ಒಳಮೀಸಲಾತಿ ಹೋರಾಟಗಾರ ಪಾರ್ಥಸಾರಥಿ ನಿಧನ- ಡಿ ಎಸ್ ಎಸ್ ಗೆ ತುಂಬಲಾರದ ನಷ್ಟ  

ದಲಿತ ಸಂಘರ್ಷ ಸಮಿತಿಯ ನಾಯಕ, ಒಳಮೀಸಲಾತಿಯ ಹೋರಾಟಗಾರ ಪಾರ್ಥಸಾರಥಿ (58ವರ್ಷ) ಅವರು ಜುಲೈ 8ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ನಿವಾಸಿ ಪಾರ್ಥಸಾರಥಿ ತುಮಕೂರಿನಲ್ಲೇ ನೆಲೆಸಿದ್ದರು. ಶೋಷಿತ ಸಮುದಾಯದ ಚಿಂತಕರು,

ಒಳಮೀಸಲಾತಿ ಚಳವಳಿಯ ಪ್ರಖರ ಚಿಂತಕರೂ ಆಗಿದ್ದ ಪಾರ್ಥಸಾರಥಿ ತುಮಕೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಾರ್ಥಸಾರಥಿ ನಿಧನಕ್ಕೆ ಹಲವು ದಲಿತ ನಾಯಕರು ಕಂಬನಿ ಮಿಡಿದಿದ್ದಾರೆ. ಕರ್ನಾಟಕದಲ್ಲಿ ಒಳಮೀಸಲಾತಿಯ ತಾರ್ಕಿಕ ಅಂತ್ಯಕ್ಕೆ ಕಾನೂನು ಹೋರಾಟವೇ ಮಾರ್ಗ ಎಂದು ಕಳೆದ 15 ವರ್ಷದಿಂದ ಸುಪ್ರೀಂಕೋರ್ಟಿನಲ್ಲಿ ಕಾನೂನು ಹೋರಾಟವನ್ನ ಮುನ್ನೆಡೆಸುತ್ತಿದ್ದರು ಪಾರ್ಥಸಾರಥಿ.

ಒಳಮೀಸಲಾತಿಯ ಚಳವಳಿಗಾರರಿಗೆ ಉತ್ತಮ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಾ ನಮ್ಮ ಸ್ವ ಸಾಮರ್ಥ್ಯದ ಮೇಲೆ ನ್ಯಾಯಾಂಗದಲ್ಲಿ ಪ್ರತಿಪಾದಿಸೋಣ ಎಂದು ಹೇಳಿ ಸ್ವತಃ ತಾವೇ ತಮ್ಮೊಂದಿಗಿರುವ ಚಿಂತಕರನ್ನು ಕಟ್ಟಿಕೊಂಡು ಸುಪ್ರೀಂಕೋರ್ಟ್ ನಲ್ಲಿಯೂ ದಾವೆ ದಾಖಲಿಸಿದ್ದು ಇತಿಹಾಸದಲ್ಲಿ ಉಳಿಯಲಿದ ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಸ್ಮರಿಸಿದ್ದಾರೆ. ಬದುಕಿನ ಪಯಣ ಮುಗಿಸಿದ ಪಾರ್ಥಸಾರಥಿ.. ಪಾರ್ಥ ಅವರು ವಿಶಿಷ್ಟ ಮಾಹಿತಿಗಳ ಕಣಜ.

ಅವರಲ್ಲಿರುವ ಸಂಗ್ರಹವನ್ನು ಯಾರಿಗೂ ಕೊಟ್ಟಿಲ್ಲವೆನಿಸುತ್ತದೆ. ಹೋರಾಟ, ಸಮುದಾಯದ ಬಗೆಗಿನ ಕಾಳಜಿ, ಚರ್ಚೆಗಳು ನಮ್ಮನ್ನು ತಲ್ಲಣಗೊಳಿಸುತ್ತಿದ್ದವು. ಕಳೆದ ಒಂದು ತಿಂಗಳ ಹಿಂದೆ ತಮಿಳುನಾಡಿಗೆ ಹೋಗೋಣ ಬಾ ರವಿ ಅಲ್ಲಿನ ರಾಜನ ಬಗೆಗೆ ನೀನು ಅಧ್ಯಯನ ಮಾಡುವಂತೆ ಅಂದಿದ್ದರು. ರಜ ಸಿಗಲಿ ಸರ್ ಒಂದು ವಾರ ಅಲ್ಲೇ ಇದ್ದು ಮಾಡೋಣ ಅಂದಿದ್ದೆ.

ಅದು ಅವರಲ್ಲಿನ ಅಂಕಿಅಂಶ, ಚಾರಿತ್ರಿಕ ವಿವರಗಳು, ಒಳಮೀಸಲಾತಿ ಬಗೆಗೆ ಇದ್ದ ಕ್ಲಾರಿಟಿ.. ಈಗಲೂ ಗುನುಗುವಂತೆ ಮಾಡುತ್ತಿವೆ ಎಂದು ವಿಮರ್ಶಕ ರವಿಕುಮಾರ್ ನಿ.ಹ. ನೆನಪಿಸಿಕೊಂಡಿದ್ದಾರೆ.

ಪಾರ್ಥಸಾರಥಿ ಯವರ ಪತ್ನಿ ಸುಗಂದಧಿನಿಯವರು   ತುಮಕೂರು ಹೇಮಾವತಿ ಕಚೇರಿ ಯಲ್ಲಿ ಎಇಇ ಆಗಿದ್ದಾರೆ. ಮಗಳು ಅಸ್ಮುಖಿಯನ್ನು ಅಗಲಿದ್ದಾರೆ.

ಪಾರ್ಥಸಾರಥಿ ಯವರು ಡಿಎಸ್ಎಸ್ ನ ತುಮಕೂರು ಸಂಚಾಲಕರಾದ ಕುಂದೂರು ತಿಮ್ಮಯ್ಯನವರ ಚಿಕ್ಕಮ್ಮ ಗೌರಮ್ಮನವರ ಮಗನಾಗಿದ್ದು, ಚಿತ್ರದುರ್ಗದ ಚನ್ನಪ್ಪ ಮತ್ತು ಗೌರಮ್ಮನವರ ಮಗನಾಗಿದ್ದು, ಇವರ ನಿಧನದಿಂದ ಒಳಮೀಸಲಾತಿಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡಂತಾಗಿದೆ.

ಕೆ.ಬಿ.ಕ್ರಾಸ್ ಸಮೀಪದ ಕುಂದೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *