ತುಮಕೂರು : ಕೃಷಿ ಹೊಂಡದಲ್ಲಿ ಸ್ಪೋಟಕ ಸಿಡಿಸಿ ಜನರಲ್ಲಿ ಭಯ ಮೂಡಿಸಿದ್ದ ದ್ರೋಣ್ ಪ್ರತಾಪನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಪೋಟಕವೊಂದು ಕೃಷಿ ಹೊಂಡದಲ್ಲಿ ಸಿಡಿಸಿರುವುದು ಜಾಲತಾಳದಲ್ಲಿ ಹರಿದಾಡುತ್ತಿರುವುದನ್ನು ಪೊಲೀಸರು ಪರೀಶೀಲಿಸಿದಾಗ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿ ಜನಕಲೋಟಿ ಶ್ರೀ ರಾಯರ ಬೃಂದಾವನ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸ್ಪೋಟಕವನ್ನು ದ್ರೋಣ್ ಪ್ರತಾಪ್ ಸಿಡಿಸಿ ಜನರಲ್ಲಿ ಭಯ ಹುಟ್ಟಿಸಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಾಪನನ್ನು ಪೊಲೀಸರು ಬಂಧಿಸಿದ್ದಾರೆ.
ದ್ರೋಣ್ ಪ್ರತಾಪನನ್ನು 3 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಈ ಪ್ರಕರಣದ ಆರೋಪಿ ಪತ್ತೆಗಾಗಿ ಸೆನ್ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ, ಶಿರಾ ನಗರ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ, ಎಸ್ಪಿ ಕಚೇರಿಯ ಇನ್ಸ್ಪೆಕ್ಟರ್ ಅವಿನಾಶ್ ರವರು ಶ್ರಮಿಸಿರುತ್ತಾರೆ.