ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ: ಪ್ರೊ. ಡಿ. ಎಸ್. ಚೌಹಾಣ್

ತುಮಕೂರು: ನೀವು ಇತರರೊಂದಿಗೆ ನಡೆಸುವ ಸಂಹನವು ನಿಮ್ಮ ಜ್ಞಾನವನ್ನು ತಾನಾಗಿಯೇ ಹೆಚ್ಚಿಸುತ್ತದೆ. ಎಲ್ಲ ಸಮಸ್ಯೆಗಳಿಗೆ ಶಿಕ್ಷಣವೇ ಸರಿಯಾದ ಪರಿಹಾರವಾಗಿದೆ ಎಂದು ಮಥುರಾದ ಜಿ.ಎಲ್.ಎ. ವಿಶ್ವವಿದ್ಯಾಲಯದ ಸಮಕುಲಾಧಿಪತಿ ಪ್ರೊ. ಡಿ.ಎಸ್. ಚೌಹಾಣ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಮತ್ತು ಕೌಶಲ್ಯ ಅಭಿವೃದ್ಧಿ ಕೋಶದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಸುಭಾಶ್ಚಂದ್ರ ಬೋಸರ ಮೇಲೆ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಭಾವ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಅವರು ಬದುಕುಳಿದಿದ್ದು ಕೆಲವೇ ವರ್ಷಗಳು ಆದರೆ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಅವರು ಅನಂತ ಜ್ಞಾನವೇ ಆಗಿದ್ದರು ಎಂದ ಪ್ರೊ. ಚೌಹಾಣ್, ಸ್ವರ್ಗ ಆಕಾಶದಲ್ಲಿಲ್ಲ, ಮುಂಬರುವ ಯುವ ಪೀಳಿಗೆಯಲ್ಲಿದೆ ಎಂಬ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಂಡರು.

ಇಡೀ ವಿಶ್ವವೇ ವಿವೇಕಾನಂದರ ವಿಚಾರಗಳನ್ನು ಅಳವಡಿಸಿಕೊಂಡಾಗ ಶಾಂತಿ ಸಹಬಾಳ್ವೆ ನೆಲೆಯೂರುತ್ತದೆ. ನಮ್ಮ ಮಾತೃಭೂಮಿ ಸೇವೆ ಮಾಡಲು ಸಿಗುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ. ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸುಭಾಶ್ ಚಂದ್ರ ಬೋಸ್ ತಮಗೆ ದೊರಕಿದ್ದ ಐಸಿಎಸ್ ಹುದ್ದೆಯನ್ನು ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು ಎಂದರು.

ಬೋಸರ ಗುರಿ ಅಖಂಡ ಭಾರತವನ್ನು ಒಗ್ಗೂಡಿಸುವದಾಗಿತ್ತು, ತಮ್ಮ ಉಗ್ರ ಹೋರಾಟದ ಶೈಲಿಯಿಂದ ಬ್ರಿಟಿಷರಲ್ಲಿ ಭಯವನ್ನು ಹುಟ್ಟು ಹಾಕಿದ ಮಹಾನ್ ವ್ಯಕ್ತಿ, ಅವರು ತಮ್ಮ ಸ್ವಾರ್ಥದ ಬಗ್ಗೆ ಎಂದೂ ಯೋಚಿಸದೆ ದೇಶಕ್ಕೋಸ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶಪ್ರೇಮಿ ಎಂದರು.

ಆಂಧ್ರ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಶಾಖೆಯ ನಿವೃತ್ತ ನಿರ್ದೇಶಕ ಪೆÇ್ರ. ಜಿ. ಎಸ್. ಮೂರ್ತಿ ಮಾತನಾಡಿ,ಒಂದು ಕಲ್ಲು ಹೇಗೆ ತನ್ನ ಅನಗತ್ಯ ಅಂಶಗಳನ್ನು ಕಳೆದು ಶಿಲೆಯಾಗುವುದೋ ಹಾಗೆಯೇ ಒಬ್ಬ ವ್ಯಕ್ತಿ ಅನಗತ್ಯ ವಿಚಾರಗಳನ್ನು ತೊರೆದು ಉತ್ತಮ ವ್ಯಕ್ತಿ ಆಗಬೇಕು ಎಂದರು.

ಭಾರತದ ಮೇಲೆ ಪಾಶ್ಚಿಮಾತ್ಯ ಸಂಸ್ಕøತಿಯ ಹೇರಿಕೆಯಾದರೂ ಕೂಡ ನಮ್ಮ ಸಂಸ್ಕೃತಿ ಇತಿಹಾಸ ಇಂದಿಗೂ ಜೀವಂತವಾಗಿದೆ. ಭಾರತದ ಬಗ್ಗೆ ಪ್ರೀತಿ ಬೆಳಿಸಿಕೊಳ್ಳಬೇಕಾದರೆ ಕನಿಷ್ಠಪಕ್ಷ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಆತ್ಮಚರಿತೆಯನ್ನಾದರೂ ಓದಬೇಕು. ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ ಲಕ್ಷಾಂತರ ಹೋರಾಟಗಾರರ ಬಲಿದಾನದ ಫಲ ಎಂದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಹಿಂದಿನ ಶತಮಾನದಲ್ಲಿ ಹುಟ್ಟಿದ ಕೆಲವು ದೇಶಪ್ರೇಮಿಗಳು ದೇಶಕ್ಕೋಸ್ಕರ ಪ್ರಾಣ ಕೊಟ್ಟರು, ಆದರೆ ಈಗ ಪ್ರಾಣವನ್ನು ಅನಗತ್ಯ ಮೂರ್ಖ ವಿಚಾರಗಳಿಗೆ ಕೊಡುತ್ತಿದ್ದಾರೆ ಎಂದರು.

ಉತ್ತಮ ಜನರೊಂದಿಗೆ ಸೇರಿ ಉತ್ತಮ ಸಮಾಜ ರೂಪಿಸಬೇಕು, ಮಹನೀಯರನ್ನು ಇಂದಿಗೂ ನೆನಪಿಸಿಕೊಳ್ಳುತ್ತಿರುವುದು ಅವರು ದೇಶಕ್ಕೆ ಕೊಟ್ಟ ಕೊಡುಗೆಗಳಿಂದಾಗಿ. ಭವಿಷ್ಯದ ಭಾರತವು ಯುವಜನತೆಯ ಕೈಯಲ್ಲಿದೆ, ಅದನ್ನು ಕಾಪಾಡುವ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.

ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನ ಕುಮಾರ್ ಕೆ., ವಿವೇಕಾನಂದ ಪೀಠದ ಸಂಯೋಜಕ ಡಾ. ಚೇತನ್ ಪ್ರತಾಪ್ ಕೆ.ಎನ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *