ತುಮಕೂರು: ಪತ್ರಕರ್ತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ 25 ಲಕ್ಷ ರೂ.ಗಳ ಪ್ರತಿಭಾ ಪುರಸ್ಕಾರ ಮತ್ತು ತುಮಕೂರು ಮಹಾನಗರ ಪಾಲಿಕೆ ತುಮಕೂರು ನಗರ ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಿ ರಾಷ್ಟದಲ್ಲೇ ಮೊದಲ ಬಾರಿಗೆ ಇಂತಹ ಸೌಲಭ್ಯ ಒದಗಿಸಿದ ಗೌರವ ತುಮಕೂರು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯಿತು.
ತುಮಕೂರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಗಳು ಹಾಗೂ ರಾಜ್ಯದ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಪತ್ರಕರ್ತರ ಸಂಕಷ್ಟಗಳನ್ನು ಅರಿತು, ಪತ್ರಕರ್ತರ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬ ದೃಷ್ಠಿಯಿಂದ ತುಮಕೂರು ಜಿಲ್ಲೆಯ ಪತ್ರಕರ್ತರ ಮಕ್ಕಳಿಗೆ 25 ಲಕ್ಷ ರೂ.ಗಳನ್ನು ಡಾ.ಜಿ ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರುಗಳು ಉನ್ನತ ಶಿಕ್ಷಣ ಪ್ರೋತ್ಸಾಧನ ನೀಡಿ, ಮಕ್ಕಳನ್ನು ಪ್ರೊತ್ಸಾಹಿಸಿರುವುದು ತುಮಕೂರು ಜಿಲ್ಲೆಯಲ್ಲಿ ಇತಿಹಾಸವಾಗಿ ಉಳಿಯಲಿದೆ.

ಬಡತನ ಮತ್ತು ಹಸಿವು ಎರಡನ್ನೂ ಅರಿತಿರುವ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು, ಪತ್ರಕರ್ತರು ಆರ್ಥಿಕವಾಗಿ ಸಬಲರಾಗಿರದ ಕಾರಣ ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಒತ್ತಾಸೆ ಮತ್ತು ತುಡಿತದಿಂದ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 25 ಲಕ್ಷ ರೂ.ಗಳನ್ನು ನೀಡಿರುವುದು ಸಾಮಾನ್ಯವಲ್ಲ, ಇದಲ್ಲದೆ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿ ವರ್ಷ 25 ಲಕ್ಷ ನೀಡುವುದಾಗಿ ಡಾ.ಜಿ.ಪರಮೇಶ್ವರ್ ಘೋಷಿಸಿ ಹೃದಯ ವೈಶಾಲ್ಯತೆ ಮೆರದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.
ಡಾ.ಜಿ ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರುಗಳು ನೀಡುತ್ತಿರುವ ಪ್ರತಿಭಾ ಪುರಸ್ಕಾರದ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಸಂಘವೂ ವಿನಿಯೋಗಿಸಬೇಕು, ಮಕ್ಕಳ ವಿದ್ಯಾಭ್ಯಾಸಕ್ಕಲ್ಲದೆ ಬೇರೆಯದಕ್ಕೆ ವಿನಿಯೋಗಿಸಿದರೆ ಡಾ.ಜಿ.ಪರಮೇಶ್ವರ್ ಅವರ ಆಶಯಕ್ಕೆ ವಿರುದ್ಧವಾಗಿರುತ್ತದೆ, ಈ ಹಣವನ್ನು ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬುದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಮನದಾಳದ ತುಡಿತವನ್ನು ಸಂಘವೂ ಚಾಚು ತಪ್ಪದೆ ನಡೆದುಕೊಳ್ಳುವ ಜವಾಬ್ದಾರಿಯಾಗಿದ್ದು, ಆಗ ಮಾತ್ರ ಡಾ.ಜಿ.ಪರಮೇಶ್ವರ್ ಅವರು ಮಕ್ಕಳಿಗೆ ನೀಡಿದ ಪ್ರೋತ್ಸಾಹ ಧನಕ್ಕೆ ಗೌರವ, ಘನತೆ ಬರಲಿದೆ, ಸಂಘಕ್ಕೂ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಕಾರ್ಯವಾಗಲಿದೆ.

ಡಾ.ಜಿ.ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರುಗಳು ಪತ್ರಕರ್ತರ ಮಕ್ಕಳ ವಿದ್ಯಾಭಾಸಕ್ಕಾಗಿ ಮಾಡಿರುವ ಸಹಾಯ ಹಸ್ತದಿಂದ ಅವರುಗಳಿಗೆ “ಶಿಕ್ಷಣ ದಾನಶೂರ ಕರ್ಣ”ರು ಎಂದು ಹೇಳಿದರೂ ತಪ್ಪಾಗಲಾರದು, ಏಕೆಂದರೆ ಈಗಿನ ದಿನಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪೋಷಕರು ಆರ್ಥಿಕ ಸಂಕಷ್ಟವನ್ನು ತಮ್ಮ ಬೆನ್ನಿಗೆ ತೇಲುವ ಗುಂಡಿನಂತೆ ಕಟ್ಟಿಕೊಂಡೇ ಜೀವನದ ಹೊಳೆಯಲ್ಲಿ ತೇಲುತ್ತಿರುವ ಸಂಕಷ್ಟದ ದಿನದಲ್ಲಿ ಮಕ್ಕಳ ಶಿಕ್ಷಣಕ್ಕೆ ಡಾ ಜಿ ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರುಗಳ ಆರ್ಥಿಕ ಸಹಾಯ ನೀಡಿರುವುದರಿಂದ ಅವರನ್ನು “ಶಿಕ್ಷಣದ ದಾನಶೂರ ಕರ್ಣ”ರು ಎಂದು ಕರೆಯುವುದರಲ್ಲಿ ತಪ್ಪಿಲ್ಲ.
ಈ ವರ್ಷ ಪ್ರೋತ್ಸಾಹ ಧನ ಪಡೆದ ಪತ್ರಕರ್ತರ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆದು ಡಾ.ಜಿ.ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರುಗಳ ಬಳಿ ಹೋಗಿ ನೀವು ನೀಡಿದ ಪ್ರತಿಭಾ ಪ್ರತ್ಸಾಹದಿಂದ ನಾನು ಉನ್ನತ ವಿದ್ಯಾಭ್ಯಾಸ ಮಾಡಿ, ಉನ್ನತ ಸ್ಥಾನ ಪಡೆದಿದ್ದೇನೆ ಎಂದು ಹೇಳಿದರೆ ಅಂದು ಅವರು ನೀಡಿದ ಪ್ರೋತ್ಸಾಹಕ್ಕೆ ಸಾರ್ಥಕತೆ ದೊರೆಯಲಿದೆ.
ಡಾ.ಜಿ. ಪರಮೇಶ್ವರ್ ಅವರ ಪತ್ನಿಯವರಾದ ಶ್ರೀಮತಿ ಕನ್ನಿಕಾ ಪರಮೇಶ್ವರ್ ಅವರು ಈ ಕಾರ್ಯಕ್ಕೆ ಬೆಂಬಲವಾಗಿ ನಿಂತಿರುವುದು ಪತ್ರಕರ್ತರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಸುಧಾರಕರು ಮತ್ತು ಸಾಮಾಜಿಕ ಬದ್ಧತೆಯನ್ನು ಅರಿತವರಾಗಿ ಉತ್ತಮ ಪ್ರಜೆಗಳಾಗಲಿ ಎಂಬ ಆಶಯವಾಗಿದೆ. ನಿಜಕ್ಕೂ ಶ್ರೀಮತಿ ಕನ್ನಿಕಾ ಪರಮೇಶ್ವರ್ ಅವರ ಕಾರ್ಯವನ್ನು ಎಲ್ಲಾ ಪತ್ರಕರ್ತರು ಸ್ಮರಿಸಬೇಕಾದಂತಹ ಕಾರ್ಯವಾಗಿದೆ.
ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ನಾನು ಕಳೆದ ಬಾರಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ 25 ಲಕ್ಷ ಕೊಡುತ್ತೇನೆಂದು ಘೋಷಣೆ ಮಾಡಿದ್ದೆ. ಅದರಂತೆ ಅನುದಾನ ನೀಡಿದ್ದು, ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಮಟ್ಟದ ಪರೀಕ್ಷೆಗಳನ್ನು ಗೆದ್ದು ಸಮಾಜದ ಉತ್ತಮ ಅಧಿಕಾರಿಗಳಾಗಿ ಪರಿವರ್ತನೆಯಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಮಹಾನಗರ ಪಾಲಿಕೆಯೊಂದು ಇಡೀ ದೇಶದಲ್ಲಿ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸುವ ಮೂಲಕ ಮಾದರಿಯಾಗಿ ಗುರುತಿಸಿಕೊಂಡಿದ್ದು, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಬಿ.ವಿ.ಆಶ್ವಿಜ ಅವರ ಕಾರ್ಯ ಶ್ಲಾಘನೀಯವಾದದ್ದು.
ಜುಲೈ 28 ರಂದು ತುಮಕೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರತಿಭಾನ್ವಿತ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರ ನಿವಾಸಿ ಪತ್ರಕರ್ತರಿಗೆ ಕ್ಯಾಶ್ ಲೆಸ್ ಆರೋಗ್ಯ ವಿಮೆ ಕಾರ್ಡ್ ವಿತರಣೆ ಸಮಾರಂಭದಲ್ಲಿ ಪ್ರತಿಭಾನ್ವಿತ ಪತ್ರಕರ್ತರ 35 ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ಪ್ರೋತ್ಸಾಧನ ಮತ್ತು 35 ಜನ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಆರೋಗ್ಯವಿಮೆ ಕಾರ್ಡ್ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿಳಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಭಾಗವಹಿಸಿದ್ದರು, ಕಾರ್ಯನಿರತ ಪತ್ರಕರ್ತರ ಜಿಲ್ಲಾಧ್ಯಕ್ಷರಾದ ಚಿ.ನಿ.ಪುರುಷೋತ್ತಮ್ ಅಧ್ಯಕ್ಷತೆ, ವಹಿಸಿದ್ದರು, ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಎ.ರಘುರಾಮ್, ಐಡಬ್ಲುಜೆಎಸ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಯ್ಯ, ಎಸ್ಪಿ ಅಶೋಕ್ ಕೆ.ವಿ. ಉಪಸ್ಥಿತಿತರಿದ್ದರು.
-ವರದಿ: ಮೈತ್ರಿನ್ಯೂಸ್