ತುಮಕೂರು: ರಾಜ್ಯ ಗ್ರಾಮಪಂಚಾಯತ್ ಸದಸ್ಯರ ಮಹಾ ಒಕ್ಕೂಟ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ ಡಿಸೆಂಬರ್ 25 ಸೋಮವಾರ ಅಬ್ದುಲ್ ನಜೀರ್ ಸಾಬ್ ಜನ್ಮ ದಿನದ ಅಂಗವಾಗಿ ಪಂಚಾಯತ್ ರಾಜ್ ಸಬಲೀಕರಣದಿನಾಚರಣೆ ಹಾಗೂಡಾ.ಚಿಕ್ಕಕೋಮಾದ ಗೌಡ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟಯಲ್ಲಿ ನಡೆಯಲಿದೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.25ರ ಸೋಮವಾರ ಬೆಳಗ್ಗೆ 11ಗಂಟೆಗೆ ಸಮಾರಂಭವನ್ನು ಕರ್ನಾಟಕ ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಉದ್ಘಾಟನೆ ಮಾಡಲಿದ್ದಾರೆ.
ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಪಂಚಾಯತ್
ರಾಜ್ಯ ದಾರಿ ದೀಪ ನಜೀರ್ ಸಾಬ್ ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ಚಿಕ್ಕ ಕೋಮಾರಿ ಗೌಡ ದತ್ತಿ ಪ್ರಶಸ್ತಿ ಪರಸ್ಕಾರವನ್ನು ರಾಜ್ಯ ವಿಕೇಂದ್ರೀಕರಣ ಜನ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ನೀಡಲಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗ್ರಾಮ ಸ್ವರಾಜ್ಯ ಪತ್ರಿಕೆ ಬಿಡುಗಡೆ ಮಾಡಲಿದು,್ದ ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಸಯರಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ ಆಕೊ ಶಾಸಕರಾದ ಸಿ.ಎಸ್.ನಿರಂಜನ ಕುಮಾರ್.,ಡಿ.ಆರ್.ಪಾಟೀಲ್, ಕರ್ನಾಟಕ ಪಂಚಾಯತ್ ರಾಜಾ ಪರಿಷತ್ ಉಪಾಧ್ಯಕ್ಷ ವಿ.ವೈ.ಘೋರ್ಪಡೆ ಕೋಶಾಧ್ಯಕ್ಷ ಡಾ.ಚಿಕ್ಕಕೋಮಾರಿ ಗೌಡ, ಕುಮಾರ ಸ್ವಾಮಿ, ರುಕ್ಷಾಂಗದ ಉಪಸ್ಥಿರಿರುವರು.
ಪ್ರಶಸ್ತಿ ಪುರಸ್ಕøತರು
ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾ ಕರಗೆ ಅತ್ಯುತ್ತಮ ಪಂಚಾಯತ್ ರಾಜ್ ಪ್ರತಿನಿಧಿ ಪ್ರಶಸ್ತಿ. ಮಂಡ್ಯ ಜಿಲ್ಲೆಯ ಕಾಂತಾಪುರ ಗ್ರಾ ಪಂ ಮಾ ಅಧ್ಯಕ್ಷ ನೀಲಾ ಬಿ.ಆರ್. ಗೆ ಅತ್ಯುತ್ತಮ ಮಹಿಳಾ ಪಂಚಾಯತ್ ರಾಜ್ ಜನಪ್ರತಿನಿಧಿ ಪ್ರಶಸ್ತಿ, ವಿಜಯಾ ನಗರ ಜಿಲ್ಲೆಯ ಹಂಪ ಸಾಗರ ಗ್ರಾಪಂ ಮಾಜಿ ಉಪಾಧ್ಯಕ್ಷೆ ಮಮತಾ ತಳವಾರಗೆ ಅತ್ಯುತ್ತಮ ಎಸ್ಸಿ. ಎಸ್ಟಿ ಪಂಚಾಯತ್ ರಾಜ್ ಪ್ರತಿನಿಧಿ ಪ್ರಶಸ್ತಿ. ಕೊಡಗು ಜಿಲ್ಲೆಯ ಹೊದ್ದೂರು ಗ್ರಾಪಂ ಪಿಡಿಒ ಅಬ್ದುಲ್ಲಾ ಎ.ಎ. ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳದ ಉಜಿರೆ ಗ್ರಾಪಂಗೆ ಅತ್ಯುತ್ತಮ ಗ್ರಾಪಂ ಪ್ರಶಸ್ತಿ ಪುರಸ್ಕಾರ ಸಿಕ್ಕಿದೆ.