ತುಮಕೂರು ಐಎಂಎ ಅಧ್ಯಕ್ಷರಾಗಿ ಡಾ. ರಂಗಸ್ವಾಮಿ.ಹೆಚ್.ವಿ. ಅವಿರೋಧ ಆಯ್ಕೆ

ತುಮಕೂರು, ಸೆ. 27-ತುಮಕೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ||ಹೆಚ್.ವಿ.ರಂಗಸ್ವಾಮಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಡಾ||ಜಿ.ಮಹೇಶ್ ಮತ್ತು ಡಾ|| ಪ್ರದೀಪ್ ಪ್ರಭಾಕರ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಐಎಂಎ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಂಬಂಧ ಚರ್ಚೆಗಳು ನಡೆದು ಅಂತಿಮವಾಗಿ ಅವಿರೋಧ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.

ಸರ್ವ ಸದಸ್ಯರ ತೀರ್ಮಾನದಂತೆ 2023-24 ನೇ ಸಾಲಿಗೆ ತುಮಕೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ|| ಹೆಚ್.ವಿ. ರಂಗಸ್ವಾಮಿ, ಕಾರ್ಯದರ್ಶಿಯಾಗಿ ಡಾ. ಮಹೇಶ್ ಜಿ., ಖಜಾಂಚಿಯಾಗಿ ಡಾ||ಪ್ರದೀಪ್ ಪ್ರಭಾಕರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತುಮಕೂರು ಐಎಂಎ ಘಟಕಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ನಿರ್ಗಮಿತ ಅಧ್ಯಕ್ಷ ಡಾ. ಚಂದ್ರಶೇಖರ್ ಸೇರಿದಂತೆ ಎಲ್ಲ ಸದಸ್ಯರುಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *