ಪೈ ಫೌಂಡೇಷನ್ ವತಿಯಿಂದ 13 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಣೆ

ತುಮಕೂರು: ತ್ರಿವಿಧ ದಾಸೋಹ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಪೈ ಫೌಂಡೇಷನ್ ವತಿಯಿಂದ 18 ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.

ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಮತ್ತು ಫೈ ಫೌಂಡೇಷನ್ ಫೌಂಡರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ರಾಜಕುಮಾರ ಪೈ ಅವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ನೋಟ್ ಬುಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪೈ ಫೌಂಡೇಷನ್ ಮಾಡಿರುವ ದಾನವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಮಕ್ಕಳು ಸಾಧಕರಾಗಿ ಹೊರಹೊಮ್ಮಿದಾಗ ಆ ದಾನ ಸಾರ್ಥಕತೆ ಪಡೆದುಕೊಳ್ಳುತ್ತದೆ. ಹಾಗಾಗಿ ನೋಟ್‍ಬುಕ್‍ಗಳನ್ನ ಪಡೆದ ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಬೇಕು. ಸಾಧಕರಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.

ಮಹಾಭಾರತದಲ್ಲಿ ಕೃಷ್ಣ ಮಾರುವೇಷದಲ್ಲಿ ಬಂದು ಕರ್ಣನಿಗೆ ತೈಲದ ತಂಬಿಗೆಯನ್ನು ಕೊಡುವಂತೆ ದಾನ ಕೇಳುತ್ತಾನೆ. ಕರ್ಣ ಎಡಗೈನಲ್ಲೇ ದಾನ ಕೊಡುತ್ತಾನೆ. ಅದಕ್ಕೆ ಕೃಷ್ಣ ಎಡಗೈಯಲ್ಲಿ ದಾನ ಕೊಟ್ಟೆ. ನಿನ್ನ ದಾನ ಶ್ರೇಷ್ಠ ಆಗಲಿಲ್ಲ ಎನ್ನುತ್ತಾನೆ. ಅದಕ್ಕೆ ಕರ್ಣ ಹೇಳುತ್ತಾನೆ ಇಲ್ಲ ಸ್ವಾಮಿ ನಾನು ಕೊಡುವ ದಾನವನ್ನು ಎಡಗೈಯಿಂದ ಬಲಗೈಗೆ ತೆಗೆದುಕೊಳ್ಳುವಷ್ಟರಲ್ಲಿ ಮನಸ್ಸು ಬದಲಾದರೆ ದಾನ ಕೊಡುವುದನ್ನ ಮರೆತುಬಿಟ್ಟೇನು ಎನ್ನುವ ಕಾರಣಕ್ಕೆ ಎಡಗೈನಲ್ಲೇ ದಾನ ಕೊಟ್ಟೆ. ಎಡಗೈನಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಅಂತ ಹೇಳುತ್ತಾನೆ ಕರ್ಣ. ಇದು ದಾನದ ಮಹತ್ವವಾಗಿದ್ದು, ನಾವು ದಾನ ಕೊಟ್ಟರೆ ಅದು ಎಷ್ಟು ಸದುಪಯೋಗ ಆಗಬೇಕು ಅಂತಾ ದರಾ ಬೇಂದ್ರೆ ಅವರು ಸಹ ದಾನದ ಮಹತ್ವವನ್ನು ಹೇಳುತ್ತಾರೆ.
ಹಾಗಾಗಿ ದಾನ ಪಡೆದವರೂ ಸಹ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೈ ಫೌಂಡೇಷನ್ ಕೊಟ್ಟ ನೋಟ್ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಬೇಕು. ಆಗ ದಾನ ಕೊಟ್ಟಿದ್ದಕ್ಕೂ ಪೈ ಫೌಂಡೇಷನ್ ದಾನದ ಸೇವೆ ಸಾರ್ಥಕವಾಗುತ್ತದೆ ಎಂದರು.

ಫೈ ಫೌಂಡೇಷನ್ ಫೌಂಡರ್ ಎಸ್. ರಾಜಕುಮಾರ ಪೈ ಮಾತನಾಡಿ, ನಾವು ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ 124ವರ್ಷದಿಂದ ಕರ್ನಾಟಕ, ತೆಲಾಂಗಣ, ಆಂಧ್ರಪ್ರದೇಶದಲ್ಲಿ ಸೇವೆ ನೀಡುತ್ತಿದ್ದೇವೆ. ಮಲ್ಟಿಬ್ರಾಂಡ್ ಸ್ಟೋರ್ 90, ಮೊಬೈಲ್ ಸ್ಟೋರ್ 110, ಫರ್ನಿಚರ್ ಸ್ಟೋರ್ 116 ಸ್ಟೋರ್ ಗಳಿದ್ದು ಎಲ್ಲಾ ಕಡೆ ಉತ್ತಮ ಗುಣಮಟ್ಟದ ಸೇವೆ ಕೊಡುತ್ತಿದ್ದೇವೆ. ಇದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನೂ ಸಹ ಮಾಡಿಕೊಂಡು ಬಂದಿದ್ದೇವೆ ಎಂದರು.

ಪೈ ಫೌಂಡೇಷನ್ ನಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ನೋಟ್ ಬುಕ್ ವಿತರಣೆ ಮಾಡುತ್ತಾ ಬಂದಿದ್ದೇವೆ. ಈ ವರ್ಷವೂ ಸಹ 36 ಸಾವಿರ ಮಕ್ಕಳಿಗೆ ಪುಸ್ತಕ ಕೊಡುತ್ತಿದ್ದೇವೆ.
ಸುಮಾರು 2ಲಕ್ಷ ನೋಟ್ ಬುಕ್ ವಿತರಿಸುತ್ತಿದ್ದೇವೆ. ಇವತ್ತು ಸಿದ್ಧಗಂಗಾ ಮಠದಲ್ಲಿ 18 ವರ್ಷದ ಪುಸ್ತಕಾ ವಿತರಣೆ ನಡೆಯುತ್ತಿದೆ. ಹದಿನೆಂಟು ವರ್ಷಗಳಿಂದಲೂ ಸಹ ಪುಸ್ತಕ ವಿತರಣೆ ಮಾಡುತ್ತಾ ಬಂದಿದ್ದೇವೆ. ಈ ವರ್ಷ ಶ್ರೀ ಸಿದ್ದಗಂಗಾ ಮಠದಲ್ಲಿ 13 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದೇವೆ. ಅದರ ಜೊತೆಗೆ ಇನ್ಸ್ಟಿಟ್ಯೂಟ್ ಮಕ್ಕಳಿಗೆ ಸುಮಾರು 200 ಮಕ್ಕಳಿಕೆ ಶುಲ್ಕ ಕೊಡುತ್ತಿದ್ದೇವೆ. ಇದನ್ನು ಸಾವಿರ ಮಕ್ಕಳಿಗೆ ಕೊಡುವ ಚಿಂತನೆಯಿದೆ. ಅದೇ ರೀತಿ ಈಗ 36 ವಿದ್ಯಾರ್ಥಿಗಳಿಗೆ ಕೊಡುತ್ತಿದ್ದೇವೆ. ಅದನ್ನ ಒಂದು ಲಕ್ಷ ಮಕ್ಕಳಿಗೆ ಕೊಡುವ ಗುರಿ ಇಟ್ಟುಕೊಂಡಿದ್ದೇವೆ. ಇದರೊಂದಿಗೆ ಪರಿಸರಕ್ಕೂ ಸಹ ಕಾರ್ಯಕ್ರಮ ಆರಂಭಿಸಿದ್ದೇವೆ. ಕಳೆದ ವರ್ಷ 15ಸಾವಿರ ಸಸಿಗಳನ್ನು ನೆಟ್ಟಿದ್ದೇವೆ. ಈ ವರ್ಷ 1,11,111ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ. ನನ್ನ ಜೀವನಾವಧಿಯಲ್ಲಿ ಒಂದು ಕೋಟಿ ಸಸಿಗಳನ್ನು ನೆಟ್ಟು ಪೆÇೀಷಿಸುವ ಗುರಿ ಇಟ್ಟುಕೊಂಡಿದ್ದೇವೆ. ನಮ್ಮದು ಸಸಿ ನೆಟ್ಟಿರುವ ಸಕ್ಸಸ್ ರೇಟ್ 95%ಇದೆ. ಸುಮ್ಮನೆ ಗಿಡ ನೆಟ್ಟು ಹೋಗುವ ಕೆಲಸವಲ್ಲ. ಅದನ್ನ ಪೆÇೀಷಿಸುವ ಕೆಲಸವೂ ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮ ಮಾಡುವುದರಲ್ಲಿ ನಮಗೆ ಸಾಕಷ್ಟು ಉಲ್ಲಾಸ, ಉತ್ಸಾಹ ಬರುತ್ತದೆ. ನಾವು ಈಗ ಸಸಿ ನೆಡುವ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆರಂಭ ಮಾಡುವ ಯೋಜನೆಯೂ ಇದೆ ಎಂದರು.

ಮಕ್ಕಳು ಚೆನ್ನಾಗಿ ಓದಬೇಕು. ಉತ್ತಮ ಸಾಧಕರಾಗಿ ಬೆಳೆಯಬೇಕು. ಭವಿಷ್ಯದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ತಂದೆ ತಾಯಿ ಚೆನ್ನಾಗಿ ನೋಡಿಕೊಂಡು ಅವರು ಸಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪೈ ಫೌಂಡೇಷನ್ ಕುಟುಂಬಸ್ಥರು ಸೇರಿ ವಿವಿಧ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *