ತುಮಕೂರು: ಶಿಕ್ಷಣದಲ್ಲಿನ ತಾರತಮ್ಯ ನೀತಿ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂಜಿನಿಯರಿಂಗ್ ಮೆಡಿಕಲ್, ಶಿಕ್ಷಣ ಮೇಲು ಕಲೆ ಮತ್ತು ಕಾಮರ್ಸ್ ಕೀಳು ಎಂಬ ಮನೋಭಾವ, ಪ್ರವೃತ್ತಿ ಸಮಾಜದಲ್ಲಿ ಮತ್ತು ಪೋಷಕರಲ್ಲಿ ಹೆಚ್ಚಾಗುತ್ತಿದೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ತುಮಕೂರಿನ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರಾದ ಡಾ.ಬಾಲಗುರುಮೂರ್ತಿರವರು ಅಭಿಪ್ರಾಯಪಟ್ಟರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ “ಶ್ರೀಅನ್ವೇಷಣಾ-2025” ವಿದ್ಯಾರ್ಥಿಗಳ ವಿಜ್ಞಾನದ ಪ್ರತಿಭೆಗಳ ಅನಾವರಣದ ವೇದಿಕೆಯ ಕಾರ್ಯಕ್ರಮವನ್ನು ನ.13 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಅಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಡಾ.ಬಾಲಗುರುಮೂರ್ತಿರವರು ಮಾತನಾಡುತ್ತಾ ಸಮಾಧಾನಕರ ಸಂಗತಿ ಎಂದರೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಇಂತಹ ತಾರತಮ್ಯ ತೊಡೆದು ಹಾಕುವಲ್ಲಿ ಸ್ವಲ್ಪಮಟ್ಟಿಗೆ ಸಹಕಾರಿಯಾಗಿದೆ. ವಿಜ್ಞಾನದ ವಿದ್ಯಾರ್ಥಿ ಇಷ್ಟಪಟ್ಟರೆ ರಾಜಕೀಯ, ಸಮಾಜಶಾಸ್ತ್ರವನ್ನು ಅಭ್ಯಾಸ ಮಾಡಬಹುದು. ಅದೇ ರೀತಿ ಕಲಾವಿಭಾಗದ ವಿದ್ಯಾರ್ಥಿ ಆಸಕ್ತಿ ಇದ್ದರೆ ಭೌತಶಾಸ್ತ್ರ ಮತ್ತು ರಾಸಾಯನ ಶಾಸ್ತ್ರವನ್ನು ಅಭ್ಯಾಸ ಮಾಡಬಹುದು ಎಂದು ಉದಾಹರಣೆ ನೀಡಿದರು. ಇಂದು ಶಿಕ್ಷಣ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂದರೆ ವೈದ್ಯರೇ ವಿಧ್ವಂಸಕ, ರಾಷ್ಟ್ರದ್ರೋಹಿ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಶಿಕ್ಷಣ ನಮ್ಮ ಸಮಾಜ ಯಾವ ಕಡೆಗೆ ಹೋಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ವಿಜ್ಞಾನ ಎಂದರೇನು ವೈಚಾರಿಕ ಮನೋಭಾವ ಶಿಸ್ತು ಬೆಳೆಸುವುದು ಮತ್ತು ಹುಡುಕಾಟ ವಿಜ್ಞಾನಯಾಗಿದೆ. ಇಂಜಿನಿಯರಿಂಗ್, ಮೆಡಿಕಲ್ ಮಾತ್ರ ಶ್ರೇಷ್ಠ ಕಾಮರ್ಸ್ ಕನಿಷ್ಠ ಎಂಬ ಮನೋಭಾವ ಸಲ್ಲದು. ತುಮಕೂರು ಜಿಲ್ಲೆಯಲ್ಲಿ 60ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿ 30 ಸಾವಿರ ವಿದ್ಯಾರ್ಥಿಗಳು ವಿಜ್ಞಾನದ ವಿಷಯ ಕಲಿಯುತ್ತಿದ್ದಾರೆ ಜ್ಞಾನ ಎಂದಿಗೂ ಅಹಂಕಾರ ಕೊಡುವುದಿಲ್ಲ ಬದಲಿಗೆ ವಿವೇಕ ಮತ್ತು ಎತ್ತರದ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಮರ್ಸ್ ವಿಷಯ ಜಾಗತಿಕ ಮಹತ್ವ ಪಡೆಯುತ್ತಿದೆ ಅದೇ ರೀತಿ ಹೆಚ್ಚಿನ ಉದ್ಯೋಗಾವಕಾಶಗಳು ದೊರಕುತ್ತಿದೆ. ತುಮಕೂರು ಜಿಲ್ಲೆಯನ್ನು ಕರ್ಮಭೂಮಿನ್ನಾಗಿ ಮಾಡಿಕೊಂಡು ತಮ್ಮ ಸತತ ಪರಿಶ್ರಮದಿಂದ ರಾಜ್ಯಕ್ಕೆ ಮಾದರಿಯಾಗುವಂತಹ ವಿದ್ಯಾಸಂಸ್ಥೆಯನ್ನು ಕಟ್ಟಿ ಜಿಲ್ಲೆಗೆ ಅಮೂಲ್ಯ ಕೊಡುಗೆ ನೀಡಿರುವ ಡಾ.ಎಂ.ಆರ್.ಹುಲಿನಾಯ್ಕರ್ ಸಾಧನೆ ಅನನ್ಯ ಮತ್ತು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ತುಮಕೂರಿನ ಸರ್ವೋದಯ ಸಮೂಹ ಸಂಸ್ಥೆಯ ಕಾರ್ಯದರ್ಶಿಯಾದ ಹೆಚ್.ವಿ.ಸುಬ್ಬರಾವ್‍ರವರು ಮಾತನಾಡುತ್ತಾ ಪಾಠ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ. ಸಂಸ್ಕಾರವಿಲ್ಲದ ಶಿಕ್ಷಣ ಅರಾಜಕತೆ ಅಧಃಪತನಕ್ಕೆ ನೂಕುತ್ತದೆ ಎಂಬುದಕ್ಕೆ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳೇ ಸಾಕ್ಷಿಯಾಗಿದೆ ಎಂದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ.ಭಾರತಿಶಾಂತಕುಮಾರ್‍ರವರು ಮಾತನಾಡುತ್ತಾ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್‍ರವರು ವಹಿಸಿದ್ದರು. ಕ್ವಿಜ್ ಪ್ರದರ್ಶನದಲ್ಲಿ ಪ್ರೆಸಿಡೆನ್ಸಿ ಪಿ.ಯು. ಕಾಲೇಜಿನ ಪ್ರಥಮ ಬಹುಮಾನ ನೂತನ್‍ಕುಮಾರ್ ಎಲ್ ಮತ್ತು ವಿರಾಟ್ ಎನ್ ಗೌಡ, ಸರ್ಕಾರಿ ಪಿ.ಯು.ಕಾಲೇಜಿನ ದ್ವಿತೀಯ ಬಹುಮಾನವನ್ನು ಸ್ನೇಹ ಎಂ.ಜಿ ಮತ್ತು ಅಭಿಷ್ಯಂತ್ ತೃತೀಯ ಬಹುಮಾನವನ್ನು ಕೀರ್ತಿ ಬಿ.ಎಸ್. ಮತ್ತು ನಯನಾ ಆರ್.ಎ. ಕ್ವಿಜ್ ಪ್ರದರ್ಶನ ಪಡೆದುಕೊಂಡಿದ್ದಾರೆ. ಭಿತ್ತಿ ಪತ್ರಗಳ ಸ್ಪರ್ಧೆಯಲ್ಲಿ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಹುಮಾನ ಸಿಂಚನಾ ಎಂ.ಬಿ, ಮಾನಸ ಹೆಚ್.ಎಸ್, ದ್ವಿತೀಯ ಬಹುಮಾನವನ್ನು ಧನಲಕ್ಷ್ಮಿ ಎ.ಎನ್. ಮತ್ತು ಸೋನಾಕ್ಷಿ ಎಸ್ ಭಿತ್ತಿಪತ್ರ ಬಹುಮಾನ ಪಡೆದುಕೊಂಡಿದ್ದಾರೆ. ಮಂಡಲ್ ಪ್ರದರ್ಶನದಲ್ಲಿ ಶ್ರೀಸಪ್ತಗಿರಿ ಪಿ.ಯು.ಕಾಲೇಜಿನ ಪ್ರಥಮ ಬಹುಮಾನ ಹರ್ಷ ಪಿ, ಹೊನೇಶ್ ಪಿ.ಎ ಮತ್ತು ಅಮೋಘ ಸಿಂಹ ದ್ವಿತೀಯ ಬಹುಮಾನವನ್ನು ಶುಭೋದಯ ಪಿ.ಯು.ಕಾಲೇಜಿನ ಸರನ್ ಎ, ಮತ್ತು ಶ್ರೇಯಸ್ ಬಿ.ಎಸ್.ಬಹುಮಾನವನ್ನು ಪಡೆದಿದ್ದಾರೆ. ಶ್ರೀಅನ್ವೇಷಣಾ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆ ಎಲ್ಲಾ ತಾಲೂಕಿನ ಹಾಗೂ ವಿವಿಧ ಜಿಲ್ಲೆಗಳಿಂದ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಚಂದ್ರಶೇಖರ್.ಎನ್ ಕಾರ್ಯಕ್ರಮದ ಮುಖ್ಯಸಂಯೋಜಕರಾದ ಶ್ರೀದೇವಿ ಎಂ.ಬಿ.ಎ. ವಿಭಾಗದ ಪ್ರೊ.ಪ್ರವೀಣ್ ಕುಮಾರ್ ಟಿ.ಎಂ, ಪ್ರವೇಶ ಅಧಿಕಾರಿ ಹಾಗೂ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರ ಮತ್ತು ಮುಖ್ಯಸ್ಥರಾದ ಕಾವ್ಯಕುಮಾರ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.