ತುಮಕೂರು ಜಿಲ್ಲೆಯ ಹಿರಿಯ ಪತ್ರಕರ್ತ, ಮೈತ್ರಿ ನ್ಯೂಸ್ ಪತ್ರಿಕೆ ಸಂಪಾದಕ ವೆಂಕಟಾಚಲ.ಹೆಚ್.ವಿ. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಪಂಚನಹಳ್ಳಿ ಹೋಬಳಿಯ ದೇವರ ಹೊಸಹಳ್ಳಿಯ ವೆಂಕಟಯ್ಯ ಮತ್ತು ಯಲ್ಲಮ ದಂಪತಿಯ ಮೂರನೇ ಪುತ್ರರಾಗಿದ್ದಾರೆ.
1988ರಲ್ಲಿ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪತ್ರಿಕೆ ವಿತರಕರು, ವರದಿಗಾರರಾಗಿ, ತುಮಕೂರು ವಾರ್ತೆಯಲ್ಲಿ ಪೆÇ್ರೀಫ್‍ರೀಡರಾಗಿ, ಪದವಿಯ ನಂತರ ಪೂರ್ಣಪ್ರಮಾಣದ ವರದಿಗಾರರಾಗಿ ಸೊಗಡು ಪತ್ರಿಕೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಪರಿವರ್ತನ ಮತ್ತು ಸುದ್ದಿ ಅಮೂಲ್ಯ ಪತ್ರಿಕೆಗಳಲ್ಲದೆ, ಲಂಕೇಶ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಈಗ ಮೈತ್ರಿನ್ಯೂಸ್ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೆಂಕಟಾಚಲ.ಹೆಚ್.ವಿ.ವಿವರ.
ಹಿರಿಯ ಪತ್ರಕರ್ತರು ಹಾಗೂ ಮೈತ್ರಿನ್ಯೂಸ್ ಸಂಪಾದಕರಾದ ವೆಂಕಟಾಚಲ.ಹೆಚ್.ವಿ. ಅವರು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಪಂಚನಹಳ್ಳಿ ಹೋಬಳಿಯ ದೇವರ ಹೊಸಹಳ್ಳಿಯ ಬಡ ಕುಟುಂಬವಾದ ಶ್ರೀಯುತ ವೆಂಕಟಯ್ಯ ಮತ್ತು ಶ್ರೀಮತಿ ಯಲ್ಲಮನವರ ಮೂರನೇ ಮಗನಾಗಿದ್ದು, ಇವರ ತಂದೆ ವೆಂಕಟಯ್ಯನವರು ಮೂಲತಃ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಕಡಬ ಹತ್ತಿರದ ಹೊಸಪಾಳ್ಯದವರಾಗಿದ್ದಾರೆ.

ಇಂತಹ ಕುಟುಂಬದಲ್ಲಿ 1972ರ ಜೂನ್ 1ರಂದು ಜನಿಸಿದ ವೆಂಕಟಾಚಲ.ಹೆಚ್.ವಿ. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಗಳೂರು ಜಿಲ್ಲೆ ದೇವರಹೊಸಹಳ್ಳಿಯಲ್ಲಿ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪಂಚನಹಳ್ಳಿಯಲ್ಲಿ ಇವರ ಗುರುಗಳಾದ ಹೆಚ್.ಕೆಂಚಮಾರಯ್ಯನವರ ಮಾರ್ಗದರ್ಶನದಲ್ಲಿ ಪಡೆದು, ಪ್ರಥಮ ವರ್ಷದ ಪ್ರೌಢಶಾಲೆಯನ್ನು ದಾವಣಗೆರೆಯ ಬಾಲಕರ ಪ್ರೌಢಶಾಲೆಯಲ್ಲಿಯೂ, ಮತ್ತೆರಡು ವರ್ಷದ ಪ್ರೌಢಶಾಲೆಯನ್ನು ಪಂಚನಹಳ್ಳಿಯಲ್ಲಿಯೂ, ಪಿ.ಯು.ಸಿ ಮತ್ತು ಬಿಎಸ್ಸಿಯನ್ನು ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲೂ ಹಾಗೂ ಪತ್ರಿಕೋಧ್ಯಮದ ಡಿಪ್ಲೊಮೋ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ.ಅಲ್ಲದೆ ಮೈಸೂರು ವಿ.ವಿ.ಯು ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ವಿಶ್ಲೇಷಣೆ ವರದಿಗಾರರೆಂದು ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.

ಬಡತನದವಿದ್ದುದರಿಂದ ಇವರು ಓದುವ ಸಲುವಾಗಿಯೇ ಪಿ.ಯು.ಸಿ. ಓದುತ್ತಿರುವಾಗಲೇ 1988ರಲ್ಲಿ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪತ್ರಿಕೆ ವಿತರಕರು, ವರದಿಗಾರರಾಗಿ, ತುಮಕೂರು ವಾರ್ತೆಯಲ್ಲಿ ಪ್ರೋಫ್ ರೀಡರಾಗಿ, ಪದವಿಯ ನಂತರ ಪೂರ್ಣಪ್ರಮಾಣದ ವರದಿಗಾರರಾಗಿ ಸೊಗಡು ಪತ್ರಿಕೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಈ ಮಧ್ಯೆ ಪರಿವರ್ತನ ಮತ್ತು ಸುದ್ದಿ ಅಮೂಲ್ಯ ಪತ್ರಿಕೆಗಳಲ್ಲದೆ, ಲಂಕೇಶ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸೊಗಡು ಪತ್ರಿಕೆ ನಂತರ ತಮ್ಮದೇ ಸಂಪಾದಕತ್ವದಲ್ಲಿ ‘ಮೈತ್ರಿನ್ಯೂಸ್’ ಪತ್ರಿಕೆಯನ್ನು ನಡೆಸುತ್ತಿದ್ದು, ವೆಂಕಟಾಚಲ.ಹೆಚ್.ವಿ. ಅವರು ಪತ್ರಿಕೋಧ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸುದ್ದಿಯನ್ನು ಬರೆಯುವ, ವಿಶ್ಲೇಷಣೆಯ ಬಗ್ಗೆ ಇಂದಿಗೂ ಒಂದು ತರಹ ಕಿರಿಯ ಪರ್ತಕರ್ತರ ತಿದ್ದುವ ಗುರುವಾಗಿದ್ದಾರೆ, ಇವರು ಬುದ್ದಿಸಂನ್ನು ಹೆಚ್ಚು ಅನುಸರಿಸುವರಾಗಿದ್ದು, ಹಲವಾರು ಹಿರಿಯ ಪತ್ರಕರ್ತರು, ಸಾಹಿತಿಗಳು, ಚಿಂತಕರ ಒಡನಾಡಿಯಾಗಿದ್ದು, ವೆಂಕಟಾಚಲ.ಹೆಚ್.ವಿ. ಅವರು ತುಮಕೂರು ಜಿಲ್ಲೆಯ ಎಲ್ಲಾ ತರಹದ ಸುದ್ದಿ ವಿಶ್ಲೇಷಣೆ ಕರಾರುವಕ್ಕಾಗಿ ಮಾಡುವ ಒಬ್ಬ ಪ್ರಾಮಾಣಿಕ ಪತ್ರಕರ್ತರಾಗಿ ಇಂದಿಗೂ ತಮ್ಮ ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪನ್ನು ಇಟ್ಟುಕೊಂಡಿದ್ದಾರೆ.
ಇವರ ಸಂಪಾದಕತ್ವದಲ್ಲಿ ತುಮಕೂರಿನ ಸಾಂಸ್ಕøತಿಕ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದ ಭೂಮಿ ಬಳಗದ ಜಿ.ಎಸ್.ಸೋಮಣ್ಣನವರ “ಭೂಮಿ ತೂಕದ ಸೋಮಣ್ಣ” ಮತ್ತು ಜಿಲ್ಲೆಯ ಬಹು ದೊಡ್ಡ ದಲಿತ ಹೋರಾಟಗಾರರಾದ ರಂಗಸ್ವಾಮಿ ಬೆಲ್ಲದಮಡು ಅವರ “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು” ಪುಸ್ತಕಗಳನ್ನು ಹೊರ ತಂದಿದ್ದಾರೆ.
ಇವರು ಕುವೆಂಪುರವರಿಂದ ಹಿಡಿದು ಬರಗೂರು ರಾಮಚಂದ್ರಪ್ಪ, ಕಾಳೇಗೌಡ ನಾಗವಾರರವರೊಂದಿಗೆ ಸಾಹಿತ್ಯ ಕ್ಷೇತ್ರದ ಒಡನಾಡಿಯಾಗಿ ಗುರುತಿಸಿಕೊಂಡಿದ್ದಾರೆ.
ಇವರ ಮಾಧ್ಯಮ ಕ್ಷೇತ್ರದ(ಪತ್ರಿಕೋದ್ಯಮ) ಸೇವೆಯನ್ನು ಗುರುತಿಸಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.