ತುಮಕೂರು : ಜಿಲ್ಲೆಯ ದಲಿತ ಚಳವಳಿಯ ಪ್ರಮುಖ ಸಂಘಟಕರಾಗಿದ್ದ ರಂಗಸ್ವಾಮಿ ಬೆಲ್ಲದಮಡುರವರ ಬಗ್ಗೆ ವೆಂಕಟಾಚಲ.ಹೆಚ್.ವಿ. ಸಂಪಾದಿಸಿರುವ ‘ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು’ ನೆನಪಿನ ಸಂಪುಟ ಪುಸ್ತಕ ಡಿಸೆಂಬರ್ 6ರ ಶುಕ್ರವಾರ ಬೆಳಿಗ್ಗೆ 10ಗಂಟೆಗೆ ನಗರದ ಟೈನ್ ಹಾಲ್ ಸರ್ಕಲ್‍ನ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ.
ಪುಸ್ತಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಸಾಹಿತಿಗಳಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಬಿಡುಗಡೆಗೊಳಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳು ಹಾಗೂ ಸಂಸ್ಕøತಿ ಚಿಂತಕರಾದ ಪ್ರೊ.ಕಾಳೇಗೌಡ ನಾಗವಾರ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಚಿಂತಕರಾದ ಪ್ರೊ.ಕೆ.ದೊರೈರಾಜ್ ವಹಿಸಿಲಿದ್ದು, ದಲಿತ ಚಳುವಳಿ ಕುರಿತು ಮಾಜಿ ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ಮತ್ತು ದಲಿತ ಹೋರಾಟಗಾರರಾದ ಎನ್.ವೆಂಕಟೇಶ್ ಕೋಲಾರ ಮಾತನಾಡಲಿದ್ದಾರೆ.
ರಂಗಸ್ವಾಮಿಯವರನ್ನು ಕುರಿತು ಕೃಷ್ಣಪ್ಪ ಬೆಲ್ಲದಮಡು, ಶ್ರೀಮತಿ ಗಂಗಮ್ಮ ಎಂ.ಎನ್.ಕೆಂಪಯ್ಯ ಮಾತನಾಡಲಿದ್ದಾರೆ, ಪ್ರಾಸ್ತಾವಿಕ ಮಾತುಗಳನ್ನು ಪಾವನ ಆಸ್ಪತ್ರೆಯ ಡಾ||ಮುರಳೀಧರ್ ಆಡಲಿದ್ದು, ಪುಸ್ತಕದ ಸಂಪಾದಕರಾದ ವೆಂಕಟಾಚಲ.ಹೆಚ್.ವಿ.ಅವರು ಸಂಪಾದಕೀಯ ಮಾತುಗಳನ್ನಾಡಲಿದ್ದಾರೆ. ಕವಿಗಳು ಹಾಗೂ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.