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರದ್ದು ಜಾತ್ಯತೀತ ಮನಸ್ಥಿತಿ, ಅವರು ಯಾವತ್ತೂ ಜಾತಿಯತೆ ಮಾಡಿಲ್ಲ, ಎಲ್ಲಾ ಜಾತಿ ವರ್ಗದವರನ್ನು ಸಮಾನವಾಗಿ ಪ್ರೀತಿಸುವ, ಅಭಿವೃದ್ಧಿಯ ದೂರದೃಷ್ಠಿ ಹೊಂದಿರುವ ನಾಯಕ. ಸೋಮಣ್ಣ ಅವರನ್ನು ಈ ಬಾರಿ ಗೆಲ್ಲಿಸಿದರೆ ತುಮಕೂರು ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ನಿರೀಕ್ಷಿಸಬಹುದು ಎಂದರು.

ಮುಖಂಡ ಅನಿಲ್‍ಕುಮಾರ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡಿ, ಮೀಸಲಾತಿ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡಿ, ದಲಿತ ವರ್ಗವನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.ಯಾರಿಂದಲೂ ನಮ್ಮ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ, ದಲಿತರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡು ಅವರ ಏಳಿಗೆ ಕಡೆಗಣಿಸಿಕೊಂಡು ಬಂದ ಕಾಂಗ್ರೆಸ್‍ನವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಓಂಕಾರ್ ಮಾತನಾಡಿದರು.

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅದ್ಯಕ್ಷ ಹೆಚ್.ಎ.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಆಂಜನಮೂರ್ತಿ, ನಗರ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಹನುಮಂತಪ್ಪ, ವೆಂಕಟೇಶ್, ನಟರಾಜು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *