ತುಮಕೂರು.ಜ.25: ಎಸ್ಎಸ್ಎಲ್ ಸಿ ನಂತರ. ಕನ್ನಡ ಮಾಧ್ಯಮ ಶಿಕ್ಷಣ ನಿಲುಗಡೆಗೆ ಬರುವ ಕಾರಣ ಭವಿಷ್ಯದ ಅನಿಶ್ಚಿತತೆ ಹಾಗೂ ಗುಣಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಲ್ಲದ ಕಾರಣವಾಗಿ ಪ್ರವೇಶಾತಿ ಕೊರತೆಯಿಂದ ಆತಂಕಕಾರಿ ವೇಗದಲ್ಲಿ ಮುಚ್ಚಿಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು.
ಜನವರಿ 25ರಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಹವರ್ತಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶಿಕ್ಷಕರು , ಪ್ರಾಧ್ಯಾಪಕರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದು, ಕನ್ನಡ ಶಾಲೆಗಳ ಉಳಿವಿಗೆ ಮತ್ತು ಎಸ್‍ಎಸ್‍ಎಲ್‍ಸಿ ನಂತರದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಲು ಈ ಕೆಳಗಿನ ಹಕ್ಕೋತ್ತಾಯಗಳನ್ನು ಮಂಡಿಸಲಾಯಿತು.
ಹತ್ತನೆಯ ತರಗತಿಯ ನಂತರ ಪಿಯುಸಿ , ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಕನ್ನಡ ಮಾಧ್ಯಮ ಇಲ್ಲದ ಕಾರಣ ಮಕ್ಕಳು ಕ್ರಮೇಣ ಕಾಸಗಿ ಕ್ಷೇತ್ರದ ಇಂಗ್ಲಿμï ಮೀಡಿಯಂ ಶಾಲೆಗಳಿಗೆ ಹೋಗುತ್ತಿದ್ದಾರೆ, ಕರ್ನಾಟಕದಲ್ಲಿ ಕಳೆದ ಅರ್ಧ ಶತಮಾನದಿಂದಲೂ ಶೇಕಡಾ ಅರವತ್ತೈದರಷ್ಟು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ನಂತರದ ಉನ್ನತ ಶಿಕ್ಷಣ ಕನ್ನಡದಲ್ಲಿ ಇಲ್ಲದ ಕಾರಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಇಂಜಿನಿಯರಿಂಗ್, ವೈದ್ಯಕೀಯ , ವಾಣಿಜ್ಯ , ವಿಜಾÐನ ಕ್ಷೇತ್ರಗಳಿಗೆ ಪ್ರವೇಶ ಪಡೆಯಲು ವಿಫಲರಾಗುವ ಕಾರಣದಿಂದ ಉನ್ನತ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ.
ಈ ಅನ್ಯಾಯವನ್ನು ಕೊನೆಗಾಣಿಲು ಹತ್ತನೆಯ ತರಗತಿಯ ನಂತರ ಎಲ್ಲ ಜಾÐನ ಶಾಖೆಗಳಲ್ಲೂ ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಒದಗಿಸಬೇಕಾಗಿದೆ .. ಹಾಗಾದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವವರ ಸಂಕ್ಯೆಯಲ್ಲಿ ಸುಧಾರಣೆ ಕಾಣುತ್ತದೆ ಕಳೆದ ಅರ್ಧ ಶತಮಾನದಿಂದಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ. ಶೈಕ್ಷಣಿಕ ಭವಿಷ್ಯದ ಮೇಲೆ ನಡೆಯುತ್ತಿರುವ ಪ್ರಭುತ್ವದ ದೌರ್ಜನ್ಯ ವನ್ನು ಕೊನೆಗಾಣಿಸಬೇಕಾಗಿದೆ ಎಂದು ಒತ್ತಾಯಿಸಲಾಯಿತು.
ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿರುವ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹುದ್ದೆಗಳು ಖಾಲಿಯಿದ್ದರೆ, ಪ್ರೌಢಶಾಲೆಗಳಲ್ಲಿ 9,705 ಇವೆ. ಹೆಚ್ಚುವರಿಯಾಗಿ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರಿಂದ ನಿರ್ವಹಿಸುತ್ತಿದ್ದು, ಆದ್ದರಿಂದ ಈ ಶೈಕ್ಷಣಿಕ ವರ್ಷದಿಂದಲೇ ನೇಮಕ ಮಾಡಿ ಸರ್ಕಾರಿ ಶಾಲಾ ಶಿಕ್ಷಣವನ್ನು ಬಲಿಷ್ಟ ಗೊಳಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು.
ಶಿಕ್ಷಕರನ್ನು ಅಕ್ಷರ ದಾಸೋಹ ಮಧ್ಯಾಹ್ನದ ಬಿಸಿಯೂಟವನ್ನೂ ಒಳಗೊಂಡಂತೆ ಹಲವು ಶಿಕ್ಷಣೇತರ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಸರ್ಕಾರಿ ಶಾಲಾ ಶಿಕ್ಷಣವನ್ನು ದುರ್ಬಲಗೊಳಿಸಲಾಗುತ್ತಿರುವುದು ಕೂಡಲೇ ನಿಲ್ಲಿಸಬೇಕು, ಸಾರ್ವಜನಿಕ ಜನಿಕ ಶಿಕ್ಷಣದ ಸರ್ಕಾರಿ ಶಾಲಾ ವ್ಯವಸ್ತೆಯ ಈ ಅರಾಜಕತೆಯನ್ನು ಕಂಡು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕಿತರಾಗಿ ಪೆÇೀಷಕರು ತಮ್ಮ ಮಕ್ಕಳನ್ನು ಕಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಈ ಮೂರು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟು, ಆಯಾ ಕ್ಷೇತ್ರದ ಶಾಸಕರುಗಳ ಮುಖಾಂತರ ಈ ಹಕ್ಕೋತ್ತಾಯ ಜಾರಿಗೆ ಒತ್ತಾಯಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಂದು ನಡೆದ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಕೆ.ಎಸ್.ಸಿದ್ಧಲಿಂಗಪ್ಪ , ಚಿಂತಕರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ರಾದ ಪೆÇ್ರ ಕೆ ದೊರೈರಾಜು ಪರಿಸರ ತಜÐರಾದ ಸಿ. ಯತಿರಾಜು , ಲೇಖಕ ನಟರಾಜ ಕೆ ಪಿ , ಕವಿ ಕೃಷ್ಣಮೂರ್ತಿ ಬಿಳಿಗೆರೆ , ಕತೆಗಾರ ಗಂಗಾಧರಯ್ಯ , ಸಾಮಾಜಿಕ ಕಾರ್ಯಕರ್ತರಾದ ಕೆ.ಗೋವಿಂದಯ್ಯ, ಸುರೇಶ್ ದೇವರ ಹೊಸಹಳ್ಳಿ , ನಿವೃತ್ತ ಪ್ರಾಧ್ಯಾಪಕ. ತಿಮ್ಮನಹಳ್ಳಿ ವೇಣುಗೋಪಾಲ್, ಗ್ರಾಮಪಂಚಾಯತಿ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಹಳ್ಳಿ ಸತೀಶ್ ಮತ್ತು ಸ್ಲಂ ಜನಾಂದೋಲನದ ಪದಾಧಿಕಾರಿಗಳು ಭಾಗವಹಿಸಿದ್ದರು.