ಅಧ್ಯಯನ ಕೇಂದ್ರದ ಕನ್ನಡ ಪ್ರಾಧ್ಯಾಪಕರಾಗಿ ರುವ ಶಾಸನ ತಜ್ಣರಾಗಿರುವ ಡಾ.ಪರಮಶಿವಮೂರ್ತಿ ಅವರನ್ನು ರಾಜ್ಯ ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಇವರು ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಕುಲಪತಿಗಳಾಗಿ ನೇಮಕವಾಗಿರುವುದಕ್ಕೆ ಅವರ ಶಿಷ್ಯವೃಂದ ಅಭಿನಂದಿಸಿದೆ.
ಒಳ್ಳೆಯ ಸಹೃದಯತನಕ್ಕೆ ಫಲವೆಂಬಂತೆ ಶಾಸನ,ಸಂಸ್ಕೃತಿ ತಜ್ಞರಾದ, ಪ್ರೊ.ಡಿ.ವಿ.ಪರಮಶಿವಮೂರ್ತಿ ಸರ್ ಅವರು ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಸಾಹಿತ್ಯ ಸಂಸ್ಕೃತಿಗಳ ದೇಶೀ-ಮಾರ್ಗ ಸಮನ್ವಯದ ಅಧ್ಯಯನಶೀಲ ಹೊಸತನ ಇವರ ಅವಧಿಯಲ್ಲಿ ನಡೆಯಲಿ ಎಂಬುದರ ಸದಾಶಯ ನಮ್ಮದು ಎಂದು
ಡಾ.ನಿಂಗಪ್ಪ ಮುದೇನೂರು, ಮಲ್ಲಿಕಾರ್ಜುನ ಎಂ.ಟಿ. ಮಚ್ಚಂದ್ರ, ಗೋವಿಂದರಾಜು ಕಲ್ಲೂರ ಅಭಿನಂದನೆಗಳನ್ನು ತಿಳಿಸಿದ್ದಾರೆ.