ಚಿಕ್ಕಬಳ್ಳಾಪುರ : ಇಂದು ನಂದಿ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಉತ್ತರ ಜಿಲ್ಲೆ, ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಹೆಸರು ಮರುನಾಮಕರಣಕ್ಕೆ ಇತರೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಅಧಿಕಾರಕ್ಕೆ ಬಂದಮೇಲೆ ಒಂದು ತೀರ್ಮಾನ ಮಾಡಿದ್ವು. ರೆವಿನ್ಯೂ ವಲಯಗಳಲ್ಲಿ ಕ್ಯಾಬಿನೆಟ್ ಮಾಡಬೇಕಂತ ತೀರ್ಮಾನ ಮಾಡಿದ್ವು. ಗುಲ್ಬರ್ಗ ವಿಭಾಗದಲ್ಲಿ ಮಾಡಿದ್ದೇವೆ. ಮೈಸೂರಿನ ಚಾಮರಾಜನಗರ ಜಿಲ್ಲೆಯಲ್ಲಿ ಮಾಡಲಾಗಿದೆ. ಬೆಳಗಾವಿ ಡಿವಿಜನ್ ಕ್ಯಾಬಿನೆಟ್ ನ ಬಿಜಾಪುರದಲ್ಲಿ ಮಾಡಬೇಕಂತ ತೀರ್ಮಾನ ಮಾಡಲಾಗಿದೆ. ನಾಳೆ ಚಿಕ್ಕಬಳ್ಳಾಪುರದ ಮಂತ್ರಿಗಳು ವಿದೇಶಕ್ಕೆ ಹೋಗ್ತಿದ್ದಾರೆ. ಅದಕ್ಕೆ ಇವತ್ತೆ ಕ್ಯಾಬಿನೆಟ್ ಮಾಡ್ತಿದ್ದೇವೆ. ನಾನು ಹೋಗೊದಕ್ಕೆ ಅನುಮತಿ ಕೊಟ್ಟಿದ್ದೇನೆ ಎಂದರು.
ಚಿಂತಾಮಣಿಯಲ್ಲಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಅನುಮೋದನೆ ದೊರೆತಿದೆ. ಚಿಕ್ಕಬಳ್ಳಾಪುರದಲ್ಲಿ ಅಂತರ್ ರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ 141 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು 36 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ಇಂದು ನಂದಿಬೆಟ್ಟದಲ್ಲಿ ಬೆಂಗಳೂರು ರವೆನ್ಯೂ ಡಿವಿಜನ್ ಸಭೆ ನಡೆಸಲಾಯಿತು. ಬೆಂಗಳೂರು ಡಿವಿಜನ್ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಬೇರೆ ಜಿಲ್ಲೆಗಳದ್ದು ತುರ್ತು ಇದ್ರೆ ಚರ್ಚೆ ಮಾಡಲಾಗುತ್ತೆದೆ. 48 ವಿಷಯಗಳನ್ನ ಚರ್ಚೆ ಮಾಡಿದ್ದೇವೆ. ಸುಮಾರು 3400 ಕೋಟಿ ಹಣ ಮಂಜೂರು ಮಾಡಲಾಗಿದೆ.
ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಅದಕ್ಕೆ ಒತ್ತಿ ಒತ್ತಿ ಹೇಳ್ತಿದ್ದೇನೆ. ನಿಮಗೆ ಮನದಟ್ಟು ಆದ್ರೆ ಸಾಕು. ಬೆಂಗಳೂರು ಡಿವಿಜನ್ ಗೆ 2050 ಕೋಟಿ ನೀಡಲಾಗಿದೆ. ಎತ್ತಿನ ಹೊಳೆ ಚರ್ಚೆ ಮಾಡಿದ್ದೇವೆ ಎಂದರು.
ಎತ್ತಿನಹೊಳಿಗೆ ಸಂಬಂಧಿಸಿದಂತೆ ನಾನು ಸಚಿವರು ಮಾತಾಡಿದ್ದೇವೆ. ಎತ್ತಿನ ಹೊಳೆ ಯೋಜನೆಗೆ ಅಂದಾಜು 23,251 ಕೋಟಿ. ಇಲ್ಲಿಯವರೆಗೆ ಖರ್ಚು ಆಗಿರುವ ಹಣ 17 ಸಾವಿರ ಕೋಟಿ ಖರ್ಚಾಗಿದೆ. ಇನ್ನೂ ಆರು ಸಾವಿರ ಕೋಟಿ ಒಳಿದಿದೆ. ಇದು ಮೂಲತಃ ಕುಡಿಯುವ ನೀರಾವರಿ ಯೊಜನೆಯಾಗಿದೆ. ಆದ್ರೆ ಕೆರೆಗಳಿಗೆ 50% ನೀರು ತುಂಬಿಸುತ್ತೇವೆ ಎಂದು ಹೇಳಿದ್ದೇವೆ. ಕುಡಿಯುವ ನೀರು ಕೆರೆ ತುಂಬಿಸೊದಕ್ಕೆ 24.1 ಟಿಎಂಸಿ ನೀರು ಬೇಕಾಗಿದೆ. ಕುಡಿಯುವ ನೀರಿಗೆ 14 ಟಿಎಂಸಿ ಬೇಕಾಗಿದೆ. ಮೊದಲು ಕುಡಿಯುವ ನೀರಿನ ಯೋಜನೆ ಮುಗಿಸುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಲ್ಲಿ ಕುಡಿಯುವ ನೀರನ್ನ ಕೊಡ್ತೀವಿ. ಮುನಿಯಪ್ಪನವರು 24 ಗಂಟೆ ರಾಜಕೀಯ ಯೋಚನೆ ಮಾಡ್ತಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಸ್ಯ ಮಾಡಿದರು.
ಇನ್ನೂ ಎರಡು ವರ್ಷಗಳಲ್ಲಿ ಕುಡಿಯುವ ನೀರಿನ ಯೋಜನೆಯನ್ನ ಮುಗಿಸಿ ಜಿಲ್ಲೆ ತಾಲ್ಲೂಕಿಗೆಲ್ಲಾ ನೀರು ಕೊಡ್ತಿವಿ. ಕುಡಿಯುವ ನೀರಿಗೆ ತೊಂದರೆ ಇಲ್ಲ. ನೀರು ಎಲ್ಲಿದೆ ಕೊಡೊಕೆ ಎಂದು ವಿರೋದ ಮಾಡ್ತಾರೆ. ಈಗಾಗಲೇ 82% ಕೆಲಸ ಮುಗಿದಿದೆ. 9807 ಕೋಟಿ ಹಣ ಖರ್ಚಾಗಿದೆ. ಮದುಗಿರಿ, ಪಾವಗಡ, ಟಿಜಿ ಹಳ್ಳಿ ರಾಮನಗರ ಗೌರಿಬಿದನೂರು ಕೊರಟಗೆರೆ ಯಲ್ಲಿ 96% ಕೆಲಸ ಮುಗಿದಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಸುಮಾರು 8000 ಕೋಟಿ ಬೇಕು. ನಮ್ಮಲ್ಲಿ ಆರು ಸಾವಿರ ಕೋಟಿ ಉಳಿದಿದೆ. ಭೂಮಿ ಬೆಲೆಯಿಂದ ನಮಗೆ ಜಾಸ್ತಿಯಾಗಿದೆ. 75 ಲಕ್ಷ ಮನೆಗಳಿಗೆ, 9 ಜಿಲ್ಲೆಗಳಿಗೆ, 75 ಲಕ್ಷ ಜನರಿಗೆ ಕುಡಿಯುವ ನೀರಿನ ಬಗ್ಗೆ ಚರ್ಚೆಯಾಗಿದೆ. ಹಣಕಾಸು ಇಲಾಖೆಯ ಮೂಲಕ ಮುಂದಿನ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಲಾಗುತ್ತದೆ. ಬೆಂಗಳೂರು ಜಿಲ್ಲೆಗೆ 31 ವಿಷಯಗಳು ಚರ್ಚೆಯಾಗಿದೆ 2550 ಕೋಟಿ ಮಂಜೂರು ಮಾಡಿದ್ದೇವೆ. ಪ್ರತಿ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆಯಿಂದ, ಕಾರ್ಮಿಕರ ಮಕ್ಕಳಿಗೆ ರೆಸಿಡೆನ್ಸಿ ಶಾಲೆಗಳನ್ನ ತೆರಯಲು ತೀರ್ಮಾನಿಸಲಾಗಿದೆ. 1125 ಕೋಟಿ ಮಂಜೂರು ಮಾಡುತ್ತಿದ್ದೇವೆ. ರಾಜ್ಯದ 31 ಜಿಲ್ಲೆಗಳಲ್ಲೂ ರೆಸಿಡೆನ್ಸಿ ಶಾಲೆಗಳನ್ನ ತೆರಯಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ನೀರಾವರಿ ಯೋಜನೆಗಳು ಕೆರೆಗಳನ್ನ ನೀರು ತುಂಬಿಸುವ ವಿಷಯ ಚರ್ಚೆ ಮಾಡಿದ್ದೇವೆ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ಗೆ ವಸತಿ ಸಹಿತ ತರಬೇತಿ ನೀಡಲು ಎರಡು ವಸತಿ ಶಾಲೆಗಳನ್ನ ಪ್ರಾರಂಭ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. 10 ಕೋಟಿ ವೆಚ್ಚ ಮಾಡಲಾಗುತ್ತದೆ. ಬೆಂಗಳೂರು ಸಿಟಿ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಹೆಸರಿಡಲು ತೀರ್ಮಾನಿಸಲಾಗಿದೆ ಎಂದರು.
ಹೊಸ ತಾಲ್ಲೂಕಗಳಲ್ಲಿ ಎಲ್ಲೆಲ್ಲಿ ಪಿ ಹೆಚ್ ಸಿ ಆಸ್ಪತ್ರೆ ಇಲ್ಲ ಅಲ್ಲಿ ಸಿಹೆಚ್ ಸಿ , ಕಮ್ಯುನಿಟಿ ಹೆಲ್ತ್ ಸೆಂಟರ್ ಪ್ರಾರಂಭ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ತೀರ್ಮಾನ ಮಾಡಿದ್ದೇವೆ. ಬಾಗೆಪಲ್ಲಿ ಹೆಸರನ್ನ ಭಾಗ್ಯನಗರ ಎಂದು ನಾಮಕರಣ ಮಾಡಲಾಗಿದೆ. ಪಲ್ಲಿ ಅನ್ನೋದು ತೆಲುಗು ಭಾμÉ, ನಮ್ಮ ಕಡೆ ಅಲ್ಲಿಗೆ ಪಲ್ಲಿ ಎನ್ನುತ್ತೇವೆ. ಇವತ್ತು ಹೆಚ್ ಕೆ ಪಾಟೀಲ್ ಬ್ರೀಫ್ ಮಾಡ್ತಿದ್ರು. ವಿಶೇಷ ಸಭೆ ಆಗಿರೋದ್ರಿಂದ ನಾವು ಬಂದಿದ್ದೇವೆ. 48 ವಿಷಯಗಳನ್ನ ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಒಟ್ಟು 23251 ಕೋಟಿ ಪರಿಷ್ಕøತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17147 ಕೋಟಿ ಖರ್ಚಾಗಿದೆ. ಮೂಲತಃ ಕುಡಿಯುವ ನೀರಿನ ಯೋಜನೆ ಇದಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆ 24.1 ಖಿಒಅ ನೀರಿನಲ್ಲಿ ಕುಡಿಯುವ ನೀರಿಗೆ 14 ಖಿಒಅ ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ. ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲ್ಲೂಕುಗಳಿಗೆ ನೀರು ಕೊಡ್ತೀವಿ*
9807ಕೋಟಿಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ ಕೆಲಸ 85% ಮಗಿದಿದೆ
*ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ.
ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಕೊಡ್ತೀವಿ
ಈ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ನಿರ್ಣಯಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ*
ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ …
ಒಟ್ಟಾರೆ 123 ಕೋಟಿ ರೂ ವೆಚ್ಚದಲ್ಲಿ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಈ ಸಭೆಯಲ್ಲಿ ನಾವು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ್ದೇವೆ. ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಿದ್ದೇವೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾಲಯ ಎಂದು ಮರು ನಾಮೀಕರಣ ಮಾಡಲು ತೀರ್ಮಾನಿಸಿದ್ದೇವೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.
ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.