ತುಮಕೂರು ಡಾ.ಜಿ.ಪರಮೇಶ್ವರ್, ಹಾಸನಕ್ಕೆ ಕೆ.ಎನ್.ರಾಜಣ್ಣ ಉಸ್ತುವಾರಿ,ಕುಣಿಗಲ್ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಏನಾಗಬಹುದು?

ತುಮಕೂರು : ಕರ್ನಾಟಕ ಉಸ್ತುವಾರಿ ಜಿಲ್ಲಾ ಸಚಿವರ ನೇಮಕವಾಗಿದೆ. ನಮಗೆ ಇಂತಹ ಜಿಲ್ಲೆಯೆ ಬೇಕು ಎಂದು ಕೆಲ ಜಿಲ್ಲೆಗಳಿಗೆ ಪಟ್ಟು ಹಿಡಿದ್ದ ಸಚಿವರಿಗೆ ಬೇರೊಂದು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಪಡೆದುಕೊಳ್ಳುವಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಡಾ.ಜಿ ಪರಮೇಶ್ವರ್ ತಮ್ಮ ಸ್ವಂತ ಜಿಲ್ಲೆ ತುಮಕೂರು ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆ ಉಸ್ತುವಾರಿ ಬೇಕೆಂದು ಪಟ್ಟು ಹಿಡಿದಿದ್ದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಪಕ್ಕದ ಜಿಲ್ಲೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಕೆ.ಎನ್.ರಾಜಣ್ಣನವರು ಹಾಸನ ಜಿಲ್ಲೆ ಉಸ್ತುವಾರಿಯಾಗಿರುವುದರಿಂದ ಹೇಮಾವತಿ ನೀರನ್ನು ಬಿಡುಗಡೆ ಮಾಡಿಸುವ ಜವಾಬ್ದಾರಿ ಹೆಚ್ಚಿದ್ದು, ಹೇಮಾವತಿ ನೀರು ನಮ್ಮ ಸ್ವಂತದ್ದು ಎಂದು ಬೇಕಾಬಿಟ್ಟಿ ನೀರು ಬಿಡುಗಡೆ ಮಾಡಿಸುತ್ತಿದ್ದ ಹಾಸನ ಜಿಲ್ಲೆಯ ರಾಜಕಾರಣಿಗಳಿಗೆ ಈ ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿಯವರು ಜಿಲ್ಲೆಗೆ 24ಟಿಎಂಸಿ ನೀರು ಹರಿಸಿ ಪ್ರತಿ ಕೆರೆಗಳನ್ನು ತುಂಬಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಈಗ ಕೆ.ಎನ್.ರಾಜಣ್ಣನವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಯಾವ ರೀತಿ ತಮ್ಮ ನಿಲುವನ್ನು ತೆಗೆದುಕೊಳ್ಳಲಿದ್ದಾರೆ ಎಂಬುದರ ಮೇಲೆ ಹೇಮಾವತಿ ನೀರು ಹಂಚಿಕೆ ನಿಂತಿದೆ.
ಇದಲ್ಲದೆ ಕುಣಿಗಲ್‍ಗೆ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗುವ ಎಲ್ಲಾ ಸಾಧ್ಯತೆಗಳಿದ್ದು, ಇದಕ್ಕೆ ಕೆ.ಎನ್.ರಾಜಣ್ಣನವರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದರ ಮೇಲೂ ಹೇಮಾವತಿ ಕುಣಿಗಲ್, ಬೆಂಗಳೂರು ಗ್ರಾಮಾಂತರಕ್ಕೆ ಹರಿಯುವ ಭವಿಷ್ಯ ನಿಂತಿದೆ.

ರಾಜ್ಯ ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಡಿಕೆ ಶಿವಕುಮಾರ್: ಬೆಂಗಳೂರು ನಗರ
ಡಾ.ಜಿ ಪರಮೇಶ್ವರ: ತುಮಕೂರು
ಕೆ ಎನ್ ರಾಜಣ್ಣ: ಹಾಸನ
ಹೆಚ್.ಕೆ. ಪಾಟೀಲ: ಗದಗ
ಕೆಹೆಚ್ ಮನಿಯಪ್ಪ: ಬೆಂಗಳೂರು ಗ್ರಾಮಾಂತರ
ಎಂಬಿ ಪಾಟೀಲ್ : ವಿಜಯಪುರ
ಹೆಚ್ಸಿ ಮಹದೇಪವ್ವ: ಮೈಸೂರು
ಪ್ರಿಯಾಂಕ್ ಖರ್ಗೆ: ಕಲಬುರಗಿ
ರಾಮಲಿಂಗ ರೆಡ್ಡಿ – ರಾಮನಗರ
ಲಕ್ಷ್ಮೀ ಹೆಬ್ಬಾಳಕರ್ – ಉಡುಪಿ
ದಿನೇಶ್ ಗಂಡುರಾವ್ – ದಕ್ಷಿಣ ಕನ್ನಡ
ಜಾರ್ಜ್: ಚಿಕ್ಕಮಗಳೂರು
ಜಮೀರ್: ವಿಜಯನಗರ
ಮಧು ಬಂಗಾರಪ್ಪ: ಶಿವಮೊಗ್ಗ
ಶಿವಾನಂದ ಪಾಟೀಲ್ – ಹಾವೇರಿ
ಬೋಸರಾಜು: ಕೊಡಗು
ಬೈರತಿ ಸುರೇಶ್: ಕೋಲಾರ
ಶರಣ್ ಪ್ರಕಾಶ ಪಾಟೀಲ್ : ರಾಯಚೂರು
ಕೆ ವೆಂಕಟೇಶ: ಚಾಮರಾಜನಗರ
ಸತೀಶ್ ಜಾರಕಿಹೊಳಿ: ಬೆಳಗಾವಿ
ಬೈರತಿ ಸುರೇಶ್: ಕೋಲಾರ
ಶರಣಬಸಪ್ಪ ದರ್ಶನಾಪುರ:ಯಾದಗಿರಿ
ಈಶ್ವರ್ ಖಂಡ್ರೆ: ಬೀದರ್
ಎನ್ ಚೆಲುವರಾಯಸ್ವಾಮಿ: ಮಂಡ್ಯ
ಎಸ್ಎಸ್ ಮಲ್ಲಿಕಾರ್ಜುನ: ದಾವಣಗೆರೆ
ಸಂತೋμï ಎಸ್ ಲಾಜ್: ಧಾರವಾಡ
ಶಣಪ್ರಕಾಶ ಪಾಟೀಲ: ರಾಯಚೂರು
ಆರ್ಬಿ ತಿಮ್ಮಾಪೂರ: ಬಾಗಲಕೋಟೆ
ಶಿವರಾಜ ತಂಗಡಗಿ: ಕೊಪ್ಪಳ
ಡಿ ಸುಧಾಕರ್ :ಚಿತ್ರದುರ್ಗ
ನಾಗೇಂದ್ರ: ಬಳ್ಳಾರಿ
ಮಂಕಾಳ್ ವೈದ್ಯ:ಉತ್ತರ ಕನ್ನಡ
ಎಂಸಿ ಸುಧಾಕರ್: ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *