ತುಮಕೂರು : ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆಯು ತಾಯಂದಿರ ದಿನಾಚರಣೆ ಪ್ರಯುಕ್ತ ಪ್ರೇಮಾ ಮಲ್ಲಣ್ಣ ದತ್ತಿ ಪ್ರಬಂಧ ಸ್ಪರ್ಧೆ ಆಯೋಜಿಸಿರುತ್ತದೆ. ಪ್ರಬಂಧದ ವಿಷಯವು “ಮಾತೃತ್ವ, ನನ್ನ ಅನುಭವ” ಆಗಿರುತ್ತದೆ.
ಸ್ಪರ್ಧೆಗೆ ಕಳಿಸುವ ಪ್ರಬಂಧವು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು,ಸ್ವರಚಿತವಾಗಿರಬೇಕು,ಪ್ರಬಂಧವು ಐದು ಪುಟಗಳ ಮಿತಿಯಲ್ಲಿರಬೇಕು,ಪ್ರಬಂಧಕಾರರ ಹೆಸರು, ವಿಳಾಸ ಮೊಬೈಲ್ ಸಂಖ್ಯೆ ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಿರಬೇಕು,ಒಬ್ಬರು ಒಂದೇ ಪ್ರಬಂಧ ಕಳಿಸಬೇಕು,ತೀರ್ಪುಗಾರರ ತೀರ್ಮಾನವೇ ಅಂತಿಮ, ಸದರಿ ಪ್ರಬಂಧ ಸ್ಪರ್ಧೆಯು ತುಮಕೂರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಾಗಿರುತ್ತದೆ ಬಂಧಗಳನ್ನು ಕಳುಹಿಸಲು ತುಮಕೂರು ಮೇ 20 ಕೊನೆಯ ದಿನಾಂಕವಾಗಿರುತ್ತದೆ.
ಪ್ರಬಂಧಗಳನ್ನು ಸಿ.ಎಲ್.ಸುನಂದಮ್ಮ,ಗುರು ಕೃಪಾ, ಡೋರ್ ನಂ: 1/101,ಮೊದಲನೇ ಮಹಡಿ, 2 ‘ಬಿ’ ಕ್ರಾಸ್.
ಸಿ.ಎಸ್.ಐ ಲೇ .ಔಟ್, ತುಮಕೂರು- 572102 ಇಲ್ಲಿಗೆ ಕಳಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9845999625 ಸಂಪರ್ಕಿಸಲು ಕೋರಿದೆ.