ಮಧುಗಿರಿ : ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿರುವ ಮಾದಿಗ ಸಮುದಾಯಕ್ಕೆ ಮಾನವೀಯ ನೆಲೆಯಲ್ಲಾದರೂ ನ್ಯಾಯ ಒದಗಿಸಲು ಮುಂದಾಗದ ದಲಿತ ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಎಂದು ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಆರೋಪಿಸಿತು.
ಮಧುಗಿರಿ ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಇಬ್ಬರು ದಲಿತರ ಕೊಲೆ ಖಂಡಿಸಿ ಸಾವಿರಾರು ಮಂದಿ ಪ್ರತಿಭಟನೆಯನ್ನು ನಡೆಸಿದರು, ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಕೇಶವ ಮೂರ್ತಿ ಮಾತನಾಡಿ ಮಧುಗಿರಿ ತಾಲ್ಲೂಕು, ಕೊಡಿಗೇನಹಳ್ಳಿ ಹೋಬಳಿ, ಪೆÇೀಲೇನಹಳ್ಳಿ . ಗ್ರಾಮದಲ್ಲಿ ನೀರಿನ ಬಿಲ್ ಕಟ್ಟಿ ಎಂದು ಗಲಾಟೆ ಮಾಡಿ ನೀರಿನ ಪೈಪ್ ಕಿತ್ತುಹಾಕಿ ಇದೇ ಊರಿನ ರಾಮಕೃಷ್ಣ (ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್) ಆನಂದನ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅದನ್ನು ಹೇಳಲು ಹೋದ ಆನಂದನಿಗೆ ಚಪ್ಪಲಿಯಿಂದ ಹೊಡೆದು ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಕುಟುಂಬಕ್ಕೆ ಸಾಂತ್ವಾನ ಹೇಳುವ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಮಾಡಿಲದಿರುವುದು ಮಾನವೀಯ ವಿರೋಧಿಯಾಗಿದೆ ಎಂದರು.
ಆನಂದ ಅಲ್ಲಿಂದ ಮನೆಗೆ ಹೋಗಬೇಕಾದರೆ ರಾಮಕೃಷ್ಣಪ್ಪ ಅವರ ಮಗ ನಾಗೇಶ ಬುಲೇರೋ ವಾಹನದಲ್ಲಿ ಗುದ್ದಿದ್ದು, ಕೆಳಗೆ ಬಿದ್ದ ಆನಂದ ಬದುಕಿರುವುದನ್ನು ನೋಡಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ನಂತರ ಕೊಡಿಗೇನಹಳ್ಳಿ ಠಾಣೆಗೆ ಹೋಗಿ ಅಪಘಾತ ಮಾಡಿರುವುದಾಗಿ ಶರಣಾಗಿದ್ದಾನೆ. ಹಾಡುಹಗಲಲ್ಲೇ ಪ್ರಕರಣ ನಡೆದಿದ್ದು, ಹೊಟೇಲ್, ಅಂಗಡಿ ತೆರದಿದ್ದರೂ ಸಹ ಸಾಕ್ಷಿ ಹೇಳಲು ಮುಂದೆ ಬಂದಿಲ್ಲ, ಸ್ಪೃಶ್ಯ ಸಮುದಾಯಗಳು ಊರಿನಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ಪಾವಗಡ ತಾಲ್ಲೂಕು ನಿಡಗಲ್ಲು ಹೋಬಳಿ, ಬೆಳ್ಳಿಬಟ್ಲು ಗ್ರಾಮದಲ್ಲಿ ಚಿಕ್ಕಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿರುವಾಗ ವಾಲ್ಮೀಕಿ ಎಂಬ ಯುವಕ ಗಾಡಿಯನ್ನು ಜೋರಾಗಿ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಹನುಮಂತರಾಯಪ್ಪ ಎಂಬುವರು ಗಾಡಿಯನ್ನು ನಿಧಾನಕ್ಕೆ ಓಡಿಸು ಮಕ್ಕಳಿದ್ದಾರೆ ಎಂದು ಪ್ರಶ್ನೆ ಮಾಡಿದ್ದಕ್ಕೆ, ಮಾದಿಗರ ಮಕ್ಕಳು ನಾನು ಬರುವಾಗ ರಸ್ತೆಯಲ್ಲಿ ಆಟವಾಡಬಾರದು. ನಿನಗೆಷ್ಟು ಧೈರ್ಯ. ನನಗೆ ಬುದ್ದಿ ಹೇಳುತ್ತೀಯ ಎಂದು ವಾಲ್ಮೀಕಿ ಎಂಬ ಯುವಕನು ಹನುಮಂತರಾಯಪ್ಪನನ್ನು ದೊಣ್ಣೆಯಿಂದ ಹಿಗ್ಗಾ ಮುಗ್ಗಾ ಥಳಿಸಿ, ನಂತರ ರಾತ್ರಿ ಮನೆಗೆ ಬಂದು ಮನೆ ಒಳಗೆ ಮೊಮ್ಮಕ್ಕಳು ಮತ್ತು ಮಕ್ಕಳು ಮತ್ತು ಅಳಿಯನ ಮುಂದೆ ಮತ್ತೆ ಹಿಗ್ಗಾ ಮುಗ್ಗ ತಳಿಸಿ ಕೊಲೆ ಮಾಡಿರುತ್ತಾನೆ.
ಈ ಎರಡು ಕೊಲೆಗಳಾಗಿದ್ದರೂ ಗೃಹ ಸಚಿವರು ಇದೇ ಜಿಲ್ಲೆಯವರು ಹಾಗೂ ದಲಿತರಾಗಿದ್ದರೂ ದಲಿತ ಕುಟುಂಬಗಳಿಗೆ ಸಾಂತ್ವಾನ ಹೇಳಿಲ್ಲ, ಅಧಿಕಾರಿಗಳೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಮಧುಗಿರಿಯ ಪೊಲೇನಹಳ್ಳಿ ಹಾಗೂ ಪಾವಗಡ ತಾಲ್ಲೂಕಿನ ಬೆಳ್ಳಿಬಟ್ಟಲು ಕೊಲೆ ಘಟನೆಗಳನ್ನು ತನಿಖೆ ನಡೆಸುತ್ತಿರುವ ತನಿಖಾಧಿಕರಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು.
ಪೊಲೇನಹಳ್ಳಿ ಆನಂದನ ಕೊಲೆಗೆ ಸಂಬಂಧಿಸಿದಂತೆ ಕೊಲೆಗೆ ಕುಮ್ಮಕ್ಕು ನೀಡಿರುವ ಕೊಲೆಗಾರ ನಾಗೇಶನ ತಂದೆ-ತಾಯಿಗಳನ್ನು ಸಹ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗರಹಿಸಿದರು.
ಸ್ಥಳೀಯ ಶಾಸಕರುಗಳು ಸಹ ಕೊಲೆಯಾದ ಸಂಬಂಧೀಕರಿಗೆ ಸಾಂತ್ವಾನ ಹೇಳದ ಬಗ್ಗೆ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮನವಿಯನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ಧಗಂಗಪ್ಪ ಸ್ವಾಮೀಜಿ, ಹೋರಾಟ ಸಮಿತಿ ಗೌರವಾಧ್ಯಕ್ಷ ಸತ್ಯಪ್ಪ, ಭರತಕುಮಾರ್ ಬೆಲ್ಲದಮಡು ಮುಂತಾದವರು ಭಾಗವಹಿಸಿದ್ದರು.