ಗ್ರಾ.ಪಂ. ಸದಸ್ಯರ ಬೇಡಿಕೆ ಕುರಿತು ಮುಖಂಡರ ಜೊತೆ ಚರ್ಚೆ-ಪ್ರಿಯಾಂಕ ಖರ್ಗೆ

ಬೆಂಗಳೂರು : ಗ್ರಾಮಪಂಚಾಯತಿ ಸದಸ್ಯರ ಬೇಡಿಕೆಗಳ ಕುರಿತು ಮುಂದಿನ ವಾರ ಒಕ್ಕೂಟದ ಮುಖಂಡರ ಸಭೆ ಕರೆದು ಚರ್ಚಿಸುವುದಾಗಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಫೆಬ್ರವರಿ 8ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಕರ್ನಾಟಕ ಗ್ರಾಮಪಂಚಾಯತಿ ಒಕ್ಕೂಟದ ಸದಸ್ಯರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರಿಂದ 28 ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ಅವರ ಬೇಡಿಕೆಗಳನ್ನು ವಿಸ್ತೃತವಾಗಿ ಆಲಿಸುವ ಹಾಗೂ ಅವರ ಬೇಡಿಕೆಗಳ ಕುರಿತು ಸರ್ಕಾರದ ಕೆಲಸಗಳ ಕುರಿತ ವರದಿಯನ್ನು ಕೂಡ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದರು.

ಸಂವಿಧಾನದ 73ನೇ ತಿದ್ದುಪಡಿಯ ಸಾರಾಂಶವನ್ನು ನಿಜರೂಪದಲ್ಲಿ ಜಾರಿ ಮಾಡಿ ಪಂಚಾಯತಿ ಮಟ್ಟದಲ್ಲಿ ಆಡಳಿತವನ್ನು ಬಲಪಡಿಸಲು, ಸ್ವರಾಜ್ಯವನ್ನು ಸ್ಥಾಪಿಸಲು ನಮ್ಮ ಇಲಾಖೆಯ ಪ್ರಯತ್ನವನ್ನು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ ಮುಕ್ತಕಂಠದಿಂದ ಸ್ವಾಗತಿಸಿದೆ ಎಂದರು.

ಗ್ರಾಮೀಣ ಆಡಳಿತದಲ್ಲಿ ಸಮಗ್ರ ರೀತಿಯಲ್ಲಿ ಸುಧಾರಣೆ ತರಲು ಕಟಿಬದ್ಧರಾಗಿ ನಮ್ಮ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದರು.

Leave a Reply

Your email address will not be published. Required fields are marked *