ತುಮಕೂರು: ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ. ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನ್ಯಾಯಯುತ ತನಿಖೆ ಎದುರಿಸಲಿ. ಅಧಿಕಾರದಲ್ಲಿದ್ದಾಗ ನಿಸ್ಪಕ್ಷಪಾತ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುವುದರಿಂದ ರಾಜೀನಾಮೆ ನೀಡಲಿ ಎಂದು ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಒತ್ತಾಯಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣವೊಂದರ ತನಿಖೆ ಸಂಬಂಧ ಇದೇ ಸಿದ್ದರಾಮಯ್ಯ ಅವರು ಆಗ ಹೇಳಿದಂತೆ ನಡೆದುಕೊಳ್ಳಲಿ. ಮುಖ್ಯಮಂತ್ರಿ ಅಧಿಕಾರದಲ್ಲಿರುವುದರಿಂದ ತನಿಖೆ ಮೇಲೆ ಪ್ರಭಾರ ಬೀರುವ ಸಾಧ್ಯತೆಗಳಿರುತ್ತವೆ. ಇದರಿಂದ ಪಾರದರ್ಶಕ, ನಿಸ್ಪಕ್ಷಪಾಕ ತನಿಖೆಯಾಗಲು ಅಸಾಧ್ಯ. ಅದಕ್ಕೋಸ್ಕರ ಯಡಿಯೂರಪ್ಪ ಅಧಿಕಾರದಲ್ಲಿರಬಾರದು ಅವರು ತಕ್ಷಣ ರಾಜೀನಾಮೆ ನಿಡಬೇಕು ಎಂದು ಹೇಳಿದ್ದರು. ಇದೇ ಮಾತು ಮುಖ್ಯಮಂತ್ರಿ ಸ್ಥಾನದಲ್ಲಿರು ಸಿದ್ದರಾಮಯ್ಯನವರಿಗೂ ಅನ್ವಯಿಸುತ್ತದೆ. ಹೀಗಾಗಿ ನಿಸ್ಪಕ್ಷಪಾತ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಕಾನೂನು ಹೋರಾಟ ಮಾಡಲು ಮುಖ್ಯಮಂತ್ರಿಗೆ ಅವಕಾಶವಿದೆ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ರಾಜೀನಾಮೆ ನೀಡುವುದು ಸರಿ. ಸಿದ್ದರಾಮಯ್ಯನವರು ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಾ ಬಂದಿದ್ದಾರೆ. ಈಗ ಆರೋಪಗಳಿಗೆ ಸಂಬಂಧಿಸಿದ ಪುರಾವೆ ಇವೆ ಎಂದು ನ್ಯಾಯಾಲಯ ಹೇಳಿದೆ. ತಪ್ಪು ಮಾಡಿಲ್ಲ ಎಂದಮೇಲೆ ನ್ಯಾಯಾಲಯವೇ ನಿರಪರಾಧಿ ಎಂದು ಘೋಷಿಸುವುದು ಎಂದು ಟಿ.ಆರ್.ಸದಾಶಿವಯ್ಯ ಹೇಳಿದ್ದಾರೆ.