ತುಮಕೂರು: ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಗೆ ನಡೆದ ಚುನಾವಣೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಲೇಖಕಿ ಡಾ.ಆಶಾರಾಣಿ ಬಗ್ಗನಡು ಆಯ್ಕೆಯಾಗಿದ್ದಾರೆ.
ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದು ಡಾ.ಆಶಾರಾಣಿ ಬಗ್ಗನಡು ಅತ್ಯಧಿಕ ಮತಗಳನ್ನು ಗಳಿಸಿ ಜಯಶೀಲರಾದರು.
ಒಟ್ಟು 54 ಮತಗಳಲ್ಲಿ 48 ಮತಗಳನ್ನು ಆಶಾರಾಣಿ ಬಗ್ಗನಡು ಪಡೆದರು. ಸುಶೀಲಾ ಸದಾಶಿವಯ್ಯ, ನಾಗರತ್ನ ಚಂದ್ರಪ್ಪ ಪ್ರತಿಸ್ಪರ್ಧಿಗಳಾಗಿದ್ದರು.
ನೂತನ ಅಧ್ಯಕ್ಷೆ ಡಾ.ಆಶಾರಾಣಿ ಬಗ್ಗನಡು ಅವರನ್ನು, ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮತ್ತು ಸಂಘದ ಸದಸ್ಯರು ಅಭಿನಂದಿಸಿದರು.