ಅ.17ರಂದು ಡಾ||ಎಂ.ಆರ್.ಹುಲಿನಾಯ್ಕರ್ ರವರ ಇಂಗ್ಲೀಷ್ ಆವೃತ್ತಿಯ ಆತ್ಮಕಥನ ಲೋಕಾರ್ಪಣೆ

ತುಮಕೂರು : ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಡಾ|| ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನದ ಇಂಗ್ಲೀಷ್ ಆವೃತ್ತಿ ‘Reminiscences and Reflections’  ಅಕ್ಟೋಬರ್ 17ರಂದು ಮಧ್ಯಾಹ್ನ 2.15ಕ್ಕೆ ಶ್ರೀದೇವಿ ಶಿಕ್ಷಣ ಸಮುದಾಯ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಆಡಿಟರ್ ಆಂಜಿನಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಕನ್ನಡದಲ್ಲಿ ಡಾ||ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನ ಲೋಕಾರ್ಪಣೆಗೊಂಡಿತ್ತು, ಈಗ ಇಂಗೀಷ್‍ನಲ್ಲಿ ಆತ್ಮಕಥನವನ್ನು ವಿ.ಕೃಷ್ಣ ಅವರು ಬರೆದಿರುವ ಅನುವಾದದ ಕೃತಿ ಬಿಡಿಗಡೆಯಾಗಲಿದೆ ಎಂದು ತಿಳಿಸಿದರು.

ಆತ್ಮಕಥನ ಬಿಡುಗಡೆ ಸಮಾರಂಭವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉದ್ಘಾಟಿಸಲಿದ್ದು, ಪುಸ್ತಕವನ್ನು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲರು ಬಿಡುಗಡೆ ಮಾಡಲಿದ್ದಾರೆ, ಮೊದಲ ಕೃತಿಯನ್ನು ಮಾಜಿ ರಾಜ್ಯಸಭಾ ಸದಸ್ಯ ಡಾ.ಪದ್ಮಶ್ರೀ ವಿಕಾಸ ಮಹಾತ್ಮೆ ಸ್ವೀಕರಿಸಲಿದ್ದಾರೆ, ಆತ್ಮಕಥನ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ.ಸಿ.ನಾಗಣ್ಣ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಸಂಸದ ಜಿ.ಎಸ್.ಬಸವರಾಜು ಅವರು ಶುಭ ನುಡಿಗಳನ್ನಾಡಲಿದ್ದು, ವಿಧಾನ ಪರಿಷತ್ ಸದಸ್ಯರಾದ ಎಫ್.ಎಚ್.ಜಕ್ಕಪ್ಪನವರು ಪುಸ್ತಕ ಅನುವಾದಕರಾದ ವಿ.ಕೃಷ್ಣ ಅವರನ್ನು ಸನ್ಮಾನಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ನಿವೃತ್ತ ಉಪಕುಲಪತಿ ಡಾ.ಬಿ.ತಿಮ್ಮೇಗೌಡ ಭಾಗವಹಿಸಲಿದ್ದು, ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಅಧ್ಯಕ್ಷತೆ ವಹಿಸಲಿದ್ದು, ಡಾ.ಎಂ.ಆರ್.ಹುಲಿನಾಯ್ಕರ್ ಉಪಸ್ಥಿತರಿರುವರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಎಸ್.ನಾಗಣ್ಣ, ಲಕ್ಮಣದಾಸ್, ಗೋವಿಂದರಾಜು, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ರುದ್ರಪ್ಪ, ಮಾಜಿ ಮೇಯರ್ ಕೃಷ್ಣಪ್ಪ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *