ಸ.ನೌ.ಸಂಘ : 26 ಸೀಟಿಗೆ 62 ಮಂದಿ ಪೈಪೋಟಿ

ತುಮಕೂರು; ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶರುಗಳ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಶೇ.60ರಷ್ಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿವಿಧ ಇಲಾಖೆಗಳ  50 ಮತಕ್ಷೇತ್ರಗಳಿಂದ ಒಟ್ಟು 66 ಸ್ಥಾನಗಳಿಗೆ ಚುನಾವಣೆ ಫೋಷಣೆಯಾಗಿತ್ತು. ಈ ಪೈಕಿ ಪೊಲೀಸ್, ಗೃಹರಕ್ಷಕ ಮತ್ತು ಅಗ್ನಿಶಾಮಕ ಇಲಾಖೆಗಳ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತಾದರೂ ಪೂರಕ ದಾಖಲೆ ಸರಿಯಾಗಿ ಸಲ್ಲಿಸದ ಕಾರಣ, ಅದು ತಿರಸ್ಕೃತವಾಗಿದೆ. 65 ಸ್ಥಾನಗಳ ಪೈಕಿ 39 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿಕೆ 26 ಸ್ಥಾನಕ್ಕಾಗಿ 62ಮಂದಿ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಗೋವಿಂದರೆಡ್ಡಿ ತಿಳಿಸಿದ್ದಾರೆ. ಇದೇ 16ರಂದು ಮತದಾನ ನಡೆಯುತ್ತಿದ್ದು, ಇದಕ್ಕಾಗಿ ನಗರದಲ್ಲಿ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಆಸ್ಪತ್ರೆಗಳು ಇತರೆ ಸಿಬ್ಬಂದಿಗಳು ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ತೊಂದರೆಯಾಗದಿರಲೆಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದ ಮತದಸನಕ್ಕಾಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಂದು ಮತಗಟ್ಟೆ ಹಾಗೂ ಉಳಿದ ಕ್ಷೇತ್ರಗಳ ಮತದಾನಕ್ಕಾಗಿ ಗುಂಚಿಚೌಕ ಮತ್ತು ಕೋಟೆ ಆಂಜನೇಯ ದೇವಸ್ಥಾನದ ಬಳಿಯಿರುವ ಪ್ರಾಥಮಿಕ ಶಾಲೆಗಳಲ್ಲಿ ತಲಾ 4ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನವು ನ.16ರ ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ನಡೆಯಲಿದ್ದು ಆ ನಂತರ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *