ಡಿ.17 ಗೂಳೂರು ಗಣೇಶ ವಿಸರ್ಜನೆ

ತುಮಕೂರು:ಇತಿಹಾಸ ಪ್ರಸಿದ್ದ ಗೂಳೂರು ಗಣೇಶನ ಉತ್ಸವ ಹಾಗೂ ವಿಸರ್ಜನಾ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 16ರ ಶನಿವಾರ ಮತ್ತು 17ರ ಭಾನುವಾರ ನಡೆಯಲಿದ್ದು,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾಗುವಂತೆ ಶ್ರೀಮಹಾಗಣಪತಿ ಭಕ್ತಮಂಡಳಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಜಿ.ಎಸ್.ಶಿವಕುಮಾರ ಮನವಿ ಮಾಡಿದ್ದಾರೆ.

ದೀಪಾವಳಿಯ ದಿನದಂದ ಆರಂಭಗೊಂಡಿರುವ ಪೂಜೆ ಕಾರ್ತಿಕ ಮಾಸದುದ್ದಕ್ಕೂ ನಡೆದಿದ್ದು,ಹಿರಿಯರ ತೀರ್ಮಾನದಂತೆ ಡಿಸೆಂಬರ್ 16ರ ಶನಿವಾರ ಉತ್ಸವ ನಡೆಸಿ,ಡಿಸೆಂಬರ್ 17ರ ಭಾನುವಾರು ಗೂಳೂರು ಕೆರೆಯಲ್ಲಿ ವಿಸರ್ಜಿಸಲು ತೀರ್ಮಾನಿ ಸಲಾಗಿದೆ.ಡಿಸೆಂಬರ್ 16ರ ಸಂಜೆ ಮಹಾಮಂಗಳಾರತಿಯ ನಂತರ 18 ಕೋಮಿನ ಜನರು ಸೇರಿ ಸಿದ್ದಪಡಿಸಿರುವ ಉತ್ಸವ ರಥದಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ,ರಾತ್ರಿ ಮೂರು ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ವಿವಿಧ ಜಾನಪದ ಮತ್ತು ಸಾಂಸ್ಕøತಿಕ ಕಲಾ ತಂಡಗಳಾದ ಕೀಲುಕುದುರೆ,ಡೊಳ್ಳುಕುಣಿತ,ಚಂಡೆವಾದ್ಯ,ಕೋಲಾಟ,ಗಾರುಡಿಗೊಂಬೆಗಳ ನೃತ್ಯ, ನಾಸಿಕ್‍ಡೋಲ್,ಮಂಗಳವಾದ್ಯ ಹಾಗೂ ಅಕರ್ಷಕ ಸಿಡಿ ಮದ್ದಿನ ಪ್ರದರ್ಶನದ ನಡುವೆ ಸ್ವಾಮಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.ಉತ್ಸವದ ನಂತರ ಊರಿನ ಮದ್ಯಭಾಗದಲ್ಲಿ ರಥವನ್ನು ಕೆಲ ಕಾಲ ಸಾರ್ವಜನಿಕ ಮತ್ತು ಭಕ್ತರ ದರ್ಶನಕ್ಕಾಗಿ ಇಡಲಾಗುವುದು ಎಂದರು.

ಡಿಸೆಂಬರ್ 17ರ ಭಾನುವಾರ ಮದ್ಯಾಹ್ನ 12 ಗಂಟೆಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಗಣೇಶಮೂರ್ತಿಯ ಮೆರವಣಿಗೆ ನಡೆಸಲಿದ್ದು,ಈ ವೇಳೆ ಗ್ರಾಮದ ಮಹಿಳೆಯರು ತಮ್ಮ ಮನೆಗಳ ಮುಂದೆ ತಳಿರು, ತೋರಣಗಳಿಂದ ಸಿಂಗರಿಸಿ,ಬಣ್ಣ,ಬಣ್ಣದ ರಂಗೋಲಿ ಹಾಕಿ ಗಣೇಶಮೂರ್ತಿಗೆ ಹಣ್ಣು,ಕಾಯಿ,ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಕೃತಾರ್ಥ ರಾಗುತ್ತಾರೆ.ಮಧ್ಯಾಹ್ನ ಮೂರುಗಂಟೆಯವರಗೆ ಮೆರವಣಿಗೆ ನಡೆಸಿದ ನಂತರ,ಗೂಳೂರು ಕೆರೆಯಲ್ಲಿ ವಿಸರ್ಜಸ ಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯದಾದ್ಯಂತ ಭಕ್ತರನ್ನು ಹೊಂದಿರುವ ಗೂಳೂರು ಗಣೇಶನ ವಿಸರ್ಜನಾ ಮಹೋತ್ಸವದಲ್ಲಿ ಗೂಳೂರು ಮತ್ತು ಸುತ್ತಮುತ್ತಲ ಗ್ರಾಮಗಳ ಎಲ್ಲಾ ಕೋಮಿನ ಜನರು ಭಾಗವಹಿಸಲಿದ್ದು,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಗೂಳೂರು ಶಿವಕುಮಾರ್ ಮನವಿ ಮಾಡಿದರು.

ಗೂಳೂರು ಗಣೇಶ ಜಾತ್ರಾ ಆಂಗವಾಗಿ ಡಿಸೆಂಬರ್ 18ರ ಸೋಮವಾರ ಬೆಳಗ್ಗೆ 11ಗಂಟೆಗೆ ಶ್ರೀಗೂಳೂರು ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಅಬ್ಬಯ್ಯವಾಯ್ಡು ಕಾರ್ಮಿಕರ ಕಲಾ ಸಂಘದವತಿಯಿಂದ ಭಕ್ತ ಪ್ರಧಾನ ಪೌರಾಣಿಕ ನಾಟಕ ನಲ್ಲತಂಗ ಅಥವಾ ಶನಿಪ್ರಭಾವ ಎಂಬ ನಾಟಕದ ಪ್ರದರ್ಶನವನ್ನು,ಸಂಗೀತ ನಿರ್ದೇಶಕರಾದ ಎಸ್.ಎಲ್ ಲಕ್ಷ್ಮಿನಾರಾಯಣ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿ ನಾಟಕವನ್ನು ವೀಕ್ಷಿಸಿ ಯಶಸ್ವಿಗೊಳಿಸುವಂತೆ ಜಿ.ಎಸ್.ಶಿವಕುಮಾರ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *