ಬೀದಿ ನಾಯಿಯ ದಾಳಿಗೆ ತುತ್ತಾಗಿರುವ ಬಾಲಕನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ತುಮಕೂರು ಮಹಾನಗರಪಾಲಿಕೆ ಭರಸಿಬೇಕು ಮತ್ತು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ಮುಜೀಬ್ ಆಗ್ರಹಿಸಿದರು.
ಅವರು ಸಿಪಿಐಎಂ ಪಕ್ಷದ ವತಿಯಿಂದ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಮತ್ತು ನಾಯಿಗಳ ಸಂತತಿಯ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ನೀಡಬೇಕು, ಬೀದಿ ನಾಯಿಗಳ ದಾಳಿಗೆ ಒಳಗಾದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮಹಾನಗರಪಾಲಿಕೆ ಮುಂಭಾಗ ನಡೆಸಿದ ಪ್ರತಿಭಟನಯಲ್ಲಿ ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿದೆ ಆದರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಪಶುವಿಭಾಗ ಮತ್ತು ಆರಣ್ಯ ವಿಭಾಗಗಳಿಲ್ಲ ಅದನ್ನು ತಕ್ಷಣ ಪ್ರಾರಂಬಿಸಬೇಕು ಎಂದು ಆಗ್ರಹಿಸಿದ ಅವರು ನಾಯಿ ದಾಳಿಯಿಂದ ಗಾಯಗೊಂಡ ಮಗುವಿಗೆ ಚಿಕಿತ್ಸೆ ನೀಡಬೇಕಾದ ಜಿಲ್ಲಾಸ್ಪತ್ರೆಯಲ್ಲಿ ಸರ್ಜನ್ ಇಲ್ಲ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಖಾಸಗೀ ಆಸ್ಪತ್ರೆಗೆ ತೆರಳಬೇಕಾಗಿದೆ ೩೦ ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆಯಿರುವ ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಮುಖ್ಯವೈದ್ಯರಿಲ್ಲದೆ ಚಿಕಿತ್ಸೆಗೆ ಬೇರೆಡೆಗೆ ತರಳಬೇಕಾಗಿದೆ ತುಮಕೂರು ಜಿಲ್ಲೆ ಇಬ್ಬರು ಪ್ರಭಾವಿ ಸಚಿವರನ್ನು ಹೊಂದಿದ್ದು ಉಸುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್‌ರವರು ಸೂಕ್ತ ಗಮನಹರಿಸಿ ಜಿಲ್ಲಾಸ್ಪತ್ರೆಗೆ ವೈದ್ಯರನ್ನು ನೇಮಕಮಾಡಿ ಮೂಲಭೂತ ಸೌಲಭ್ಯಗಳಲ್ಲಿ ಕಲ್ಪಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು
ಸಿಪಿಐ (ಎಂ) ನಗರ ಕಾರ್ಯದರ್ಶಿ ಎ. ಲೋಕೇಶ್ ಮಾತನಾಡಿ ನಗರದ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಇದನ್ನು ನಿಯಂತ್ರಿಸಬೇಕು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಬೇಕು ಶಾಲೆಗೆ ಹೋಗುವ ಮಕ್ಕಳು ಭಯದಿಂದಲೇ ಶಾಳೆಗಳಿಗೆ ತೆರಳಬೇಕಾಗಿದೆ, ವಯೋವೃದ್ಧರು, ವಾಯುವಿಹಾರಕ್ಕೆ ತೆರಳುವವರು ಸಹ ಭಯಪಡಬೇಕಾದ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ ಎಂದರು.
ಹೋರಾಟದ ಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಇದು ಜನಪರವಾದ ಹೋರಾಟವಾಗಿದ್ದು ಬೆಂಬಲಿಸುವುದಾಗಿ ತಿಳಿಸಿದರು ಕೋಳಗೇರಿ ನಿವಾಸಿಗಳ ಸಂಘದ ಮುಖಂಡರಾದ ಅನುಪಮ ಮಾತನಾಡಿ ಕೋತಿತೋಪು ಸೇರಿದಂತೆ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು ವಯ್ಸಾದವರು ಬಿದ್ದ ಉದಾಹರಣೆಗಳಿಗೆ ಚಿಕ್ಕ ಮಕ್ಕಳ ಮೇಲೆ ಎರಗಿರುವ ಸಾಕಷ್ಟು ಉದಾಹರಣೆಗಳಿವೆ ಇದಕ್ಕೆ ಮಹಾನಗರಪಾಲಿಕೆ ಕಡಿವಾಣ ಹಾಕಬೇಕು ಎಂದರು. ಯುವ ಮುಖಂಡ ಸುಜೀತ್‌ನಾಯಕ್ ಮಾತನಾಡಿ ಕೈಗಾರಿಕೆಗಳಿದ ರಾತ್ರಿ ಪಾಳಯದ ಕೆಲಸ ಮುಗಿಸಿ ಬರುವವರು ಭಯದಿಂದಲೇ ಮನೆಗೆ ತೆರಳಬೇಕಾಗಿದೆ ಮಳೆಗಾಲವಾದ್ದರಿಂದ ನಾಯಿಗಳ ಹಾವಳಿಗೆಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳು ಇವೆ ತುಮಕೂರು ನಗರ ಶಾಸಕರು ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಉನ್ನತಿಗೆ ಕ್ರಮವಹಿಸಬೇಕು ಎಂದರು
ಮರಳೂರು ದಿಣ್ಣೆ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಕ್‌ದುಮ್‌ಅಲಿ ಮಾತನಾಡಿ ನಮ್ಮ ಶಾಲೆಗೆ ಸುಮಾರು ೩೦೦ ಜನ ವಿದ್ಯಾರ್ಥಿಗಳ ಬರುತ್ತಿದ್ದು ಈ ಭಾಗದಲ್ಲಿ ನಾಯಿಗಳ ಹಾವಳಿ ತುಂಬಾ ಇದೆ ಇದನ್ನು ನಿಯಂತ್ರಿಸಬೇಕು ಎಂದರು ಜನವಾದಿ ಮಹಿಳಾ ಸಂಘಟನೆಯ ಟಿ.ಆರ್. ಕಲ್ಪನಾ ಮಾತನಾಡಿ ಬೀದಿನಾಯಿಗಳನ್ನು ನಿಯಂತ್ರಿಸಲು ವಾರ್ಡ್ವಾರು ಅಧಿಕಾರಿಗಳನ್ನು ನೇಮಕಮಾಡಿ ಕ್ರಮಗೊಳ್ಳಬೇಕು ಎಂದರು
ಮನವಿ ಸ್ವೀಕರಿಸಿ ಮಾತನಾಡಿದ ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಬಿ.ವಿ.ಆಶ್ವಿಜಾ ರವರು ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ಹಾಗೂ ಹಾವಳಿ ನಿಯಂತ್ರಿಸಲು ಸುಮಾರು ೩೦೦೦ ಸಾವಿರ ನಾಯಿಗಳ ಸಂತಾನಹರಣ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ, ಗಾಯಗೊಂಡ ಬಾಲಕನ ಚಿಕಿತ್ಸೆ ನಿಯಾನುಸಾರ ಕ್ರಮ ಕೈಗೊಳ್ಳಲಾಗುವುದು, ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಮೂಲಭೂತ ಸೌಲಭ್ಯಗಳೊಂದಿಗೆ ಅಜ್ಜಗೊಂಡನಹಳ್ಳಿಯಲ್ಲಿ ಚಿಕಿತ್ಸಾಲಯ ಆರಂಬಿಸಲಾಗುವುದು ಎಂದರು. ನಾಯಿ ದಾಳಿಗೆ ಒಳಗಾಗಿರುವ ಬಾಲಕನ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದರು ಪ್ರತಿಭಟನೆಯಲ್ಲಿ ಮೇಳೇಕೋಟೆಯ ಶಂಕರಪ್ಪ, ಆಲ್ತಾಫ್, ರಾಘವೇಂದ್ರ ಎಸ್, ಪಂಡಿತ್ ಜವಹರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಅರುಣ್, ಖುದ್ದುಸ್, ಕೃಷ್ಣಮೂರ್ತಿ, ಮುಬಾರಕ್, ತಾಜುದ್ದೀನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.