ನಾಡು-ನುಡಿ, ಸಾಹಿತ್ಯ ಒಪ್ಪವಾಗಿ, ಓರಣವಾಗಿರಬೇಕೆಂದರೆ ಅಲ್ಲಿ ಮಹಿಳೆ ಇರಲೇ ಬೇಕು, ಮಹಿಳೆ ಇಲ್ಲದ ಕ್ಷೇತ್ರವು ಅದೊಂದು ತರಹ ಬರಡು ಭೂಮಿ ಇದ್ದ ಹಾಗೆ, ಮಹಿಳೆ ಇದ್ದಲ್ಲಿ ಸ್ವಚ್ಚ-ಸಚ್ಚಾರಿತ್ರ್ಯ ಇರುತ್ತದೆ ಎಂಬುದು ನಮ್ಮ ಹಿರಿಯರು ಹೇಳಿರುವ ಮಾತು.

ಇಂದಿಗೂ ನಾವು ಭೂತಾಯಿಯನ್ನು ಸಹ ಹೆಣ್ಣು ಎಂಬಂತೆಯೆ ನೋಡುವ ನಾವು, ಆದರೆ ಮನುಷ್ಯ ಮಾತ್ರ ಹೆಣ್ಣು-ಗಂಡು ಎಂದು ಮಾಡಿಕೊಂಡು ಹೆಣ್ಣನ್ನು ಸಹನಾಶೀಲಳು ಎಂದು ಹೇಳುತ್ತಾ, ಅವಳನ್ನು ನಾಲ್ಕು ಗೋಡೆಗಳ ಮಧ್ಯೆ ಕಟ್ಟಿ ಹಾಲು ಗಂಡು ನೋಡಿದ್ದಾನೆ, ಇದನ್ನೆಲ್ಲಾ ಮೀರಿ, ಹೆಣ್ಣು ತಾನು ಇಲ್ಲದೆ ಯಾವ ರಂಗವೂ ಇರಲಾರದು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ, ಇಂತಹ ಹೆಣ್ಣು ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ಯಶಸ್ಸನ್ನು ಕಾಣುತ್ತಿದ್ದು, ಹೆಚ್ಚು ಸಾಹಿತ್ಯ ರಂಗದಲ್ಲೂ ತನ್ನ ಛಾಪನ್ನು ಮೂಡಿಸಿದ್ದು, ಸಾಹಿತ್ಯ ಕ್ಷೇತ್ರದ ಒಂದು ಅಂಗವಾಗಿರುವ ಸಂದರ್ಭದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಮಹಿಳಾ ಸಾಹಿತಿಗಳು ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ಮತ್ತು ಶ್ರೇಷ್ಠತೆಯನ್ನು ತರುತ್ತಿದ್ದಾರೆ.
ಇಂತಹ ನಿಟ್ಟಿನಲ್ಲಿ ಲೇಖಕಿ, ಕವಯತ್ರಿ, ಉತ್ತಮ ವಾಗ್ಮಿ, ಸಾಹಿತ್ಯ ವಲಯದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿರುವ ಬಿ.ಸಿ.ಶೈಲಾನಾಗರಾಜು ಅವರು ಸಿದ್ದಯ್ಯ ಪುರಾಣಿಕ ಕಾವ್ಯ ಪ್ರಶಸ್ತಿಗೆ ಭಾಜನರಾಗಿರುವುದು ಖುಷಿ ಮತ್ತು ಹೆಮ್ಮೆಯ ವಿಷಯ.

ಬಿ.ಸಿ.ಶೈಲಾನಾಗರಾಜು ಅವರು ಈಗಾಗಲೆ ಜಿಲ್ಲೆಯ ಮುಂಚೂಣಿ ಮಹಿಳಾ ಕವಯತ್ರಿ, ಸಾಹಿತಿಗಳಾಗಿ ಹೆಸರು ಮಾಡಿರುವುದಲ್ಲದೆ, ಇವರು ಮಹಿಳಾ ಸಂಘಟನೆಯಲ್ಲಿ ತೊಡಗಿ ಹಲವು ಮಹಿಳಾ ಪರ ಹೋರಾಟಗಳನ್ನು ಮಾಡಿರುವುದಲ್ಲದೆ, ತಮ್ಮದೆ ಆದ ಶೈನಾ ಬಳಗದಿಂದ ಹಲವಾರು ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿಗಳನ್ನು ಮಾಡಿ ಯುವಕರು, ಯುವತಿಯರು ಕವಿಗಳಾಗಿ ಬೆಳಕಿಗೆ ಬರಲು ಕಾರಣಕರ್ತರಾಗಿದ್ದಾರೆ.

ಬಹುತೇಕ ಎಲ್ಲಾ ರಂಗಗಳಲ್ಲೂ ಸಾಹಿತ್ಯ ರಚನೆ ಮಾಡಿರುವ ಬಿ.ಸಿ.ಶೈಲಾನಾಗರಾಜುರವರು, ಪ್ರಗತಿ ಪರ ಲೇಖಕರು, ಮಹಿಳಾ ಪರ ಚಿಂತಕರು, ಅಪ್ರತಿಮ ಸಂಘಟಕರಾಗಿದ್ದಾರೆ. ಇವರು ರೂಪಿಸಿದ ಅನೇಕ ಮಹಿಳಾ ಪರ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಹೋರಾಟಗಳು ಅನೇಕ ಸಾಹಿತಿಗಳನ್ನು, ಬರಹಗಾರರನ್ನು ಹುಟ್ಟು ಹಾಕಿದೆ.
ಇವರ ಮಹಿಳಾ ದೇಸಿ ಸಾಂಸ್ಕøತಿಕ ಸಮ್ಮೇಳನ “ದೇಸಿ ಉತ್ಸವ” ಇವರಿಗೆ ಕೀರ್ತಿ ಮತ್ತು ಜನ ಮನ್ನಣೆಯನ್ನು ತಂದು ಕೊಟ್ಟಿದೆ.
ಇವರ ಮಹಳಾ ಪರ ಚಿಂತನೆಗಳು, ನೂರಾರು ಮಹಿಳೆಯರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿವೆ. ನೊಂದವರ ದನಿಯಾಗಿ ಶೋಷಿತರ ಸಾಂತ್ವನವಾಗಿ ಮಹಿಳಾ ಶಕ್ತಿಯಾಗಿ ಸಮಾಜದ ನಡುವೆ ಇವರು ಆಶಾಕಿರಣವಾಗಿದ್ದಾರೆ. ಇವರು ನಡೆಸುವ ಮಾನವೀಯ ಕುಟುಂಬ ಸಲಹಾ ಕೇಂದ್ರ ಅನೇಕ ಕುಟುಂಬಗಳನ್ನು ಒಂದು ಮಾಡಿದೆ. ಗ್ರಾಮೀಣ, ಹಿಂದುಳಿದ
ಮತ್ತು ಅಲ್ಪಸಂಖ್ಯಾತ ಮಹಿಳೆಯರ ಜಾಗೃತಿಗಾಗಿ ಅನೇಕ ಯೋಜನೆಗಳನ್ನು ಸಂಘಟನಾತ್ಮಕವಾಗಿ ರೂಪಿಸಿ ಅವರ ಅರಿವು ಮತ್ತು ಏಲಿಗೆಗೆ ಶ್ರಮಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆ, ನೊಂದವರ ಮಹಿಳೆಯರಿಗೆ ನ್ಯಾಯಯುತವಾಗಿ ಸರ್ಕಾರದ ಮಹಿಳಾಪರ ಯೋಜನೆಗಳನ್ನು ತಿಳಿಸಿ, ಸೌಲಭ್ಯ ಒದಗಿಸುವಲ್ಲಿ ಸಹಕಾರಿಯಾಗಿದ್ದಾರೆ.
ಕವಯತ್ರಿ ಬಿ.ಸಿ.ಶೈಲಾನಾಗರಾಜ್‍ರವರು ರಾಜ್ಯ ಮಟ್ಟದಲ್ಲಿ ಕರ್ನಾಟಕ ಮಾನವೀಯ ಮಹಿಳಾ ಅಧ್ಯಯನ ಕೇಂದ್ರ, ಕರ್ನಾಟಕ ಉದ್ಯೋಗಸ್ಥ ಮಹಿಳೆಯರ ಸಂಘ, ಜನಮುಖಿ ಸಾಹಿತ್ಯ ಸಂಘಟನೆ, ಮುಸ್ಲಿಂ ಮಹಿಳಾ ಸಂಘಟನೆ ಕರ್ನಾಟಕ, ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟ, ಕರ್ನಾಟಕ, ರಾಜ್ಯ ಮಕ್ಕಳ ಹಕ್ಕು ಮತ್ತು ಅಭಿವೃದ್ಧಿ ಸಂಸ್ಥೆ, ಸಾಮಾಜಿಕ ಪಿಡುಗುಗಳ ನಿವಾರಣಾ ಸಂಸ್ಥೆ, ವಚನ ಸಾಹಿತ್ಯ ಸಂಘಟನೆ ಕರ್ನಾಟಕ, ಕರ್ನಾಟಕ ರಾಜ್ಯ ಯುವ ವೇದಿಕೆ ಮುಂತಾದ ಸಂಘಟನೆಗಳಲ್ಲಿ ಮಹಿಳೆಯರ ಪರವಾಗಿ ಹೋರಾಟದ ನೇತೃತ್ವ ವಹಿಸಿದ್ದಾರೆ.
ಶೈಲಾನಾಗರಾಜ್‍ರವರು ಸಾಹಿತ್ಯ ಹಾಗೂ ಮಹಿಳಾ ಚಿಂತನೆಗೆ ಸಂಬಂಧಿಸಿದಂತೆ ಹದಿಮೂರು ಪುಸ್ತಕಗಳನ್ನು ಬರೆದಿದ್ದು ಇವುಗಳಲ್ಲಿ “ಗ್ರಾಮೀಣ ಮಹಿಳಾ ಲೋಕ”, ‘ಮಹಿಳಾ ನಾಯಕತ್ವ ಮತ್ತು ಸಂಘಟನೆಯ ಸವಾಲುಗಳು’ “ಅಕ್ಕಮಹಾದೇವಿ ಮತ್ತು ಸ್ರ್ತೀವಾದ” ಹಾಗೂ “ಮಾನವಿ“ ಗೀತ ಸಂಕಲನ ಇವರಿಗೆ ಹೆಸರು ತಂದು ಕೊಟ್ಟಿವೆ.
ಇವರ ಕ್ರಿಯಾಶೀಲತೆ, ನಾಯಕತ್ವದ ಗುಣ, ಮಹಿಳಾಪರ, ಜನಮುಖಿ ಗುರುತಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರಿಗೆ ತುಮಕೂರು ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಮಟ್ಟದ ಬಸವಜ್ಯೋತಿ ಪ್ರಶಸ್ತಿ, “ಅಮ್ಮ” ಕಾವ್ಯ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಮಹಿಳಾ ಸಂಘಟಕಿ ಪ್ರಶಸ್ತಿ, ಮಹಿಳಾ ನೇತ್ರಿ ಪ್ರಶಸ್ತಿ ಮತ್ತು ಮರಿದೇವರು ದತ್ತಿ ನಿಧಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬಿ.ಸಿ.ಶೈಲಾನಾಗರಾಜುರವರು ಕನಸುಗಳ ದಾಟಿದವರು, ಮಾನವಿ, ಬಯಲು ಮತ್ತು ಏಕಾಂತ, ತಂಗಿ ಕೇಳವ್ವಾ ಕವನಸಂಕಲನಗಳನ್ನು , ಅಕ್ಕಮಹಾದೇವಿ ಮತ್ತು ಸ್ತ್ರೀವಾದ, ಗ್ರಾಮೀಣ ಮಹಿಳಾ ಲೋಕ, ಮಹಿಳಾ ನಾಯಕತ್ವ ಮತ್ತು ಸಂಘಟನೆಯ ಸವಾಲುಗಳು, ಹೆಣ್ಣೆಂದರೆ ಶಕ್ತಿಯು, ತಂಗಿ ಕೇಳವ್ವಾ... ಮಹಿಳಾ ಜಾಗೃತಿ ಗೀತೆಗಳ ಧ್ವನಿಸುರಳು(ಸಿಡಿ) ಮಹಿಳಾ ಅಧ್ಯಯನಗಳನ್ನು ಮತ್ತು ಸಿದ್ಧರಾಮನ ಕಾಯತತ್ವ, ಅಲ್ಲಮ, ಸಮತಾಯೋಗಿ ಸಿದ್ಧರಾಮೇಶ್ವರರು, ಆನಂಧ ತತ್ವ (ವ್ಯಕ್ತಿತ್ವ ಕೃತಿ), ಸಿದ್ಧರಾಮೇಶ್ವರರ ಆಯ್ದ ವಚನಗಳು, ಸಿದ್ಧರಾಮ ಸಂಸಕೃತಿ ವಿಚಾರ ಕೃತಿಗಳನ್ನು ಮತ್ತು ಮಾರ್ಟಿನ್ ಲೂಥರ್ ಕಿಂಗ್( ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿತ) ಡಾ||ನಿರುಪಮ, ಮಹಿಳಾ ಸಂಸಕೃತಿ (ಸಂಶೋಧನೆ), ನೀಲಾಂಬಿಕೆ(ಮೈಸೂರು ವಿಶ್ವವಿದ್ಯಾಲಯ ಪ್ರಕಟಿತ), “ಜೀವ ನೀಡುವ ಮಹಾತಾಯಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಎಂಬ ವ್ಯಕ್ತಿಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇದಲ್ಲದೆ “ಶೈನಾ” ಎಂಬ ಕೈ ಬರಹದ ಸಾಹಿತ್ಯ ಪತ್ರಿಕೆಯನ್ನು ಬಿ.ಸಿ.ಶೈಲಾನಾಗರಾಜುರವರು ತರುತ್ತಿದ್ದು, ಈ ಕೈ ಬರಹದ ಪತ್ರಿಕೆಯು ಕನ್ನಡ ಸಾಹಿತ್ಯ ಪತ್ರಿಕಾ ಲೋಕದಲ್ಲಿ ವಿಶೇಷ ಸ್ಥಾನ ಗಳಿಸಿದೆ.
ಇದೀಗ ಡಾ.ಶೈಲಾನಾಗರಾಜು ಅವರ ಸಾಹಿತ್ಯ ಕ್ಷೇತ್ರದ ಸೇವೆ ಗುರುತಿಸಿ ಸಿದ್ದಯ್ಯ ಪುರಾಣಿಕ ಕಾವ್ಯ ಪ್ರಶಸ್ತಿ ದೊರತಿರುವುದು ಸಂತೋಷದ ವಿಷಯವಾಗಿದೆ.
-ಮೇಘನಾ. ತುಮಕೂರು.