ಡಾ.ತೇಜಸಿ ಅವರಿಗೆ ರಾಷ್ಟ್ರಪತಿಗಳ ಚಿನ್ನದಪದಕದ ಗೌರವ

ತುಮಕೂರು: ನಗರಕ್ಕೆ ಸಮೀಪದಬೆಂಗಳೂರು-ಪೂಣೆ ಹೆದ್ದಾರಿಯಲ್ಲಿನ ನೆಲಮಂಗಲದ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಕೀಲು ಮೂಳೆ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ತೇಜಸ್ವಿ ಅವರು ಡಿಪ್ಲೊಮೇಟ್ ಆಫ್ ನ್ಯಾಶನಲ್ ಬೋರ್ಡ್ (DNB) ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದಕ್ಕಾಗಿ ರಾಷ್ಟ್ರಪತಿಗಳಿಂದ ಚಿನ್ನದ ಪದಕದಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಶೈಕ್ಷಣಿಕ ಸಂಸ್ಥೆಯಾದ ನ್ಯಾಷನಲ್ ಬೋರ್ಡ್‍ಆಫ್‍ಎಕ್ಸಾಮಿನೇಷನ್ಸ್ ತಮ್ಮ ಸ್ನಾತಕೋತ್ತರ ಅಥವಾ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ನಡೆಸುವ ಪರೀಕ್ಷೆಯಾಗಿದೆ. ಕಳೆದ ಡಿಸೆಂಬರ್ 2022 ರಲ್ಲಿ DNB ಆರ್ಥೋಪೆಡಿಕ್ಸ್ ಪರೀಕ್ಷೆಯಲ್ಲಿ ಡಾ ತೇಜಸ್ವಿ ಅವರು ದೇಶದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ರಾಷ್ಟ್ರೀಯಮಟ್ಟದ ಚಿನ್ನದಪದಕವನ್ನು ಪಡೆದುಕೊಂಡಿದ್ದಾರೆ.

ನವದೆಹಲಿಯಲ್ಲಿ ಇತ್ತೀಚಿಗೆ ನೆಡದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮ ಅವರು, ಡಾ.ತೇಜಸಿ ಅವರಿಗೆ ಚಿನ್ನದ ಪದಕದ ಮತ್ತು ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಿದರು.

2019ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿಯೂ ಅಖಿಲ ಭಾರತ ಮಟ್ಟದಲ್ಲಿ 63 ರ್ಯಾಂಕ್‍ನ್ನು ಪಡೆದುಕೊಂಡಿದ್ದ ಡಾ ತೇಜಸ್ವಿಅವರು ನವದೆಹಲಿಯಲ್ಲಿನ ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ಸಫ್ದಜರ್ಂಗ್ ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿದ್ದಾರೆ. ನಂತರ ನವದೆಹಲಿಯ ಡಾ.ರಾಮ್‍ಮನೋಹರ್ ಲೋಹಿಯಾಆಸ್ಪತ್ರೆ ಸಿನಿಯರ್ ರೆಸಿಡೆನ್ಸಿ ಪೂರೈಸಿದರು. ಆನಂತರ ಫಿಫಾಫುಟ್ಬಾಲ್ ಮೆಡಿಸಿನ್‍ನಲ್ಲಿ ಡಿಪ್ಲೊಮಾಪೂರ್ಣಗೊಳಿಸಿದ್ದಾರೆ.

ಡಾ. ತೇಜಸ್ವಿ ಅವರು ಮೂಲತ: ಹಾಸನ ಜಿಲ್ಲೆಯ ಬೇಲೂರಿನವರಾಗಿದ್ದು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದವೈದ್ಯಕೀಯ ಪದವಿ ಪಡೆದಿದ್ದಾರೆ. ಕಳೆದ ಡಿಸೆಂಬರ್ 2023 ರಿಂದ ಟಿ.ಬೇಗೂರಿನ ಸಿದ್ದಾರ್ಥ ವೈದ್ಯಕೀಯಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಭಿನಂದನೆ: ಶ್ರೀ ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಡಾ.ತೇಜಸ್ವಿಯವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಯನ್ನು ಮಾಡಿಎಂದು ಹಾರೈಸಿದ್ದಾರೆ. ವೈದ್ಯರ ಸಾಧನೆ ಬಗ್ಗೆ ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವೀವೇಕ್ ವೀರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ದಿವಾಕರ್ ಮತ್ತು ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *