ಇಸ್ಲಾಂ ಉಪಜಾತಿಗಳಿಗೆ ಆರ್ಥಿಕ ಸೌಲಭ್ಯಕ್ಕೆ ಆಗ್ರಹ

ತುಮಕೂರು : ಇಸ್ಲಾಂ ಧರ್ಮದ ಉಪಜಾತಿಗಳಲ್ಲಿ ಒಂದಾಗಿರುವ ಪಿಂಜಾರ-ನದಾಫ್-ದೂದೆಕುಲ-ಮನ್ಸೂರಿ ಜನಾಂಗಗಳಿದ್ದು, ಈ ಜನಾಂಗಗಳ ಆರ್ಥಿಕ ಮತ್ತು ಶೈಕ್ಷಣಿಕ ಪ್ರಯೋಜನಕ್ಕಾಗಿ ರಾಜ್ಯ ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕೆಂದು ಕರ್ನಾಟಕ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಷೀರ್ ಅಹಮದ್ ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕ ಡಾ.ಎನ್.ಶಿವಶಂಕರ್ ಅವರಿಗೆ ಪಿಂಜಾರ-ನದಾಫ್-ದೂದೆಕುಲ-ಮನ್ಸೂರಿ ಸಮುದಾಯಕ್ಕೆ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರ ನೀಡುವಂತೆ ಸರಕಾರ ಆದೇಶ ಮಾಡಿದ್ದು ಅದರ ಪ್ರತಿಯೊಂದಿಗೆ ಈ ಭಾಗದಲ್ಲಿ ನಮ್ಮ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯಲು ಅನುಕೂಲವಾಗುವಂತೆ ಉಲ್ಲೇಖವನ್ನು ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಮುದಾಯಗಳು ಅತ್ಯಂತ ಅನ್ಯಾಯಕ್ಕೆ ಒಳಗಾಗಿವೆ ಜೊತೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಹ ಬಹಳಷ್ಟು ಹಿಂದುಳಿದಿದ್ದು ಸರ್ಕಾರದ ನಿರ್ದೇಶನವಿದ್ದರೂ ಸಹ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಕುಲಕಸುಬಿನ ಆಧಾರದಲ್ಲಿ ಪ್ರಮಾಣ ಪತ್ರ ನೀಡಲು ಅವಕಾಶ ಇರುತ್ತದೆ. ಆದರೆ, ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಹಾಗಾಗಿ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಪಿಂಜಾರ-ನದಾಫ್-ದೂದೆಕುಲ-ಮನ್ಸೂರಿ ಜನಾಂಗಗಳಿಗೆ ಪ್ರವರ್ಗ-1ರ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಮನವಿ ಪತ್ರ ಸಲ್ಲಿಕೆಯ ವೇಳೆ ರಾಜ್ಯ ನಿರ್ದೇಶಕ ಶಫಿ.ಐ.ಎಂ., ರಾಜ್ಯಾಧ್ಯಕ್ಷರಾದ ಬಷೀರ್ ಅಹಮ್ಮದ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *