ಚಿತ್ರ ಬಿಡಿಸುವ ಸ್ಫರ್ಧೆ: ಮುರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆ,ಆಚಾರ್ಯ ವಿದ್ಯಾಪೀಠಕ್ಕೆ ಹೆಚ್ಚು ಪ್ರಶಸ್ತಿ

ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯನವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ಶಾಲಾ ಮಕ್ಕಳಿಗೆ ನಡೆದ 37 ನೇ ವರ್ಷದ “ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ”ಯ ಸಮಗ್ರ ಪ್ರಶಸ್ತಿಯನ್ನು ಮುರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆ ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಮುರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರೆ, ತುಮಕೂರು ನಗರದ ಆಚಾರ್ಯ ವಿದ್ಯಾಪೀಠ ಶಾಲೆ ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ವರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸಿತು. ಮಕ್ಕಳಲ್ಲಿರುವ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಹಿನ್ನೆಯಲ್ಲಿ ಸ್ವರ್ಧೆಯನ್ನು 1988ರಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ತುಮಕೂರು ಜಿಲ್ಲೆ ಮತ್ತು ನಗರದ 52 ಶಾಲೆಗಳಿಂದ ಸುಮಾರು 5469 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಚಿತ್ರ ಬಿಡಿಸುವ ಸ್ಪರ್ಧೆ 5 ವಿಭಾಗವಾರು ನಡೆದಿದ್ದು, ಅವುಗಳಲ್ಲಿ ವಿಜೇತರಾದವರ ವಿವರ ಇಂತಿದೆ.
ಎ ವಿಭಾಗದಲ್ಲಿ ನರ್ಸರಿಯಿಂದ ಯಕೆಜಿ:
ಪ್ರಥಮ- ಐರಾ ಹೂರೇನ್ ಖಾನ್, ಟೋಡ್ಲರ್ ಕ್ಯಾಸ್ಟೆಲ್ ಪೂರ್ವ ಪ್ರಾಥಮಿಕ ಶಾಲೆ.
ದ್ವೀತೀಯ-ಗಹನ್ ಅಚಿಂತ್ಯ ಟಿವಿಎಸ್ ಅಕಾಡೆಮಿ.
ತೃತೀಯ-ಜ್ಞಾನಿತಾ ಜಿ ಚೇತನ ವಿದ್ಯಾ ಮಂದಿರ ಮತ್ತು ಸಮಾಧಾನಕರ ಬಹುಮಾನವನ್ನು ಬೆನಕ ಕೌತುಬ.ಆರ್., (ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್) ಜುನೈನಾ ರಿಮ್ಶಾ (ಎಸ್ ಆರ್ ವಿದ್ಯಾ ಕೇಂದ್ರ ಶಾಲೆ) ಅವರು ಪಡೆದಿದ್ದಾರೆ.

ಬಿ ವಿಭಾಗದಲ್ಲಿ 1ನೇ ತರಗತಿಯಿಂದ 4ನೇ ತರಗತಿಯ ತನಕ:

ಪ್ರಥಮ -ಲಿಕಿತ್ ಗೌಡ ಎಸ್ ಎಸ್ ಜಿಆರ್ ಶಾಲೆ
ದ್ವೀತೀಯ -ಯುಕ್ತ ಸಿ ವಿ ಚೇತನ ವಿದ್ಯಾ ಮಂದಿರ
ತೃತೀಯ -ವರ್ಣ ದೀಪ್ತಾ ಟಿವಿಎಸ್ ಅಕಾಡೆಮಿ ಮತ್ತು ಮತ್ತು ಸಮಾಧಾನಕರ ಬಹುಮಾನವನ್ನು ಫಾತಿಮಾ ಜೋಹ್ರಾ (ವರಿನ್ ಇಂಟನ್ರ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್) ಹಾಗೂ ಧನ್ವಿತಾ ಎ ಯು (ಆಚಾರ್ಯ ವಿದ್ಯಾಪೀಠ ಶಾಲೆ) ಅವರು ಪಡೆದಿದ್ದಾರೆ.

ಸಿ ವಿಭಾಗದಲ್ಲಿ 5ನೇ ತರಗತಿಯಿಂದ 7ನೇ ತರಗತಿವರೆಗೆ:

ಪ್ರಥಮ-ಸನ್ನಿಧಿ ಕೆ ಎಸ್ -ವರಿನ್ ಇಂಟನ್ರ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್
ದ್ವೀತೀಯ-ಆಕಾಶ ಎಸ್ ಜಿ -ಮೊರಾರ್ಜಿ ದೇಸಾಯಿ ವಸತಿ ಶಾಲೆ
ತೃತೀಯ -ಭಾಷಿಣಿ ಎಸ್- ಆಚಾರ್ಯ ವಿದ್ಯಾಪೀಠ ಶಾಲೆ ಮತ್ತು ಮತ್ತು ಸಮಾಧಾನಕರ ಬಹುಮಾನವನ್ನು
ಮೊಹಮ್ಮದ್ ಜೊಹೈಬ್ (ಫೆÇ್ಲೀರಾ ಇಂಗ್ಲಿμï ಶಾಲೆ) ಮತ್ತು ಸ್ನೇಹಾ ಟಿ ಎನ್ (ಚೇತನ ವಿದ್ಯಾ ಮಂದಿರ) ಅವರು ಪಡೆದಿದ್ದಾರೆ.
ಡಿ. ವಿಭಾಗದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ವರ್ಗ:

ಪ್ರಥಮ -ಮದನ್ ಎನ್ ಪಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡ
ದ್ವೀತೀಯ-ಚೇತನ್ ಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡ
ತೃತೀಯ -ನಮ್ರತಾ ಎಸ್ ಅಂಕಿತ ಪ್ರಾಥಮಿಕ ಮತ್ತು ಪ್ರೌಢಶಾಲೆ
ಕೌಶಿಕ್ ನಾಯಕ ಯು (ವರಿನ್ ಇಂಟನ್ರ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ) ಹಾಗೂ
ಗೌತಮ್ ಟಿ ಪಿ (ಆಚಾರ್ಯ ವಿದ್ಯಾಪೀಠ ಶಾಲೆ) ಅವರುಗಳು ಕ್ರಮವಾಗಿ ಸಮಧಾನಕರ ಬಹುಮಾನವಾಗಿ ಪಡೆದುಕೊಂಡರು.
ಹಾಗೂ
ಇ ವಿಭಾಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು (ಎಸ್‍ಎಸ್‍ಐಟಿ ವಿದ್ಯಾರ್ಥಿಗಳಿಗೆ ಮಾತ್ರ)

ಪ್ರಥಮ-ಉಮೇಶ್ ನಾಯ್ಕ್ ಎಸ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್
ದ್ವೀತೀಯ-ಚಂದ್ರಶೇಖರ್ ಎಸ್ ಡೇಟಾ ಸೈನ್ಸ್
ತೃತೀಯ -ತೇಜಸ್ವಿನಿ ಎಸ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ತೃಪ್ತಿ ಆರ್ (ಇ&ಸಿ ವಿಭಾಗ) ಮತ್ತು ತನ್ಮಯಿ ಆರ್ (ಸೈಬರ್ ಭದ್ರತೆ) ಅವರುಗಳು ಕ್ರಮವಾಗಿ ಸಮಧಾನಕರ ಬಹುಮಾನವಾಗಿ ಪಡೆದುಕೊಂಡರು.

ಇದೇ ಮೊದಲ ಬಾರಿಗೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಧ್ಯಾಪಕರಿಗೆ ಏರ್ಪಡಿಸಲಾದ ಸ್ವರ್ಧೆಯಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸಂದ್ಯ ವಿ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಶಾಲೆಗಳ ಒರ್ವ ವಿದ್ಯಾರ್ಥಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ಹಾಗೂ ಫಲಕ ನೀಡಲಾಯಿತು.

ಚಿಣ್ಣರಲ್ಲೂ ಕಲಾಸಿರಿವಂತಿಕೆ:
ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಕಾಶ ಅವರು ಚಿಣ್ಣರಲ್ಲೂ ಚಿತ್ರ ಕಲಾಸಿರಿವಂತಿಕೆ ಇರುತ್ತದೆ, ಅವರಲ್ಲಿರುವ ಕಲೆಗಳನ್ನು ಅನಾವರಣ ಮಾಡಲು ಪೋಷಕರು ಮುಂದಾಗಿರಬೇಕು ಎಂದರು.

ಇದು ಕೇವಲ ಚಿತ್ರ ಬಿಡಿಸುವುದಲ್ಲ. ಬದಲಿಗೆ ಸಾಮಾಜಿಕ ವಿಷಯಗಳು ಮತ್ತು ಆಧ್ಯಾತ್ಮಿಕ ವಿಷಯಗಳಂತಹ ವೈವಿಧ್ಯಮಯ ಚಿತ್ರಕಲೆಗಳ ಮೂಲಕ ಮನಸ್ಸಿನ ತುಡಿತವನ್ನು ಅಭಿವ್ಯಕ್ತಿಪಡಿಸುವ ಒಂದು ದೊಡ್ಡ ಕಲಾ ಲೋಕವನ್ನು ಮಕ್ಕಳು ಕಟ್ಟಿಕೊಡುವ ಮೂಲಕ ಸ್ವರ್ಧೆಯಲ್ಲಿಗಮನ ಸೆಲೆದಿದ್ದಾರೆ ಎಂದು ಅವರು ಹೇಳಿದರು.
ಡೀನ್ (ಶೈಕ್ಷಣಿಕ) ಡಾ.ರೇಣುಕಾ ಲತಾ ಮಾತನಾಡಿ, ಕಲೆಯ ಮೂಲಕ ವ್ಯಕ್ತಪಡಿಸುವ ಸೃಜನಾತ್ಮಕ ಶಕ್ತಿ, ಭಾವನೆಗಳು ಮತ್ತು ಸಂಸ್ಕøತಿಯನ್ನು ಸೂಚಿಸುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ ಹಾಗೂ ಅವರ ಜೀವನಕ್ಕೆ ಪೂರಕ ಅಂಶವಾಗಿದೆ ಎಂದರು.

ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಹಾಗೂ ಸ್ಪರ್ಧೆಯ ಸಂಚಾಲಕರಾದ ಡಾ.ಸಹನಾ ಟಿ.ಎಸ್. ಸಹ ಸಂಯೋಜಕರಾದ ಡಾ.ಶಿವರಾಜು ಜಿ.ಡಿ, ಡೀನ್ ಡಾ.ರಾಜಾನಾಯಕ್, ಸ್ಪರ್ಧೆಯ ಆಯೋಜನಾ ವಿವಿಧ ಸಮಿತಿ ಸಂಚಾಲಕರಾದ ಡಾ.ಸೌಜನ್ಯ, ಡಾ.ಪ್ರದೀಪ್, ಡಾ.ಸುಪ್ರಿಯಾ,ಡಾ.ಅಕ್ಷಯ್, ಪ್ರೊ. ಪ್ರವೀಣ್, ಸಿವಿಲ್ ವಿಭಾಗದ ಅಧ್ಯಾಪಕರು ಮತ್ತು ವಿವಿಧ ಶಾಲೆಗಳ ಶಿಕ್ಷಕರು, ಬಹುಮಾನ ವಿಜೇತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಗುರುಪ್ರಸಾದ ಕಾರ್ಯಕ್ರಮ ನಿರೂಪಿಸಿದರೆ ಡಾ. ಉಷಾ ಶಿವರಾಜ್ ಅವರು ವರದಿ ಮಂಡಿಸಿದರು.

Leave a Reply

Your email address will not be published. Required fields are marked *