ತುಮಕೂರು : ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯನ್ನು ಈಗ ಸೋಲಿಸಲೇ ಬೇಕಾಗಿರುವುದರಿಂದ ಮಾದಿಗ ಮತ್ತು ಹೊಲೆಯ ದಲಿತ ಸಮುದಾಯಗಳು ಕಾಂಗ್ರೆಸ್‍ಗೆ ಮತ ನೀಡಲಿವೆ ಎಂದು ತುಮಕೂರು ಜಿಲ್ಲಾ ದಲಿತ ಪರ ಒಕ್ಕೂಟದ ಸದಸ್ಯರು ಒಮ್ಮತದಿಂದ ಘೋಷಿಸಿದರು.
ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಮಾದಿಗ ಮತ್ತು ಛಲವಾದಿ ಮುಖಂಡರುಗಳಾದ ಚಿಂತಕ ಕೆ.ದೊರೈರಾಜ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಹೆಚ್.ಕೆಂಚಮಾರಯ್ಯ, ವಾಲೇಚಂದ್ರು, ನಿವೃತ್ತ ಅಧಿಕಾರಿ ಚಂದ್ರಪ್ಪ, ಶ್ರೀನಿವಾಸ್, ನರಸಿಂಹಯ್ಯ ಅವರುಗಳು ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದ್ದು, ವಿಶ್ವಕ್ಕೆ ಮಾನವೀಯತೆ, ಸಮಾನತೆ ನೀಡಿದ ಉನ್ನತ ಮೌಲ್ಯವುಳ್ಳ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುವ ಬಿಜೆಪಿಯನ್ನು ಬದಲಾಯಿಸುವ ಸಮಯ ಬಂದಿದೆ ಈ ಹಿನ್ನಲೆಯಲ್ಲಿ ದಲಿತ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿವೆ ಎಂದು ಹೇಳಿದರು.
ಚಿಂತಕ ಕೆ.ದೊರೈರಾಜ್ ಮಾತನಾಡಿ ಸಂವಿಧಾನದಿಂದ ಕೆಳಸ್ಥರದ ಜನರು ಶಿಕ್ಷಣ ಪಡೆದು ಸುಶಿಕ್ಷಿತರಾಗುತ್ತಿದ್ದು, ಇದನ್ನು ಸಹಿಸದ ಸನಾತನಧರ್ಮಿಯರು, ಭಾರತದ ಶ್ರೇಷ್ಠ ಸಂವಿಧಾನವನ್ನು ರದ್ದು ಮಾಡಲು ಹೊರಟಿರುವುದು ಈ ದೇಶದ ಬಹು ಸಂಖ್ಯಾತ ಜನರನ್ನು ಗುಲಾಮಗಿರಿಯಲ್ಲೇ ಬದುಕಬೇಕೆಂಬುದಾಗಿದೆ ಎಂದರು.
ಬಿಜೆಪಿ ಮತ್ತು ಮೋದಿ ಈ ದೇಶದ ಜನರಿಗೆ ಸುಳ್ಳು ಹೇಳಿ ದ್ರೋಹ ಬಗೆಯಲಾಗಿದೆ, ಮೀಸಲಾತಿ ಇರಬಾರದು ಅಂತಲೇ ಇಡೀ ಸರ್ಕಾರಿ ವಲಯದ ನೌಕರಿಗಳನ್ನು ತುಂಬದೆ ಖಾಸಗೀಕರಣ ಮಾಡಿ ಉದ್ಯೋಗವಿಲ್ಲದಂತೆ ಮಾಡಿ ಯುವಕರಿಗೆ ದ್ರೋಹವೆಸಗಿ ಅನ್ಯಾಯ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೆಚ್.ಕೆಂಚಮಾರಾಯ್ಯ ಮಾತನಾಡಿ, ಈಗಿನ ಸಂವಿಧಾನವನ್ನು ರದ್ದು ಮಾಡಿ ಮನುವಾದಿ ಸಂವಿಧಾನವನ್ನು ತರಲು ಹೊರಟಿರುವ ಬಿಜೆಪಿಯನ್ನು ಸೋಲಿಸದಿದ್ದರೆ ಈ ದೇಶದ ಜನರಿಗೆ ಉಳಿಗಾಲವಿಲ್ಲ ಎಂದರು.
ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾದಿಗ-ಹೊಲೆಯ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದು, ಕಾಂಗ್ರೆಸ್ ಮೈತ್ರಿ ಕೂಟದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ 5ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದು, ರೈತರ ಸಾಲ ಮನ್ನಾ ಮಾಡಲಿದೆ ಎಂದ ಅವರು, ಮೋದಿಯವರು ತಮ್ಮ 10 ವರ್ಷಗಳ ಸಾಧನೆಗಳನ್ನು ಹೇಳದೆ ರಾಹುಲ್ ಗಾಂಧಿ ಮತ್ತು ಖರ್ಗೆಯವರನ್ನು ತೆಗಳುವುದನ್ನಷೇ ಮಾಡುತ್ತಿದ್ದಾರೆ, ಮೋದಿಯವರ ಸರ್ವಾಧಿಕಾರಿ ಧೋರಣೆಯನ್ನು ಕೊನೆಗಾಣಿಸಲ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದರು.
ನರಸಿಂಹಯ್ಯ ಮಾತನಾಡಿ ಬಿಜೆಪಿ ಭಾವನಾತ್ಮಕ ವಿಷಯಗಳಾದ ರಾಮಮಂದಿರ ಮತ್ತು ಮುಸ್ಲಿಂರ ಬಗ್ಗೆಯೇ ಮಾತನಾಡುತ್ತಾ ದೇಶದ ಹಿತವನ್ನೇ ಮರೆತಿದ್ದಾರೆ, ದೇಶದ ರಾಷ್ಟ್ರಪತಿಗಳಿಗೇ ಪ್ರಧಾನಿ ನರೇಂದ್ರ ಮೋದಿಯವರು ಅವಮಾನ ಮಾಡಿದ್ದಾರೆ, ಇವರದ್ದು ಆರ್‍ಎಸ್‍ಎಸ್ ಅಜೆಂಡಾ ಜಾರಿಗೆ ತರುವುದಷ್ಷೇ ಆಗಿದೆ ಈ ಹಿನ್ನಲೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಲಿದ್ದೇವೆ ಎಂದರು.
ಪತ್ರಿಕಾಗೋóಷ್ಠಿಯಲ್ಲಿ ನರಸೀಯಪ್ಪ, ಚಂದ್ರಪ್ಪ, ಶ್ರೀನಿವಾಸ್, ವಾಲೆಚಂದ್ರು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಳಗೇರಿ ಸಂಘಟನೆಯ ನರಸಿಂಹಮೂರ್ತಿ, ಬಿ.ಹೆಚ್.ಗಂಗಾಧರ್, ಡಾ.ಡಿ. ಮುರಳೀಧರ್. ಶಿವಾಜಿ, ಜಯಮೂರ್ತಿ, ಭಾನುಪ್ರಕಾಶ್ ಉಪಸ್ಥಿತರಿದ್ದರು.