ತುಮಕೂರು: ಇತ್ತೀಚಿನ ದಿನಗಳಲ್ಲಿ ದೃಷ್ಟಿವಿಲ್ಲದ ಮಗುವಿಗೆ “ಕತ್ತಲೆಯ ಜಗತ್ತನ್ನು ಬೆಳಕಿಸುವುದಕ್ಕೆ” ಈ ಇಂಟ್ರಾಕ್ಯೂಲರ್ ಲೈನ್ಸ್ ಸಹಾಯಕವಾಗುತ್ತದೆ. ಕಣ್ಣಿನ ಆರೈಕೆ ಮತ್ತು ಕಣ್ಣಿನ ಪೊರೆ ಸೇವೆಗಳನ್ನು ಒದಗಿಸಲು ಹೆಚ್ಚು ಅಗತ್ಯವಿರುವ ಸಹಾನುಭೂತಿಯ ಗುಣಪಡಿಸುವ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್ ತಂದಿದ್ದಾರೆ. ಗ್ರಾಮೀಣ ಜನತೆ ಅನಾವಶ್ಯಕವಾಗಿ ಕುರುಡರಾದ ಪುಟ್ಟ ಮಕ್ಕಳಿಗೆ ಕಣ್ಣಿನ ದೃಷ್ಟಿಯನ್ನು ತರುವುದು ಮಕ್ಕಳ ಬೆಳವಣಿಗೆಗಾಗಿ ದೃಷ್ಟಿಯ ಆರೋಗ್ಯವನ್ನು ಸುಧಾರಿಸುತ್ತದೆ. ಕೋವಿಡ್‍ನ ಸಮಯದಲ್ಲಿ ಬೆಂಗಳೂರಿನ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್ ಉತ್ತಮ ಸೇವೆಗೆ ಶ್ಲಾಘನೀಯವಾಗಿದೆ ಎಂದು ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್ ರವರು ತಿಳಿಸಿದರು.
ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಗೆ ಬೆಂಗಳೂರಿನ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತ ಇಂಟ್ರಾಕ್ಯೂಲರ್ ಲೈನ್ಸ್ ಕೊಡುಗೆಯನ್ನು ಡಿ.29 ರಂದು ಶುಕ್ರವಾರ ಕೊಡುಗೆಯಾಗಿ ನೀಡಿದ್ದಾರೆ. ಈ ಲೈನ್ಸ್‍ನ್ನು ಉಚಿತವಾಗಿ ಕಣ್ಣಿನ ಪೊರೆಯ ಟೆಸ್ಟ್‍ಗೆ ಬಳಕೆ ಮಾಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಲಾವಣ್ಯರವರು ಮಾತನಾಡುತ್ತಾ ಚಿಕ್ಕ ಮಕ್ಕಳಿಗೆ ಪೊರೆಗಳನ್ನು ಸ್ಕ್ರೀನಿಂಗ್ ಮಾಡುವುದು ಶೇ.15% ರಷ್ಟು ತುಮಕೂರು ಜಿಲ್ಲೆಯಲ್ಲಿ ಮಕ್ಕಳಲ್ಲಿ ದೃಷ್ಟಿ ಮುಕ್ತಗೊಳಿಸುವುದು. ಮೊದಲು ಚಿಕ್ಕಮಕ್ಕಳಲ್ಲಿಯೂ ಶಾಲೆಗಳಲ್ಲಿ ಆನಂತರ ಸ್ಕ್ರೀನಿಂಗ್‍ನಿಂದ ಟೆಸ್ಟ್ ಮಾಡಿದ ನಂತರ ಗುಣಮಟ್ಟದ ಇಂಟ್ರಾಕ್ಯೂಲರ್ ಲೈನ್ಸ್ ಒದಗಿಸಲಾಗಿದೆ. ಉಚಿತವಾಗಿ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸಲಾಗುತ್ತದೆ. ಗ್ರಾಮೀಣ ಭಾರತದ ಮೂಲೆ ಮೂಲೆಗಳಿಂದಲೂ ಕಣ್ಣಿನ ಆರೈಕೆಯನ್ನು ಒದಗಿಸುವುದಕ್ಕೆ ನಯೋನಿಕ್ ಐ ಕೇರ್ ಉತ್ತಮ ಸೇವೆಯನ್ನು ಒದಗಿಸುತ್ತದೆ ಎಂದರು. ನಯೋನಿಕಾ ಅವರ ರಾಷ್ಟ್ರವ್ಯಾಪ್ತಿಯಲ್ಲಿ ಕಣ್ಣಿನ ಆರೋಗ್ಯದ ಭಾಗವಾಗಿ ಕಣ್ಣಿನ ಆರೋಗ್ಯವನ್ನು ಸಮೃದ್ಧಗೊಳಿಸುವಲ್ಲಿ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ನೆರೆಯ ಗ್ರಾಮೀಣ ಸಮುದಾಯಗಳ ಮಕ್ಕಳಿಗೆ ಶಿಶು ವೈದ್ಯಕೀಯ ಶಸ್ತ್ರಚಿಕಿತ್ಸೆ ನಡೆಸಲು ಸಹಾಯಕವಾಗಿದೆ ಎಂದರು.
ಡಾ.ಸಂದೀಪ್ ಶೆಣೈರವರು ಮಾತನಾಡುತ್ತಾ ಕರ್ನಾಟಕ ಮತ್ತು ಪುಣೆ ಇತಂಹ ರಾಜ್ಯಾದ್ಯಂತ ಸುಮಾರು 38 ಸರ್ಕಾರಿ ಆಸ್ಪತ್ರೆಗಳಿಗೆ ಕೋವಿಡ್ ಬೆಡ್, ಐಸಿಯು, ಲಸಿಕೆ, ಆಕ್ಸಿಜನ್‍ಯಂತಹ ಉಪಕರಣಗಳು ನೀಡಿದ್ದಾರೆ. ನೇತ್ರ ಆರೋಗ್ಯವನ್ನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆಗಳನ್ನು ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್‍ನ ವತಿಯಿಂದ ನಡೆಸಲಾಗಿತ್ತು.
ಪ್ರಶಾಂತ್ ಎಸ್.ಬಿ.ರವರು ಮಾತನಾಡುತ್ತಾ ಸೆಂಟ್ರಲ್ ಮಿಚಿಗನ್ ಯೂನಿವರ್ಸಿಟಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಸುಮಾರು 2012ರಲ್ಲಿ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್‍ನ್ನು ಸ್ಥಾಪಿಸಲಾಯಿತ್ತು. ಸುಮಾರು 10 ವರ್ಷದಲ್ಲಿ 44 ಸಾವಿರ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, 1,23,000 ಕ್ಕೂ ಹೆಚ್ಚು ಉಚಿತ ಕನ್ನಡಕಗಳು, 9000 ಕ್ಕೂ ಹೆಚ್ಚು ಉಚಿತ ಡಯಾಬೀಟಿಕ್ ರೆಟಿನೋಪತಿ ಸ್ಕ್ರೀನಿಂಗ್‍ನ್ನು ನಡೆಸಲಾಗಿತ್ತು. 25.5 ಲಕ್ಷಕ್ಕೂ ಹೆಚ್ಚು ಉಚಿತ ನೇತ್ರ ತಪಾಸಣೆಯನ್ನು ನಮ್ಮ 7 ನವೀನ ಕಣ್ಣಿನ ಆರೋಗ್ಯ ಯೋಜನೆಗಳ ಮೂಲಕ ಗ್ರಾಮೀಣ ಮತ್ತು ಹಳ್ಳಿ ಜನರಿಗೆ ಅತ್ಯಂತ ಉಪಯುಕ್ತವಾಗಿತ್ತು ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯ ಎಲ್ಲ ಉಪಕರಣಗಳನ್ನು ಹೊಂದಿರುತ್ತದೆ ಬೆಂಗಳೂರಿನ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್‍ರವರು ಉಚಿತ ಇಂಟ್ರಾಕ್ಯೂಲರ್ ಲೈನ್ಸ್ ಸಹಾಯಹಸ್ತ ಕೋರಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಯೋನಿಕಾ ಐ ಕೇರ್ ಚಾರಿಟೆಬಲ್ ಟ್ರಸ್ಟ್‍ನ ಕಣ್ಣಿನ ಆರೋಗ್ಯ ಶಸ್ತ್ರಚಿಕಿತ್ಸಕರಾದ ಡಾ.ಸುರೇಖಾ, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‍ಕುಮಾರ್, ಶ್ರೀದೇವಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ರವಿಪ್ರಕಾಶ್, ಡಾ.ಕಲ್ಲೇಶ್, ಶ್ರೀದೇವಿ ಆಸ್ಪತ್ರೆಯ ಸಿ.ಇ.ಓ ಪ್ರದೀಪ್, ಮುಂತಾದವರು ಉಪಸ್ಥಿತರಿದ್ದರು.