ಬಿ.ಬಸವಲಿಂಗಪ್ಪ ಮುಖ್ಯಮಂತ್ರಿಯಾದರೆ ನನಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ದೇವರಾಜ ಅರಸರಗಿತ್ತು-ಕಾಳೇಗೌಡ ನಾಗವಾರ

ತುಮಕೂರು: ಬಿ.ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ದೇವರಾಜ ಅರಸು ಅವರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ಸ್ವತಹಃ ದೇವರಾಜ ಅರಸರಲ್ಲಿತ್ತು, ದೇವರಾಜ ಅರಸು ಉತ್ತಮ ಆಡಳಿತ ನೀಡುತ್ತಿದ್ದರು ಸಹ,ಸಮಾಜ ಸುಧಾರಣೆಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕೆಂದು ಬಸವಲಿಂಗಪ್ಪ ಒತ್ತಾಯ ಮಾಡುತ್ತಿದ್ದರು ಎಂದು ಚಿಂತಕ ಪೆÇ್ರ. ಕಾಳೇಗೌಡ ನಾಗವಾರ ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ಎಸ್‍ಸಿ,ಎಸ್‍ಟಿ ನೌಕರರ ಸಮನ್ವಯ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ಬಿ.ಬಸವಲಿಂಗಪ್ಪ ಸ್ಮರಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಂಬೇಡ್ಕರ್ ಅವರ ಉತ್ತರಾಧಿಕಾರಿ ಎಂದರೆ ಅದು ಬಿ.ಬಸವಲಿಂಗಪ್ಪ ಅವರು ಮಾತ್ರ ಎಂದು ನಾಗವಾರ ಅಭಿಪ್ರಾಯಪಟ್ಟರು.

ಬಿ.ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಎನ್ನಲಿಲ್ಲ.ಹೊಸ ಚಿಂತನೆ, ಹೊಸ ಆಯಾಮದ ಕಡೆಗೆ ಸಾಹಿತ್ಯ ಹೊರಳಬೇಕೆಂಬ ಉದ್ದೇಶದಿಂದ ಬೂಸಾ ಎಂದರೆ ಹೊರತು ಸಾಹಿತ್ಯವನ್ನಲ್ಲ.ಆದರೆ ಶರಣ ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಹೇಳಿದ ಮಾತನ್ನು,20ನೇ ಶತಮಾನದಲ್ಲಿ ಸತ್ಯ ಹೇಳಿ ಮಂತ್ರಿ ಪದವಿಯನ್ನೇ ಕಳೆದುಕೊಂಡ ಮಹಾವ್ಯಕ್ತಿ ಬಸವಲಿಂಗಪ್ಪ,ಮತ್ತೊಬ್ಬರು ಡಾ.ಬಿ.ಆರ್.ಅಂಬೇಡ್ಕರ್ ಎಂದರು.

ಮುಖ್ಯಮಂತ್ರಿಯಾಗಿದ್ದವ ಕೆಂಗಲ್ ಹನುಮಂತಯ್ಯ ಅವರು ಬಡವರ ಹಣದಲ್ಲಿ ದೇಗುಲ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದ ನನ್ನ ದೈರ್ಯವನ್ನು ಮೆಚ್ಚಿ,ತಮ್ಮ ಅಪ್ತ ಬಳಗಕ್ಕೆ ಸೇರಿಸಿಕೊಂಡರು.ಅವರಿಗೆ ಎಲ್ಲಾ ವರ್ಗದ ಪ್ರಗತಿಪರ ಬರಹಗಾರರ ಸ್ನೇಹವಿತ್ತು.ಕೊನೆಯವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉತ್ತರಾಧಿಕಾರಿ ಯಾಗಿ ಉಳಿದವರು ಬಿ.ಬಸವಲಿಂಗಪ್ಪ ಮಾತ್ರ ಎಂದು ಡಾ.ಕಾಳೇಗೌಡ ನಾಗಾವರ ತಿಳಿಸಿದರು.

ಬಸವಲಿಂಗಪ್ಪ ಅವರು ತಳಸಮುದಾಯದ ಯುವಕರು ವಿದ್ಯಾವಂತರಾಗಿ ಉದ್ಯೋಗಸ್ಥರಾಗಬೇಕೆಂದು ಬಯಸಿದರು, ದಲಿತರ ದೇವರ ಪೂಜೆಗೆ ವಿರೋಧ ವ್ಯಕ್ತಪಡಿಸಿದರು, ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ತನ್ನದೇ ಆದ ರೀತಿಯಲ್ಲಿ ಸಮಾಜವನ್ನು ಸುಧಾರಿಸಿದರು.

ದೇವರಾಜ ಅರಸು ಪ್ರಗತಿಪರರಾಗಿದ್ದರೂ,ಕೆಲ ಕಾನೂನು ತರಲು ಹಿಂಜರಿಯುತ್ತಿದ್ದರು, ಬಸವಲಿಂಗಪ್ಪ ಅವರು ಪೆರಿಯಾರ್ ಅವರು ಮೈಸೂರಿಗೆ ಬಂದಿದ್ದಾಗ ಅವರನ್ನು ನೋಡಲು ಬಯಸಿದ್ದರು.ಆದರೆ ಅರಸು ಅದು ಸರಕಾರದ ಕಾರ್ಯಕ್ರಮ ವಾಗುತ್ತದೆ, ಭಾಗವಹಿಸಬೇಡಿ ಎಂದು ಒತ್ತಡ ಹೇರಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾರದೆ ಪರಿತಪಿಸಿದರು.ಆನಂತರ ತಮಿಳುನಾಡಿನ ಜನತೆ ಬಸವಲಿಂಗಪ್ಪ ಅವರನ್ನು ಕರೆತು ಕರ್ನಾಟಕದ ಪೆರಿಯಾರ್ ಎಂದು ಅಭಿಮಾನದಿಂದ ಕರೆದಾಗ, ಪೆರಿಯಾರ್ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಾನೆಂತಹ ತಪ್ಪು ಮಾಡಿದೆ ಎಂದು ಹಲವು ಬಾರಿ ಮರುಗಿದ್ದರೂ ಎಂದು ಡಾ.ಕಾಳೇಗೌಡ ನಾಗಾವರ ತಿಳಿಸಿದರು.

ದೇಶದಲ್ಲಿ 2600 ವರ್ಷಗಳ ಹಿಂದೆ ಇದ್ದ ಬುದ್ಧನ ನಡೆಯನ್ನು ಅನುಕರಿಸಿದ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದರು,ಅವರು ಅನುಭವಿಸಿದ ಜಾತೀಯತೆಯನ್ನು ಇಂದಿಗೂ ಕಾಣುತ್ತಿರುವುದು ದುರದೃಷ್ಟಕರ.ಕುವೆಂಪು,ಮಾಸ್ತಿ, ಶಿವರಾಮ ಕಾರಂತ ಅವರು ಬುದ್ಧನ ವೈಜ್ಞಾನಿಕ ತತ್ವವನ್ನು ಅನುಕರಿಸಿದರು, ದೇಶದ ಪುರೋಹಿತ ಶಾಹಿಯ ವಿರುದ್ಧ ಹೊರಬಂದ ಮೊದಲ ಕನ್ನಡಿಗ ಬಸವಣ್ಣ ಅವರು,ನಿಜವಾಗಿಯೂ ಪೌರೋಹಿತ್ಯಕ್ಕೆ ವಿರುದ್ಧವಾಗಿ ಧರ್ಮವನ್ನು ಕಟ್ಟಿದರು ಎಂದರು.

ಇದೇ ವೇಳೆ ಸಂವಿಧಾನ ಅರ್ಪಣಾ ದಿನದ ಅಂಬೇಡ್ಕರ್ ಭಾಷಣದ ಅಂಶಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.ಪ್ರಾಸ್ತಾವಿಕವಾಗಿ ಎಸಿ,ಎಸ್ಟಿ,ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿದರು,ಚಿಂತಕ ದೊರೈರಾಜು,ಕಲಾಶ್ರೀಡಾ.ಲಕ್ಷ್ಮಣ್‍ದಾಸ್,ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ,ಕಲಾವಿದ ಹನುಮಂತೇಗೌಡ,ಡಾ.ಬಸವರಾಜು,ನರಸೀಯಪ್ಪ, ಸಿಎಒ ನರಸಿಂಹಮೂರ್ತಿ,ಚಂದ್ರಪ್ಪ,ಡಾ.ಓ.ನಾಗರಾಜು,ವಕೀಲ ಮಂಜುನಾಥ್ ಹೆಚ್.ವಿ. ನಾಗಭೂಷಣ್ ಬಗ್ಗನಡು ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *