ತುಮಕೂರು : ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲಾಗುತ್ತಿರುವ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 12ರಂದು ವೈಭವದ ದಸರಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ತಿಳಿಸಿದರು.

ಅವರಿಂದು ತಮ್ಮ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯಲ್ಲಿ ಸುಮಾರು 30,000-35,000 ಜನರು ಸೇರುವ ನಿರೀಕ್ಷೆಯಿರುವುದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಬಸ್ ಸಂಚಾರ ಮಾರ್ಗವನ್ನು ಬದಲಾಯಿಸಿ ಜಿಲ್ಲಾಧಿಕಾರಿಗಳು ಆದೇಶ ಹ್ರೆರಡಿಸಿರುವ್ಯದಾಗಿ ತಿಳಿಸಿದರು.
ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ಬಸ್ಸ್‍ಗಳು ಜಾಸ್ ಟೋಲ್ – ಕೆ.ಎನ್ ರಾಜಣ್ಣ ರವರ ಮನೆಯ ಮುಂಭಾಗದ ರಸ್ತೆ ಮೂಲಕ ರಿಂಗ್ ರಸ್ತೆಗೆ ಪ್ರವೇಶಿಸಿ, ಗುಬ್ಬಿ ಗೇಟ್ ರಿಂಗ್ ರಸ್ತೆಗೆ ಬರುವುದು.
ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ಬಸ್ಸ್‍ಗಳು ಕುಣಿಗಲ್ ಜಂಕ್ಷನ್ ಮೂಲಕ ಗುಬ್ಬಿ ಗೇಟ್ ರಿಂಗ್ ರಸ್ತೆಗೆ ಬರುವುದು.
ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಬಸ್ಸ್‍ಗಳು ಶಿರಾಗೇಟ್‍ಗೆ ಬಂದು ಶಿರಾಗೇಟ್ 80 ಅಡಿ ರಸ್ತೆ ಮೂಲಕ ಹೊಸ ಔಟರ್ ರಿಂಗ್ ರಸ್ತೆ ಯಿಂದ ಗುಬ್ಬಿ ಗೇಟ್ ರಿಂಗ್ ರಸ್ತೆ ಬರುವುದು.
ಗುಬ್ಬಿ ಕಡೆಯಿಂದ ತುಮಕೂರು ನಗರಕ್ಕೆ ಬರುವ ಬಸ್ಸ್‍ಗಳು ಗುಬ್ಬಿ ಗೇಟ್ ರಿಂಗ್ ರಸ್ತೆವರೆಗೆ ಬರುವುದು.
ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಸೂಚಿಸಲಾಗಿದೆ, ಆದೇಶವನ್ನು ಉಲ್ಲಂಘಿಸಿದವರ ವಿರುದ್ದ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸ್ರಚಿಸಿದ್ದಾರೆಂದು ಎಂದು ಅವರು ತಿಳಿಸಿದರು.